ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಾಡಿ ಸಮಸ್ಯೆ ಪರಿಹಾರಕ್ಕೆ ಮನವಿ

Vishwanath S
Updated On : 27 Dec 2013, 12:38 pm

ಗುಲ್ಬರ್ಗ/ಶಹಾಬಾದ್: ವಾಡಿ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು, ರಸ್ತೆ, ಒಳಚರಂಡಿ, ಸಾರ್ವಜನಿಕ ಶೌಚಾಲಯ, ನೈರ್ಮಲ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಆಗ್ರಹಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಕಮ್ಯೂನಿಸ್ಟ್ ಪಕ್ಷದ ವತಿಯಿಂದ ಶಾಸಕ ಪ್ರಿಯಾಂಕ್ ಖರ್ಗೆಯವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣಕ್ಕೆ ಆಗಮಿಸಿ ಶಾಸಕರಿಗೆ ಪಕ್ಷದ ಕಾರ್ಯದರ್ಶಿ ವೀರಭದ್ರಪ್ಪ ಆರ್.ಕೆ., ಸದಸ್ಯರಾದ ರಾಘವೇಂದ್ರ ಅಲ್ಲಿಪುರ ನೇತೃತ್ವದಲ್ಲಿ ಭೇಟಿ ಮಾಡಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಸರ್ಕಾರಿ ಕಾಲೇಜು ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಶಾಸಕರು, ಒಳಚರಂಡಿ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಕೊಂಚೂರ, ಬಳವಡಗಿ, ವಾಡಿ ರಾವೂರ, ರಸ್ತೆ ನಿರ್ಮಾಣ ಕಾರ್ಯ ಒಂದು ವಾರದೊಳಗೆ ಪ್ರಾರಂಭಿಸಲಾಗುವುದು, ಸರ್ಕಾರಿ ಪದವಿ ಕಾಲೇಜು ಮಂಜೂರಾಗಿದ್ದು, 2014-15ನೇ ಸಾಲಿನಲ್ಲಿ ತರಗತಿ ಪ್ರಾರಂಭಿಸಲಾಗುವುದು. ಉಳಿದ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಲ್ಲಿನಾಥ ಹುಂಡೇಕಲ್, ವಿಠ್ಠಲ್ ರಾಠೋಡ, ಶರಣು ಹೆರೂರ, ಯೇಶಪ್ಪ ಜಿ.ಕೆ, ರಾಹುಲ್ ರಾಜನಕೇರಾ, ಶ್ರೀಕಾಂತ ಜಾಧವ, ಶಿವುಕುಮಾರ್ ಅಂದೋಲಾ ಇದ್ದರು.
'ಆತ್ಮವಿಶ್ವಾಸ, ನಾಯಕತ್ವ ಗುಣ ಬೆಳೆಸಿಕೊಳ್ಳಿ'
ಆಳಂದ: ಶಿಕ್ಷಣ ಜತೆಗೆ ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಮಾದನಹಿಪ್ಪರಗಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಾಪಣ್ಣ ಗಂಜಗೇರಿ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ 2013- 14ನೇ ಸಾಲಿನ ರಾಷ್ಟ್ರಿಯ ಸೇವಾ ಯೋಜನೆ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಸ್ಥಳೀಯ ಜೀವನ ಜ್ಯೋತಿ ಡಿಇಡಿ ಕಾಲೇಜು ಪ್ರಾಚಾರ್ಯ ಕಲ್ಯಾಣಿ ಎಸ್. ಸಾವಳಗಿ ಮಾತನಾಡಿ, ಎನ್‌ಎಸ್‌ಎಸ್ ಶಿಬಿರ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ರಾಷ್ಟ್ರೀಯತೆ ಪರಸ್ಪರ ಐಕ್ಯತೆ ತಂದುಕೊಡುತ್ತದೆ ಎಂದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಶ್ರೀಶೈಲ್ ಮಾಳಗೆ ಮಾತನಾಡಿದರು. ಬಾಲಕಿಯರ ಕಾಲೇಜಿನ ಹಿರಿಯ ಉಪನ್ಯಾಸಕ ಅಶೋಕಕುಮಾರ್ ಮಾಳಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಬಸವರಾಜ ಮುಲಗೆ ತೀರ್ಥ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೋನಾಲಿ, ಆಶಾ, ಕಾಂಚನಾ ವಿನಯಾ, ವರ್ಷಾ ಮತ್ತು ವಿಜಯಲಕ್ಷ್ಮೀ ಅವರು ಶಿಬಿರದ ಅನುಭವ ಹಂಚಿಕೊಂಡರು.
ವಾಣಿಶ್ರೀ ಸ್ವಾಗತಿಸಿದರು. ನಿರ್ಮಲಾ ಗುಂಡಪ್ಪ ಪ್ರಾರ್ಥನೆ ಮಾಡಿದರು.
ಶಹಾಬಾದ್ ಆಸ್ಪತ್ರೆಗೆ ಹೊಸ ಆ್ಯಂಬುಲೆನ್ಸ್
ಗುಲ್ಬರ್ಗ/ಶಹಾಬಾದ್: ನಗರದ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಹೊಸ ಆ್ಯಂಬುಲೆನ್ಸ್ ಆಸ್ಪತ್ರೆಗೆ ಬಂದಿದ್ದರಿಂದ ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಎಂ. ರಶೀದ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸಂತೋಷಕುಮಾರ್ ಇಂಗಿನಶೆಟ್ಟಿಯವರು ಪೂಜೆ ಸಲ್ಲಿಸಿದರು.
ಶಾಸಕ ಜಿ. ರಾಮಕೃಷ್ಣರ ಸತತ ಪ್ರಯತ್ನದಿಂದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಆ್ಯಂಬುಲೆನ್ಸ್  ನಗರಕ್ಕೆ ಬಂದಿದ್ದು, ನಗರ ಬೆಳೆದಂತೆ ಆಸ್ಪತ್ರೆಗೆ ಜನ ಬರುವುದು ಹೆಚ್ಚಾಗಿದ್ದು, ಹೆರಿಗೆ, ಅಪಘಾತದ ಸಂದರ್ಭದಲ್ಲಿ ಇದರ ಅವಶ್ಯಕತೆ ಮುಖ್ಯ ಎಂದರು.
ಎಂ.ಎ. ಜಲೀಲ್, ಮೃತ್ಯುಂಜಯ ಸ್ವಾಮಿ ಹಿರೇಮಠ, ಸಾಹೇಬಗೌಡ ಬೊಗುಂಡಿ, ಸೈಯದ್ ಜಹೀರ್, ಹಾಶಮಖಾನ್, ಜಾವೇದ್, ಮಹಿಬೂಬ್ ಅಪ್ಸರ್, ಶಂಕರ ಕೊಟನೂರ, ಸೈಯದ್ ವಾಹೀದ್, ಮುಕ್ತಾರ, ನಕುಮಾರ್ ಚವ್ಹಾಣ, ಸೂರ್ಯಕಾಂತ ಕೋಬಾಳ ಇತರರು ಪಾಲ್ಗೊಂಡಿದ್ದರು.
29ರಂದು ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ
ಗುಲ್ಬರ್ಗ: ಗುಲ್ಬರ್ಗ ವಿಭಾಗ ಮಟ್ಟದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳ ಶೈಕ್ಷಣಿಕ ಕಾರ್ಯಕಾರಿಣಿ ಸಭೆ ಡಿ.29 ರಂದು ಬೆಳಗ್ಗೆ 10.30ಕ್ಕೆ ನಗರದ ರೋಟರಿ ಕ್ಲಬ್ ಪ್ರೌಢಶಾಲೆಯಲ್ಲಿ ಕರೆಯಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ರಾಧಾಕೃಷ್ಣ ಮದನಕರ್ ಸಭೆ ಉದ್ಘಾಟಿಸಲಿದ್ದಾರೆ.
ರಾಜ್ಯ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ಮಲ್ಲನಗೌಡರ
ಪಾಲ್ಗೊಳ್ಳಲಿದ್ದಾರೆ. ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರು ಭಾಗವಹಿಸಲು ಅಧ್ಯಕ್ಷ ವಿಶ್ವನಾಥ ಎಸ್.ಕಟ್ಟಿಮನಿ ಕೋರಿದ್ದಾರೆ.
ಜ.8ರಂದು ಸಹಕಾರ ಸಂಘದ ಚುನಾವಣೆ
ಗುಲ್ಬರ್ಗ: ತಾಲೂಕಿನ ಸಿಂದಗಿ(ಬಿ)ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಐದು ಸಹಕಾರಿ ವರ್ಷಗಳ ಅವಧಿಗಾಗಿ ಬರುವ ಜ.8ರಂದು ಚುನಾವಣೆ ನಡೆಯಲಿದೆ. ಒಟ್ಟು 10 ಸ್ಥಾನಗಳ ಚುನಾವಣೆಗೆ ಸ್ಪರ್ಧಿಸುವವರು  ಜ.1ರೊಳಗಾಗಿ ನಾಮಪತ್ರ ಸಲ್ಲಿಸಬೇಕು. ಜ.2ರಂದು ಸಹಕಾರ ಸಂಘದ ಕಾರ್ಯಾಲಯದಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯಲಿದೆ ಮತ್ತು ಅರ್ಹ ಉಮೇದುವಾರರ ಯಾದಿ ಪ್ರಕಟಣೆಯಾಗಲಿದೆ. ಜ.3ರಂದು ಸ್ಪರ್ಧಾರ್ಥಿಗಳಿಂದ ಉಮೇದುವಾರಿಕೆ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಅಂದು ಸಂಜೆ ಅರ್ಹ ಸ್ಪರ್ಧಾರ್ಥಿಗಳ ಯಾದಿ ಪ್ರಕಟಣೆಯಾಗಲಿದೆ ಮತ್ತು ಚಿಹ್ನೆ ನೀಡಲಾಗುವುದು. ಜ.5ರಂದು ಚಿಹ್ನೆಗಳೊಂದಿಗೆ ಅರ್ಹ ಸ್ಪರ್ಧಾರ್ಥಿಗಳ ಯಾದಿ ಪ್ರಕಟಿಸಲಾಗುವುದು. ಜ.8ರಂದು ಬೆ.9ರಿಂದ ಸಂಜೆ 4ರವರೆಗೆ ಸಹಕಾರ ಸಂಘದ ಕಾರ್ಯಾಲಯದಲ್ಲಿ ಮತದಾನ ನಡೆಯಲಿದೆ. ಅಂದೇ ಮತಗಳ ಎಣಿಕೆ ನಡೆದು, ಫಲಿತಾಂಶ ಪ್ರಕಟಣೆಗೊಳ್ಳಲಿದೆ ಎಂದು ಸಹಕಾರಿ ಸಂಘಗಳ ನಿರೀಕ್ಷಕರು ತಿಳಿಸಿದ್ದಾರೆ.
ಅಂಗವಿಕಲರದಿನಾಚರಣೆ
ಜೇವರ್ಗಿ: ತಾಲೂಕಿನ ಇಜೇರಿ ಗ್ರಾಮದಲ್ಲಿ ಬರ್ಡ್ಸ್- ಹಿಲ್ ಸಂಸ್ಥೆ ಹಾಗೂ ಸಿಬಿಆರ್ ಯೋಜನೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಆಚರಿಸಲಾಯಿತು. ಎಂ.ಆರ್. ಡಬ್ಲೂ ನಾನಾಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸಿಂಡಿಕೇಟ್ ಬ್ಯಾಂಕಿನ ಅಧಿಕಾರಿ ಆನಂದ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.  ಸಂಸ್ಥೆಯ ನಿರ್ದೇಶಕ ಬ್ರದರ್ ಥಾಮಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಾರ್ವತಿ ನಿರೂಪಿಸಿದರು. ಸಂಸ್ಥೆಯ ಸಂಯೋಜಕ ಚಂದ್ರಕಾತ ಗುರುಪಾದಗೋಳ ಪ್ರಾಸ್ಥಾವಿಕ ಮಾತನಾಡಿದರು. ಅಂಜನಾ ವಂದಿಸಿದರು.
ಸಿಂದಗಿ: ಸಿಆರ್‌ಸಿ ಮಟ್ಟ ಕಲಿಕೋತ್ಸವ
ಗುಲ್ಬರ್ಗ: ಸಿಂದಗಿ(ಬಿ) ಗ್ರಾಮದಲ್ಲಿ ಇತ್ತೀಚೆಗೆ ಭೀಮಳ್ಳಿ ಸಿಆರ್‌ಸಿ ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ದತ್ತಪ್ಪ ತಳವಾರ ಕಾರ್ಯಕ್ರಮ ಉದ್ಘಾಟಿಸಿದರು. ಸಿ.ಜಿ. ಹಳ್ಳದ್, ವಿಠ್ಠಲ್ ವಗ್ಗನ್, ಎಚ್.ವೀರಭದ್ರಪ್ಪ, ರಮೇಶ ಚವ್ಹಾಣ, ಈಶ್ವರಗೌಡ ಪಾಟೀಲ್, ಮಹೇಶ ಮಳ್ಳಿ, ಕರಬಸಯ್ಯ ಮಠ, ಜಗನ್ನಾಥ, ದೇವಿಂದ್ರ ಗಣಮುಖಿ, ಶಿವಾ, ಮರೆಪ್ಪ, ಎಸ್.ಚಾವುಸ್, ಅಹ್ಮದ್, ಹಣಮಂತ, ಈರಣ್ಣ, ಕುಪೇಂದ್ರ, ಬಾಬುರಾವ ದುಧನಿ, ಸಂತೋಷ, ಭಾರತಿ ಅಟ್ಟೂರ್, ನಿಷ್ಕಲೇಶಯ್ಯ ಮಠಪತಿ, ಬಾಬುರಾವ ವೈಜಾಪುರ, ಶಿವಾನಂದ, ಅರುಣ, ರಾಮು ಚವ್ಹಾಣ, ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.
ಹೊಸೂರ ಶಾಲೆಯಲ್ಲಿ..: ಚಿತ್ತಾಪುರ ತಾಲೂಕಿನ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾತನೂರ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಸಮಾರಂಭ ಜರುಗಿತು. ಎಸ್‌ಡಿಎಂಸಿ ಅಧ್ಯಕ್ಷ ಯಂಕಪ್ಪ ಬಾನರ್ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕ ವೀರಸಂಗಪ್ಪ ಸುಲೇಗಾಂವ, ರಾಜಶೇಖರರೆಡ್ಡಿ ಜಾಕನಹಳ್ಳಿ, ಈಶ್ವರಪ್ಪ ಜಕಾತಿ, ಚಂದ್ರಪ್ಪ ಬಾನರ್,  ಕ್ಲಸ್ಟರ್ ಮಟ್ಟದ 9 ಶಾಲೆಯ ಮಕ್ಕಳು, ಗ್ರಾಮ ಪಂಚಾಯಿತಿ ಸದಸ್ಯರು,  ಗ್ರಾಮಸ್ಥರು ಭಾಗವಹಿಸಿದ್ದರು. ಶುಭಾ ಸ್ವಾಗತಿಸಿದರು. ಸಾತನೂರ ಕ್ಲಸ್ಟರ್ ಸಿಆರ್‌ಸಿ ವಿಜಯಕುಮಾರ್ ಭಂಕಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯಗುರು ಹಾಜಿಸಾಬ್ ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ರುಕ್ಮವ್ವ ಕಾರ್ಯಕ್ರಮ ನಿರೂಪಿಸಿದರು. ಗುರುಲಿಂಗಪ್ಪ ವಂದಿಸಿದರು.
ವಚನ ಸಾಹಿತ್ಯ ಪರಿಷತ್ತಿಗೆ ನೇಮಕ
ಗುಲ್ಬರ್ಗ: ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಪ್ರೊ. ಶಿವರಾಜ ಪಾಟೀಲ್ ಆಯ್ಕೆಯಾಗಿದ್ದಾರೆ. ರಾಜ್ಯ ಕಾರ್ಯಕಾರಿಣಿಯಲ್ಲಿ ಪ್ರೊ. ಶಿವರಾಜ ಪಾಟೀಲ್ ಅವರನ್ನು ಗುಲ್ಬರ್ಗ ಜಿಲ್ಲಾಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಪರಿಷತ್ತಿನ ಮೈಸೂರು ರಾಜ್ಯಾಧ್ಯಕ್ಷ ರಾಮಕೃಷ್ಣಯ್ಯ, ಪ್ರ.ಕಾರ್ಯದರ್ಶಿ ಕೊಟ್ರೇಶ ತಿಳಿಸಿದ್ದಾರೆ.
ಸಮವಸ್ತ್ರ ವಿತರಣೆ
ಗುಲ್ಬರ್ಗ: ತಾಲೂಕಿನ ಶರಣ ಸಿರಸಗಿ ತಾಂಡಾದ ಶಾಲೆಯಲ್ಲಿ 1 ರಿಂದ 7ನೇ ತರಗತಿ ಮಕ್ಕಳಿಗೆ ಸರ್ಕಾರದಿಂದ ಸಮವಸ್ತ್ರ ವಿತರಣೆ ಮಾಡಲಾಯಿತು. ಈ ಶಾಲಾ ಆವರಣದಲ್ಲಿಯೇ ಅಂಗನವಾಡಿ ಕೇಂದ್ರ ಇದ್ದು, ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳ ಮನಸ್ಸಿಗೆ ನೋವು ಆಗುತ್ತೆ ಎಂದು ಭಾವಿಸಿ ಶಾಲೆಯ ಮುಖ್ಯಗುರುಗಳಾದ ಪ್ರೇಮಿಳಾ ಡಿಗ್ಗಿ ತಮ್ಮ ವೇತನದಲ್ಲಿ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು.
ಉಸ್ತುವಾರಿ ಸಚಿವರ ಪ್ರವಾಸ
ಗುಲ್ಬರ್ಗ: ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರು ಡಿ.28 ರಂದು ಬೆ.6.30ಕ್ಕೆ ನಗರಕ್ಕೆ ಆಗಮಿಸುವರು. ಬೆ.11 ರಿಂದ ಸಂಜೆ 6ರವರೆಗೆ ಸಾರ್ವಜನಿಕರ ಭೇಟಿ ಹಾಗೂ ಕುಂದು ಕೊರತೆಗಳ ವಿಚಾರಣೆ ಮತ್ತು ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾತ್ರಿ 9ಕ್ಕೆ ಬೆಂಗಳೂರು ಪ್ರಯಾಣಿಸುವರು.
ಡಿ.30 ರಂದು ಪುನಃ ಬೆ.6.30 ಗಂಟೆಗೆ ಗುಲ್ಬರ್ಗಕ್ಕೆ ಆಗಮಿಸಿ ಬೆ.10 ಗಂಟೆಗೆ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಯಲ್ಲಿ ಪಾಲ್ಗೊಂಡು ಮ.3ರಿಂದ 6 ಗಂಟೆಯವರೆಗೆ ಸಾರ್ವಜನಿಕರ ಭೇಟಿ ಹಾಗೂ ಕುಂದುಕೊರತೆ ವಿಚಾರಣೆ ಕೈಗೊಳ್ಳುವರು.
ಲೇವಾದೇವಿ  ನವೀಕರಣಕ್ಕೆ ಸೂಚನೆ
ಗುಲ್ಬರ್ಗ: ಉಪವಿಭಾಗದ ಸೇಡಂ, ಚಿತ್ತಾಪೂರ ಮತ್ತು ಚಿಂಚೋಳಿಗಳಲ್ಲಿರುವ ಎಲ್ಲ ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರು ಮತ್ತು ಗಿರವಿದಾರರು 2009 ರಿಂದ 2014ರ ಅವಧಿಗೆ ನೋಂದಣಿಯಾದ ಹಾಗೂ ನವೀಕರಣಗೊಂಡ ಹಣಕಾಸು ಸಂಸ್ಥೆಗಳ ನವೀಕರಣ ಅವಧಿ 31. 3. 2014ಕ್ಕೆ ಪೂರ್ಣಗೊಳ್ಳುತ್ತದೆ.
ಸದರಿ ಹಣಕಾಸು ಸಂಸ್ಥೆಗಳು 2014ರಿಂದ 19ರವರೆಗೆ ನವೀಕರಣಕ್ಕೆ ಕರ್ನಾಟಕ ಲೇವಾದೇವಿ ಕಾಯ್ದೆ 1965ರ ನಿಯಮ 5(2)ರನ್ವಯ 31.1.2014ರೊಳಗೆ ಲೈಸನ್ಸ್‌ನವೀಕರಿಸಿಕೊಳ್ಳುವಂತೆ
ಕೋರಲಾಗಿದೆ. ತಪ್ಪಿದಲ್ಲಿ ಕಲಂ(4)ರ ಪ್ರಕಾರ ದಂಡ ವಿಧಿಸಲಾಗುವುದೆಂದು ಸೇಡಂ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement