ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕನ್ನಡಿಗರ ರಕ್ಷಣೆಗೆ ಕರವೇ ಸದಾ ಬದ್ಧ: ಭೀಮುನಾಯಕ

Lingaraj Badiger
Updated On : 31 Dec 2013, 11:17 am

ಯಾದಗಿರಿ: ಕನ್ನಡಿಗರ ರಕ್ಷಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಸದಾ ಬದ್ಧವಾಗಿದೆ. ಇಲ್ಲಿಯವರೆಗೆ ಮಾಡಿದ ಹೋರಾಟಗಳೇ ಇದಕ್ಕೆ ಸಾಕ್ಷಿ ಎಂದು ಕರವೇ ಜಿಲ್ಲಾ ಅಧ್ಯಕ್ಷ ಟಿ.ಎನ್. ಭೀಮುನಾಯಕ ಹೇಳಿದರು.
ತಾಲೂಕಿನ ಸಂಗ್ವಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಘಟಕದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರವೇ ರಾಜ್ಯದಲ್ಲಿ ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿದ್ದು ಕನ್ನಡಿಗರಿಗೆ ದಕ್ಕೆ ಬಂದಾಗ ಕೈಕಟ್ಟಿ ಕೂರದೆ ಹೋರಾಟದ ಮೂಲಕ ನ್ಯಾಯ ಪಡೆಯುವಂತ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಯುವ ಕಾರ್ಯಕರ್ತರು ಕರವೇ ಜೊತೆ ಕೈಜೋಡಿಸಿ ಗ್ರಾಮೀಣ ಸಮಸ್ಯೆಗಳನ್ನು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸರ್ಕಾರದ ಯೋಜನೆಗಳನ್ನು ನೇರವಾಗಿ ಜನರಿಗೆ ತಲುಪಿಸುವಂತೆ ಕೆಲಸ ಮಾಡುತ್ತಿದೆ ಎಂದರು. ಉದ್ಘಾಟನೆ ಮಾಡಿ ಮಾತನಾಡಿದ ವಿಜಯ ಚಿಂಚನಸೂರ, ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಸಂಘಟಿತರಾಗುತ್ತಿರುವುದಕ್ಕೆ ಜನರು ಜಾಗೃತರಾಗಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಕರವೇ ತಾಲೂಕಧ್ಯಕ್ಷ ವೆಂಕಟೇಶ ಮೀಲ್ಟ್ರಿ ಧ್ವಜಾರೋಹಣ ನೆರವೇರಿಸಿದರು. ಜಿಪಂ ಸದಸ್ಯರಾದ ಶ್ರೇಣಿಕುಮಾರ ದೋಖಾ ಕನ್ನಾಡಂಭೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.   ಕಾರ್ಯಕ್ರಮದಲ್ಲಿ ಸೈದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ ಗ್ರಾಪಂ ಅಧ್ಯಕ್ಷೆ ಪಾರ್ಳತಮ್ಮ, ಮುಖಂಡರಾದ ಚಂದ್ರಶೇಖರ ವಾರದ, ಚೌಡಯ್ಯ ಬಾವೂರ, ಮಹಾವೀರ ಲಿಂಗೇರಿ, ಮಲ್ಲು ವರ್ಕನಳ್ಳಿ, ಭೀಮಾಶಂಕರ ಹತ್ತಿಕುಣಿ, ಮಹಾದೇವಪ್ಪ ಸೋಲಾಪುರ, ಬಸವರಾಜ ನಾಯಕ, ನಾಗರಾಜ ಹಡಪದ, ಆನಂದ ಮರಿಯಾಲ, ಅಬ್ದುಲ್ ಚಗಾನೂರ, ಇನ್ನಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement