ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬೆಂಕಿ ಹಚ್ಚಿ ಮಹಿಳೆಯ ಕೊಲೆ

Vishwanath S
Updated On : 28 Dec 2013, 11:21 am

ಚಿಂಚೋಳಿ: ತಾಲೂಕಿನ ತುಮಕುಂಟಾ ಗ್ರಾಮದಲ್ಲಿ ಮಹಿಳೆಗೆ ಗಂಡ, ಅತ್ತೆ, ಮಾವ ಕಿರುಕುಳ ನೀಡಿ ಶೀಲ ಶಂಕಿಸಿ ಸೀಮೆಎಣ್ಣೆ ಮೈಮೇಲೆ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ನಡೆದಿದೆ ಎಂದು ಚಿಂಚೋಳಿ ಠಾಣೆ ಸಬ್ ಇನ್ಸ್‌ಪೆಕ್ಟರ್ ಶಿವಶಂಕರ ಸಾಹು ತಿಳಿಸಿದ್ದಾರೆ. ತುಮಕುಂಟಾ ಗ್ರಾಮದ ಸೋನಾಲಿ ಲಕ್ಷ್ಮಣ (22) ಮೃತ ಮಹಿಳೆ. ತುಮಕುಂಟಾ ಗ್ರಾಮದ ಲಕ್ಷ್ಮಣ ಬಕ್ಕಪ್ಪ ಎಂಬಾತನು ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಸೋನಾಲಿಯನ್ನು ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದನು. ಬುಧವಾರ ರಾತ್ರಿ ಗಂಡ ಲಕ್ಷ್ಮಣ ಮಾವ ಬಕ್ಕಪ್ಪ ಅತ್ತೆ ನರಸಮ್ಮ ಕೂಡಿಕೊಂಡು ಆಕೆಯ ಶೀಲ ಶಂಕಿಸಿ ಸೀಮೆಎಣ್ಣೆ ಸುರಿದ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಮೃತಳ ಚಿಕ್ಕಪ್ಪ ಸುನೀಲ್ ದೌಲತರಾವ ಸಿಂಧೆ ಲಾತೂರ ನೀಡಿದ ದೂರಿನ ಮೇರೆಗೆ ಮೃತಳ ಗಂಡ ಲಕ್ಷ್ಮಣ, ಬಕ್ಕಪ್ಪ, ನರಸಮ್ಮ ಮೂರು ಜನರನ್ನು ಬಂಧಿಸಲಾಗಿದೆ. ಪ್ರಕರಣವನ್ನು ಚಿಂಚೋಳಿ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಚಿಂಚೋಳಿ ಡಿವೈಎಸ್ಪಿ ರವಿ ಪಾಟೀಲ್, ಸಿಪಿಐ ಇಸ್ಮಾಯಿಲ್ ಶರೀಫ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಯುವತಿ ನಾಪತ್ತೆ
ಗುಲ್ಬರ್ಗ: ಚಿಂಚೋಳಿ ತಾಲೂಕಿನ ಚಿತ್ರಸಾಲ ಗ್ರಾಮದ ಯುವತಿ ಕಾಣೆಯಾಗಿರುವ ಕುರಿತು ಅವರ ಪಾಲಕರು ಮಿರಾಯಣ ಠಾಣೆಯಲ್ಲಿ ದೂರು ನೀಡಿದ್ದಾರೆ. 19 ವರ್ಷದ ಅಂಬಿಕಾ ತಂದೆ ಭೀಮಶಾ ಗರಪಳ್ಳಿ ಎಂಬ ಯುವತಿ ಡಿ.3ರಂದು ಹೊಲದ ಕೆಲಸಕ್ಕೆಂದು ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲ. ಮಹಿಬೂಬ್ ಸಾಬ್ ಎಂಬಾತ ಮಗಳನ್ನು ಕರೆದುಕೊಂಡು ಹೋಗಿರಬಹುದು ಎಂದು ಪಾಲಕರು ಶಂಕಿಸಿದ್ದಾರೆ. ಕೂಡಲೇ ಹುಡುಕಿ ಕೊಡಬೇಕೆಂದು ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.
ಸ್ಟೌ ಸ್ಫೋಟ: ಮಹಿಳೆ ಸಾವು
ಚಿಂಚೋಳಿ: ತಾಲೂಕಿನ ಸಲಗರ ಬಸಂತಪುರ ಗ್ರಾಮದಲ್ಲಿ ಅಡುಗೆ ಸ್ಟೌ ಸ್ಫೋಟಿಸಿದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.ಸಲಗರ ಬಸಂತಪುರ  ಗ್ರಾಮದ ಸಂಗೀತಾ ಗಂಡ ಸತೀಶರೆಡ್ಡಿ ಸೇರಿಕಾರ (33) ಮೃತ ಮಹಿಳೆ. ಬುಧವಾರ ಬೆಳಗ್ಗೆ ಅಡುಗೆ ಮಾಡಲು ಸ್ಟೌಗೆ ಬೆಂಕಿ ಹಚ್ಚುತ್ತಿರುವಾಗ ಒಮ್ಮಲೆ ಸ್ಫೋಟಗೊಂಡು ಮೈಗೆ ಬೆಂಕಿ ಹತ್ತಿ ಸುಟ್ಟ ಗಾಯದಿಂದ ಬಳಲುತ್ತಿದ್ದ ಆಕೆಯನ್ನು ಬೀದರ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾಳೆಂದು ಚಿಂಚೋಳಿ ಎಎಸ್‌ಐ ಸುಭಾಶಚಂದ್ರ ಬಿರಾದಾರ ತಿಳಿಸಿದ್ದಾರೆ. ಮೃತಳ ಸಹೋದರ ತುಕ್ಕಾರೆಡ್ಡಿ ಶಿವಾರೆಡ್ಡಿ ಐನಾಪುರ ಅವರು ನೀಡಿದ ದೂರಿನ ಮೇರೆಗೆ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement