ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೌಕರಿಗೆ ಚಕ್ಕರ್, ಪ್ರತಿಭಟನೆಗೆ ಹಾಜರ್..

Vishwanath S
Updated On : 28 Dec 2013, 11:21 am

ಕ.ಪ್ರ. ವಾರ್ತೆ  ಗುಲ್ಬರ್ಗ/ಚಿತ್ತಾಪುರ  ಡಿ.27
ಸಂವಿಧಾನದ 371(ಜೆ) ವಿಧಿ ಪ್ರಕಾರ ಹೈ.ಕ. ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಬೇಕು, ಗುಲ್ಬರ್ಗ ನಗರವನ್ನು ಬಿ ನಗರವನ್ನಾಗಿ  ಘೋಷಿಸಬೇಕೆಂದು ಒತ್ತಾಯಿಸಿ ಗುಲ್ಬರ್ಗ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಸರ್ಕಾರಿ ನೌಕರರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಿ ಆಯಾ ತಹಸೀಲ್ದಾರರ ಮೂಲಕ ರಾಜ್ಯಪಾಲ, ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
 ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೆಂಗಟಿ ಅವರ ನೇತೃತ್ವದಲ್ಲಿ ನಗರದ ಇಂದಿರಾ ಭವನದಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಬೇಡಿಕೆಗಳು: ಸರ್ಕಾರಿ ನೌಕರರಿಗೆ ವೈದ್ಯಕೀಯ ಭತ್ಯೆ ಮತ್ತು ಶಿಕ್ಷಕರಿಗೆ ವಿಶೇಷ ಭತ್ಯೆ ನೀಡಬೇಕು, ಹೈ-ಕ ಸ್ಥಳೀಯ ಮೀಸಲಾತಿ ಯೋಜನೆ ಅಡಿಯಲ್ಲಿ ಸರ್ಕಾರಿ ನೌಕರರ ಬಡ್ತಿಗಾಗಿ ಎ ಮತ್ತು ಬಿ ದರ್ಜೆ ಹುದ್ದೆಗಳಲ್ಲಿ ಶೇ.75 ಸಿ ದರ್ಜೆ ಹುದ್ದೆಗಾಗಿ ಶೇ.80, ಡಿ ದರ್ಜೆ ನೌಕರರಿಗೆ ಶೇ.85 ಬಡ್ತಿ ಮೀಸಲಾತಿಯನ್ನು ಹಾಗೂ ಹೈ.ಕ. ಜನರಿಗೆ ರಾಜ್ಯದ ಇತರ ಭಾಗಗಳಲ್ಲಿ ಎಲ್ಲ ಸರ್ಕಾರಿ ಬಡ್ತಿಗಾಗಿ ಶೇ.8ರಷ್ಟು ಮೀಸಲಾತಿಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.
  ಪ್ರತಿಭಟನೆಯಲ್ಲಿ ಈರಣ್ಣಗೌಡ, ಚಂದ್ರಕಾಂತ ಏರಿ, ಸಿದ್ದಣ್ಣ ಕೋಲ್ಹಾರ, ವಿಜಯಕುಮಾರ್ ಹೆಬ್ಬಾಳಕರ್, ಅಂಬಾರಾಯ ವಾಡೇಕರ್, ಮಲ್ಲಣ್ಣ ಮಡಿವಾಳ, ಶರಣಬಸಪ್ಪ ಡಿ.ಪಾಟೀಲ್, ಆನಂದತೀರ್ಥ ಜೋಶಿ, ಈಶ್ವರಗೌಡ, ಸೂರ್ಯಕಾಂತ, ಗೋವಿಂದ ಚವ್ಹಾಣ, ಮಹ್ಮದ್ ಫೈಮುದ್ದೀನ್, ವಿಠ್ಠಲ್ ವಗ್ಗನ್ ಸೇರಿದಂತೆ ನೂರಾರು ನೌಕರರು ಭಾಗವಹಿಕಿದ್ದರು.
ಚಿತ್ತಾಪುರದಲ್ಲಿ..: ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶ್ರೀಮಂತ ಹೊಸ್ಮನಿ ನೇತೃತ್ವದಲ್ಲಿ ಅಂಬೇಡ್ಕರ್ ಚೌಕ್‌ನಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರರಿಗೆ ಸಲ್ಲಿಸಿದರು.
  ಅಹಿಂದ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ, ಪ್ರೌಢ ಶಾಲೆ ಶಿಕ್ಷಕರ ಸಂಘದ ಕಾರ್ಯದರ್ಶಿ ಶಿವಾನಂದ ಸ್ಥಾವರಮಠ, ಕಂದಾಯ ಇಲಾಖೆಯ ಮದುಸೂಧನ, ತೊಟಗಾರಿಕೆ ಇಲಾಖೆಯ ಜಗದೀಶ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಯ್ಯಣ್ಣ ಅಂಬರಖೇಡ, ಜಗದೀಶ ಗರ್ಜೆ, ಭಾಗಪ್ಪ ನವಲೆ, ಯಶ್ವವಂತರಾವ ಸೂರ್ಯವಂಶಿ, ರಾಜ್ಯ ಪರಿಷತ್ತು ಸದಸ್ಯ ನಾಗೇಂದ್ರಪ್ಪ ಕಾಶಿ, ಜಂಟಿ ಕಾರ್ಯದರ್ಶಿ ಬಸವರಾಜ ಬಳೊಂಡಗಿ, ಸದಾಶಿವ ಗುಂಡಗುರ್ತಿ, ಅಶೋಕಕುಮಾರ್, ಅಣಿವೀರಪ್ಪ ನಾಗೂರೆ, :,ತ್ರುರಾಠೋಡ, ಭಗವಾನ ದಂಡಗುಲಕರ್,  ಅಶೋಕ ಚಕ್ರವರ್ತಿ, ಶಂಕರ ಮಂಗಲಗಿ ಸೇರಿದಂತೆ ವಿವಿಧ ಇಲಾಖೆಯ ನೌಕರರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement