'ಬಲಿಷ್ಠ ಕಾನೂನು ಜಾರಿಗೆ ಬರಲಿ'
ಗುಲ್ಬರ್ಗ: ಮೌಢ್ಯತೆ- ಕಂದಾಚಾರ ಪ್ರತಿಬಂಧಕ (ನಿಷೇಧ) ಕಾನೂನು ಜಾರಿಗೆ ತರುವ ಮುನ್ನ ಎಲ್ಲ ವರ್ಗದ ಜನಾಭಿಪ್ರಾಯ ಸಂಗ್ರಹಿಸಿ ಅದರ ಸಾಧಕ ಬಾಧಕ ಅವಲೋಕಿಸಿ ಬಲಿಷ್ಠ ಕಾನೂನು ಜಾರಿಗೆ ತರಬೇಕೆಂದು ಬೆಂಗಳೂರಿನ ನಿಡುಮಾಮಿಡಿ ಮಠದ ಚನ್ನಮಲ್ಲ ಶ್ರೀ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಾ. ಅಂಬೇಡ್ಕರ್ 57ನೇ ಪರಿನಿರ್ವಾಣ ನಿಮಿತ್ತ ಆಯೋಜಿಸಿದ್ದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕಾನೂನು ರಚನೆಗೆ ಅವಸರ ಬೇಡ: ಮಹಾರಾಷ್ಟ್ರದಲ್ಲಿ ಮೌಢ್ಯತೆ- ಕಂದಾಚಾರ ಪ್ರತಿಬಂಧಕ ಕಾನೂನು ಜಾರಿಗೆ ತರಲಾಗಿದೆ. ಆದರೆ, ಅಲ್ಲಿ ಆರಂಭದಲ್ಲಿಯೇ ಅಪಸ್ವರ ಕೇಳಿ ಬರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕಾನೂನು ಜಾರಿಗೆ ತರಲು ಅವಸರ ಬೇಡ ಎಂದರು. ರಾಜ್ಯದಲ್ಲಿ ಕಾನೂನು ರಚನೆ ಕುರಿತು ಹಲವಾರು ಭಿನ್ನಾಭಿಪ್ರಾಯಗಳು, ಅಪಸ್ವರಗಳು ಕೇಳಿ ಬರುತ್ತಿವೆ. ಆದರೆ, ರಾಜ್ಯದ ಮುಖ್ಯಮಂತ್ರಿ, ಹಿಂದುಳಿದ ವರ್ಗದ ನಾಯಕ ಅವುಗಳಿಗೆ ತಲೆಕೆಡಿಸಿಕೊಳ್ಳದೆ ರಾಜ್ಯದಲ್ಲಿ ಮೂಢನಂಬಿಕೆ ಹೋಗಲಾಡಿಸಲು ಕಾನೂನು ಜಾರಿಗೆ ತರುವ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಸಂಸ್ಥೆಗಳಿಗೆ ವರದಿ ಸಲ್ಲಿಸಲು ಸೂಚಿಸಿರುವುದು ಸ್ವಾಗತಾರ್ಹ ಎಂದರು.
್ಲ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಜಿಪಂ ಅಧ್ಯಕ್ಷ ರಮೇಶ ಮರಗೋಳ, ಜಿಪಂ ಸದಸ್ಯ ನಿತೀನ್ ಗುತ್ತೇದಾರ, ಜೆಡಿಎಸ್ ಮುಖಂಡ ಬಸವರಾಜ ತಡಕಲ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಇತರರು ಪಾಲ್ಗೊಂಡಿದ್ದರು.