ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

Vishwanath S
Updated On : 29 Dec 2013, 12:22 pm

ಚಿಂಚೋಳಿ: ತಾಲೂಕಿನ ಐನೋಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟಿರುವ ಗ್ರಾಮಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಐನೋಳಿ ಗ್ರಾಪಂ ನಾಗರಿಕ ಹೋರಾಟ ಸಮಿತಿ ವತಿಯಿಂದ ಐನೋಳಿ ಗ್ರಾಪಂ ಕಾರ್ಯಾಲಯ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಐನೋಳಿ ನಾಗರಿಕ ಹೋರಾಟ ಸಮಿತಿಯ ನೇತೃತ್ವ ವಹಿಸಿದ ನ್ಯಾಯವಾದಿ ಶ್ರೀಮಂತ ಕಟ್ಟಿಮನಿ ಮಾತನಾಡಿ, ಐನೋಳಿ ಗ್ರಾಮವು ಜಿಪಂ.ತಾಪಂ ಕ್ಷೇತ್ರವಾಗಿದೆ ಹಾಗೂ ಗ್ರಾಪಂ ಕೇಂದ್ರ ಸ್ಥಾನ ಹೊಂದಿದ್ದರು ಸಹ ಇಲ್ಲಿನ ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು. ಸರ್ಕಾರಕ್ಕೆ ಅನೇಕ ಸಲ ಮನವಿ ಪತ್ರ ಸಲ್ಲಿಸಿದರು ನಮ್ಮ ಗ್ರಾಮಗಳ ಬೇಡಿಕೆಗಳನ್ನು ಇಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾತ್ರಿ ಕಾರ್ಮಿಕರಿಗೆ ಸಿಗದ ವೇತನ: ತಾಪಂ ಮಾಜಿ ಅಧ್ಯಕ್ಷ ಭೀಮಶೆಟ್ಟಿ ಮುರುಡಾ ಮಾತನಾಡಿ, ಐನೋಳಿ ಗ್ರಾಮವು ತಾಲೂಕಿನಲ್ಲಿ ಅತಿ ದೊಡ್ಡ ಗ್ರಾಮವಾಗಿದೆ. ಇಲ್ಲಿನ ಜನರು ಬಸ್ ಸೌಲಭ್ಯ, ಶಿಕ್ಷಕರ ಕೊರತೆ, ಹೈಸ್ಕೂಲ್ ಶಾಲೆಗೆ ಕಂಪೌಂಡ್ ನಿರ್ಮಾಣ ಮತ್ತು ದಲಿತರ ಓಣಿಯ ಹತ್ತಿರದಲ್ಲಿರುವ ಮದ್ಯದ ಅಂಗಡಿಯನ್ನು ತೆರವುಗೊಳಿಸಬೇಕು, ಪಡಿತರ ಚೀಟಿ, ದಲಿತರಿಗೆ ಸ್ಮಶಾನ ಭೂಮಿ ಇಲ್ಲ, ಗ್ರಾಪಂ ಕಚೇರಿ ಸ್ವಂತ ಕಟ್ಟಡವಿಲ್ಲ, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಇದುವರೆಗೆ ವೇತನ ನೀಡಿಲ್ಲ ಎಂದರು.
ಪರಿಹಾರದ ಭರವಸೆ: ತಹಸೀಲ್ದಾರ್ ಮೋಹನ ಜೋಶಿ ಮನವಿ ಪತ್ರ ಸ್ವೀಕರಿಸಿ ನಿಮ್ಮ ಗ್ರಾಮಗಳ ಬೇಡಿಕೆಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ ಸಮಸ್ಯೆಗೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೇವ ಬೈಗೊಂಡ, ಚಂದ್ರಂಪಳ್ಳಿ ನೀರಾವರಿ ಯೋಜನೆ ಎಇಇ ವಿಜಯಕುಮಾರ್, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಜಾನಕಿಬಾಯಿ ಬಳವಾಟ್, ಶಿಕ್ಷಣ ಇಲಾಖೆ ಸಂಯೋಜಕ ದೇವೇಂದ್ರಪ್ಪ ಹೋಳ್ಕರ್, ಬಸ್ ಘಟಕ ವ್ಯವಸ್ಥಾಪಕ ಧೂಳಪ್ಪ ಮುಂತಾದ ಅಧಿಕಾರಿಗಳು ಸ್ಥಳಕ್ಕೆ ಬಂದು ಸಾರ್ವಜನಿಕರ ಮನವಿ ಪತ್ರ ಸ್ವೀಕರಿಸಿದರು.
ಓಮನರಾವ ಚಂದ್ರಂಪಳ್ಳಿ, ಮಶಾಕ ಲಕಪತಿ, ರಾಯಪ್ಪ ಕುಂಟನೂರ, ಪ್ರಕಾಶ ನಿರ್ಣಾಕರ್, ನಾಗಪ್ಪ ಪತ್ತೆಪುರ, ದಲಿತ ಮುಖಂಡರಾದ ಗೌತಮ ಬೊಮ್ಮನಳ್ಳಿ, ಪಾಂಡುರಂಗ ಲೊಡನೂರ, ರಾಜಶೇಖರ ಹೊಸಮನಿ, ನರಸಪ್ಪ ಮೊಗಡಮಪಳ್ಳಿ, ಲಕ್ಷ್ಮಿಕಾಂತ ತುಮಕುಂಟಾ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement