ವಚನಗಳಿಂದ ಸಮಾಜ ತಿದ್ದಲು ಸಾಧ್ಯ
ಗುಲ್ಬರ್ಗ: ವಚನಗಳಿಂದ ಸಮಾಜ ತಿದ್ದಲು ಸಾಧ್ಯ ಎಂದು ಸಾಹಿತಿ ಶಿವರಂಜನ್ ಸತ್ಯಂಪೇಟ್ ಹೇಳಿದರು.
ಸೇಡಂನ ಸರ್ಕಾರಿ ನೌಕರ ಭವನದಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ನೆಮ್ಮದಿಯ ವಾತಾವರಣ ನಿರ್ಮಿಸಿದವರು ಶರಣರು. ಕಾಯಕ, ದಾಸೋಹ ತತ್ವಗಳಿಂದ ಶಾಂತಿಯುತ ಸಮಾಜ ನಿರ್ಮಿಸಿವರು ಶರಣರೇ. ತಮ್ಮ ವಚನಗಳಲ್ಲಿ ಮೂಢನಂಬಿಕೆಗಳನ್ನು ಖಂಡಿಸಿದ್ದಾರೆ ಎಂದರು.
ವಚನ ಸಾಹಿತ್ಯ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಮಾತನಾಡಿ, ಜನವರಿಯಲ್ಲಿ ಗುಲ್ಬರ್ಗದಲ್ಲಿ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ ಏರ್ಪಡಿಸುವುದಾಗಿ ಹೇಳಿದರು.
ಹಾಲಪ್ಪಯ್ಯ ಮಠದ ಪಂಚಾಕ್ಷರಿ ದೇವರು ಮತ್ತು ಕೊತ್ತಲಬಸವೇಶ್ವರ ದೇವಾಲಯದ ಸದಾಶಿವ ಶ್ರೀ ಮಾತನಾಡಿದರು. ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು.
ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಕಸಾಪ ಅಧ್ಯಕ್ಷ ನಾಗಯ್ಯ ಸ್ವಾಮಿ ಬೊಮ್ಮನಳ್ಳಿ ಮಾತನಾಡಿದರು. ವಚನ ಸಾಹಿತ್ಯ ಅಕಾಡೆಮಿ ಅಕ್ಕನಾಗಮ್ಮ ಆಡಕಿ, ಸುಲೋಚನಾ ಬಿಬ್ಬಳ್ಳಿ, ಡಾ. ಬಿದರಿ ಚಂದ್ರಕಲಾ, ರಾಮಯ್ಯ ಪೂಜಾರಿ, ಲಿಂಗಾರೆಡ್ಡಿ ಶೇರಿ, ಸಿದ್ದಪ್ಪ ತಳ್ಳಳ್ಳಿ, ಸಿದ್ದಪ್ಪ ನಿಲಂಗಿ, ಪ್ರಭಾಕರ್ ಜೋಶಿ, ಮನು ಸಾಗರ, ಸಿದ್ದಲಿಂಗ ಬಾಳಿ, ಶರಣು ಜ್ಯೋತಿ, ಶಿವಕುಮಾರ್ ಸಿ.ಎಚ್, ಜಗನ್ನಾಥ ತರನಳ್ಳಿ, ಶ್ರೀಕಾಂತ ಪಾಟೀಲ್ ತಿಳಗೋಳ, ಧನಶೆಟ್ಟಿ ಸಕ್ರಿ, ಬಸವರಾಜ ಐನೊಳ್ಳಿ ಮುಂತಾದವರು ಉಪಸ್ಥಿತರಿದ್ದರು.
ರಾಚಣ್ಣ ಬಳಗಾರ ನಿರೂಪಿಸಿದರು. ವೀರಯ್ಯ ಸ್ವಾಮಿ ಮಠಪತಿ ಪ್ರಾಸ್ತಾವಿಕ ಮಾತನಾಡಿದರು. ನೀಲಕಂಠ ಮುತ್ತಗಿ ಸ್ವಾಗತಿಸಿದರು.