ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಧ್ಯಯನದಿಂದ ಸಾಮಾಜಿಕ ಪ್ರಜ್ಞೆ

Vishwanath S
Updated On : 30 Dec 2013, 12:03 pm

ಸಿಂಧನೂರು: ವಿದ್ಯಾರ್ಥಿಗಳು ಕಾಲೇಜಿನ ಪಠ್ಯ ವಿಷಯಗಳ ಜೊತೆಗೆ ಸಮಯ ದೊರೆತಾಗೆಲ್ಲ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಅವುಗಳ ಅಧ್ಯಯನದಿಂದ ಸಾಮಾಜಿಕ ಪ್ರಜ್ಞೆ ಬೆಳೆಯುತ್ತದೆ ಎಂದು ಚುಟುಕು ಕವಿ ವಿ.ಸಿ. ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ವಾಸವಿ ಬಾಲಕಿಯರ ಪಪೂ ಕಾಲೇಜಿನಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಲಿಂ. ವೇ.ಮೂ. ಕರಿಬಸಯ್ಯಸ್ವಾಮಿ ಸರಗಣಾಧೀಶ್ವರ ಶಿವಪೂಜಾಮಠ  ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಮಾಜ ಪರಿವರ್ತನೆಯಲ್ಲಿ ಚುಟುಕುಗಳ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿದರು.
ಚುಟುಕು- ಕವನಕ್ಕೇನು ವ್ಯತ್ಯಾಸ?: ಕವನಗಳು ಐದು ದಿನದ ಕ್ರಿಕೆಟ್ ಟೆಸ್ಟ್ ಇದ್ದಂತೆ. ಆದರೆ ನಾಲ್ಕು ಸಾಲಿನ ಚುಟುಕುಗಳು ಟಿ20 ಪಂದ್ಯವಿದ್ದಂತೆ ಎಂದು ತಿಳಿಸಿ ಅರ್ಥಗರ್ಭಿತವಾದ ಹಲವಾರು ಚುಟುಕುಗಳನ್ನು ವಾಚಿಸಿ ವಿದ್ಯಾರ್ಥಿಗಳ ಗಮನ ಸೆಳೆದರು.
ವಿಶ್ರಾಂತ ಪ್ರಾಂಶುಪಾಲ ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲಿಂ. ಕರಿಬಸಯ್ಯನವರು ಉತ್ತಮ ಆರೋಗ್ಯವಂತರಾಗಿದ್ದರು. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆಯನ್ನು ನೀಡಿದ್ದರೆಂದು ವಿವರಿಸಿದರು.
ಗುತ್ತೇದಾರ ಕಟ್ಟೆಪ್ಪ ಗುಂಜಳ್ಳಿ, ಉಪನ್ಯಾಸಕ ನಾಗರಾಜ ಹಂಪನಾಳ, ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ದತ್ತಿದಾನಿ ಎನ್.ಶಿವನಗೌಡ ಗೋರೆಬಾಳ ಹಾಗೂ ಪಿಯುಸಿ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ಹುಸೇನಬಿ ಬಾಬುಸಾಬ ಅವರನ್ನು ಗೌರವಿಸಲಾಯಿತು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಉಮಾಪತಿ ವಹಿಸಿದ್ದರು.
ಸಂಗಯ್ಯಸ್ವಾಮಿ ಸರಗಣಾಧೀಶ್ವರ, ಮರಿಸ್ವಾಮಿ, ಸಂಜಯ ಶ್ರೇಷ್ಠಿ ಉಪಸ್ಥಿತರಿದ್ದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬೀರಪ್ಪ ಶಂಭೋಜಿ, ವಿದ್ಯಾರ್ಥಿನಿಯರಾದ ಸಂಬ್ರೀನ್, ಕೊಟ್ರಮ್ಮ ತಮ್ಮ ಚುಟುಕುಗಳನ್ನು ವಾಚಿಸಿದರು. ಸುರೇಖಾ ಪ್ರಾರ್ಥಿಸಿದರು. ಉಪನ್ಯಾಸಕ ಹುಸೇನಪ್ಪ ಸ್ವಾಗತಿಸಿದರು. ಪಂಪಯ್ಯಸ್ವಾಮಿ ನಿರೂಪಿಸಿದರು. ಭೀಮಣ್ಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement