ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆಸ್ಪತ್ರೆಗೆ ಲೋಕಾಯಕ್ತ ಎಸ್ಪಿ ಭೇಟಿ

Lingaraj Badiger
Updated On : 31 Dec 2013, 11:16 am

ಸುರಪುರ: ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಯಾದಗಿರಿ ಲೋಕಯುಕ್ತ ಎಸ್ಪಿ ಹನುಮೇಶ ದಿಢೀರನೆ ಭೇಟಿ ನೀಡಿ ಮೂಲಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.
ನಂತರ ಪ್ರತಿ ರೋಗಿಗಳ ಕೋಣೆಗೆ ಭೇಟಿ ನೀಡಿ ರೋಗಿಗಳಿಂದ ಅಲ್ಲಿಯ ವ್ಯವಸ್ಥೆಯ ಬಗ್ಗೆ ಮಾಹಿತಿ ಕೇಳಿದಾಗ, ರೋಗಿಗಳು ಆಸ್ಪತ್ರೆಯಲ್ಲಿ ನೀರಿನ ಕೊರತೆ ಬಗ್ಗೆ ಹೇಳಿದರು. ನಂತರ ವೈದ್ಯಧಿಕಾರಿ ಡಾ. ವಿ.ಎಲ್. ಚೌದ್ರಿ ಹಾಗೂ ನರ್ಸ್ ಆಸ್ಪತ್ರೆಯ ವೈದ್ಯರ ಬಗ್ಗೆ ಮಾಹಿತಿ ಕೇಳಿದಾಗ, ಇಲ್ಲಿ 14 ವೈದ್ಯರ ನೇಮಕಾತಿ ಇದ್ದು ಅದರಲ್ಲಿ ಕೇವಲ ಮೂವರು ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನರ್ಸ್ ಆಸ್ಪತ್ರೆಯಲ್ಲಿ ರಾತ್ರಿ ಹೊತ್ತು ಕೆಲವರು ವಿನಾಕಾರಣ ಆಸ್ಪತ್ರೆಗೆ ಕುಡಿದು ಬರುತ್ತಾರೆ. ಅಸಭ್ಯವಾಗಿ ವರ್ತಿಸುತ್ತಾರೆ. ಇದರಿಂದ ರಾತ್ರಿ ವೇಳೆ ಕೆಲಸ ಮಾಡಲು ಭಯವಾಗುತ್ತಿದೆ ಎಂದು ಲೋಕಾಯುಕ್ತ ಎಸ್ಪಿ ಮುಂದೆ ವಿವರವಾಗಿ ತಿಳಿಸಿದರು.
 ಅವರು ವೈದ್ಯಾಧಿಕಾರಿಗಳಿಗೆ ರಾತ್ರಿ ಹೊತ್ತು ಇಂತಹ ಘಟನೆಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ದೂರು ನೀಡಿ ಹಾಗೂ ರಾತ್ರಿ ಹೊತ್ತು ಪೊಲೀಸರನ್ನು ನಿಯೋಜಿಸಲು ಕ್ರಮ ಕೈಗೊಳ್ಳುವುದಾಗಿ ಮತ್ತು ಕುಟುಂಬ ಶಸ್ತ್ರ ಚಿಕಿತ್ಸೆ ವೈದ್ಯರ ಕೊರತೆ ನೀಗಿಸುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಲೋಕಾಯುಕ್ತ ಸಿಬ್ಬಂದಿ ನಾಗರಾಜ, ವೈದ್ಯರಾದ ವಿ.ಎಲ್. ಚೌದ್ರಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement