ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಟ್ಯಾಂಕರ್- ಟೆಂಪೋ ಮುಖಾಮುಖಿಯಲ್ಲಿ ವ್ಯಕ್ತಿ ಸಾವು

Vishwanath S
Updated On : 30 Dec 2013, 12:03 pm

ಗುಲ್ಬರ್ಗ: ಆಳಂದ ರಸ್ತೆಯ ರೇಲ್ವೆ ಸೇತುವೆ ಬಳಿ ಸಂಭವಿಸಿದ ಟ್ಯಾಂಕರ್- ಟೆಂಪೋ ಮುಖಾಮುಖಿ ಡಿಕ್ಕಿಯಲ್ಲಿ ಭೂತಾಳಿ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ನಾಗಪ್ಪ ಹಾಗೂ ದುಂಡಪ್ಪ ಕಲ್ಯಾಣಿ ಉಪ್ಪಿನ ತೀವ್ರವಾಗಿ ಗಾಯಗೊಂಡಿದ್ದಾರೆ.
  ಹಿತ್ತಲ ಶಿರೂರಿನಿಂದ ತೊಗರಿ ಚೀಲಗಳನ್ನು ಗುಲ್ಬರ್ಗಕ್ಕೆ ತಂದು ಊರಿಗೆ ಮರಳುವಾಗ ಈ ದುರಂತ ಸಂಭವಿಸಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಮಂದಿರದಿಂದ ಐವರು ಪರಾರಿ
ನಗರದ ಬಸವೇಶ್ವರ ನಗರ ಠಾಣೆ ವ್ಯಾಪ್ತಿಯ ಬಾಲಮಂದಿರದಿಂದ ಮೂರು ಮಕ್ಕಳು ಕಾಣೆಯಾಗಿದ್ದಾರೆ. ಎನ್‌ಜಿಒಗಳ ಸಂಯುಕ್ತ ಮಕ್ಕಳ ಸರ್ವೆ ದಾಳಿಯಲ್ಲಿ 25 ಮಕ್ಕಳನ್ನು ಸರ್ಕಾರಿ ಬಾಲಕರ ಬಾಲಮಂದಿರ ಪ್ರಗತಿ ಕಾಲೋನಿಗೆ ಒಪ್ಪಿಸಲಾಗಿತ್ತು.
 ಈ ಪೈಕಿ ರಾಜು ತಂದೆ ಸಿದ್ರಾಮ್, ಸಂಜಯ್ ತಂದೆ ಶಾಣಪ್ಪ, ಈರಪ್ಪಾ ತಂದೆ ವೆಂಕಪ್ಪಾ ಹಾಗೂ ಮುಂಚೆಯೇ ಸಂಸ್ಥೆಯಲ್ಲಿದ್ದ ಶರಬ ತಂದೆ ಆನಂದಪ್ಪ, ಅಗ್ನಿ ತಂದೆ ಹಣಮಂತ, ಖಾಜಾ ತಂದೆ ಹಸನ ಪಟೇಲ್ ಎಲ್ಲರೂ ಕೂಡಿಕೊಂಡು ಪರಾರಿಯಾಗಿದ್ದಾರೆ. ಪರಾರಿಯಾದ 6 ಜನರಲ್ಲಿ ಅಗ್ನಿ ಎಂಬಾತ ಮರಳಿ ಬಾಲಮಂದಿರಕ್ಕೆ ಬಂದಿದ್ದು ಇನ್ನುಳಿದ 5 ಮಕ್ಕಳು ಬಾಲ ಮಂದಿರಕ್ಕೆ ಮರಳಿ ಬಂದಿಲ್ಲ ಎಂದು ಸಂಸ್ಥೆಯ ಅಧೀಕ್ಷಕರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಸಂಭಾಜಿಗೆ ಕಲ್ಲು: ಇಬ್ಬರ ಬಂಧನ
ಬೆಳಗಾವಿ ಶಾಸಕ ಸಂಭಾಜಿರಾವ ಪಾಟೀಲ್ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಕಲ್ಲಿನಿಂದ ಹೊಡೆದು ಗಾಜುಗಳನ್ನು ಜಖಂ ಮಾಡಿದ ಇಬ್ಬರನ್ನು ಬಂಧಿಸಿರುವ ಪೊಲೀಸರು, ದೇವಲ ಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೆಳಗಾವಿ ಶಾಸಕ ಸಂಭಾಜಿರಾವ ಪಾಟೀಲರು ದತ್ತಾತ್ರೇಯ ದೇವರ ದರ್ಶನ ಪಡೆದು ಸಿಂದಗಿಗೆ ತೆರಳಲುದೇವಲಗಾಣಗಾಪುರದ ಲಕ್ಷ್ಮೀ ಗುಡಿಯ ಬಳಿ ಕಾರಿನಲ್ಲಿ ಹೊರಟಿದ್ದಾಗ ಹಿಂಬದಿ ದೂರದಲ್ಲಿ ನಿಂತಿದ್ದ ಇಬ್ಬರು ಕಲ್ಲೆಸೆದರು, ಕನ್ನಡ ವಿರೋಧಿ ಶಾಸಕ.. ಎಂದು ಕೂಗುತ್ತ ಓಡಲು ಶುರು ಮಾಡಿದರು.
ತಕ್ಷಣ ಗಾಣಗಾಪುರ ಪೊಲೀಸರು ಕಲ್ಲು ಹೊಡೆದ ಹವಳಗಾ ಗ್ರಾಮದ ಶಿವುಕುಮಾರ ನಾಟೀಕಾರ, ವಿಠ್ಠಲ್ ನಾಟೀಕಾರ ಹಾವಳಗಾ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ನಂತರ ವಿಚಾರಿಸಲಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಎಂದು ತಿಳಿದುಬಂದಿದೆ.
ಬೈಕ್ ಕಳವು
ಅಫಜಲ್ಪುರದ ಸಿಡಿಪಿಒ ಕಚೇರಿ ಮುಂದೆ ನಿಲ್ಲಿಸಿದ್ದ ಬೈಕ್‌ನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಮಂಜುನಾಥ ಆರೆಕರ ಎಂಬುವರು ಇವರು ಸಿಡಿಪಿಓ ಕಚೇರಿ ಮುಂದೆ ನಿಲ್ಲಿಸಿದ್ದರು. ಅಫಜಲ್ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement