'ತೊಗರಿಗೆ ರು. 6450 ಬೆಂಬಲ ಬೆಲೆ ನೀಡಿ'
ಗುಲ್ಬರ್ಗ: ತೊಗರಿ ಮಂಡಳಿಯಿಂದ ತೊಗರಿ ಬೆಳೆಗೆ ರು. 6450 ಬೆಂಬಲ ಬೆಲೆಯೊಂದಿಗೆ ಖರೀದಿಸಬೇಕು ಹಾಗೂ ಮಂಡಳಿಗೆ ರು. 100 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ವಿವಿಧ ರೈತ ಪರ ಸಂಘಟನೆಗಳಿಂದ ನಗರದ ಸೂಪರ್ ಮಾರ್ಕೆಟ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಯಿತು. ಡಾ. ಸ್ವಾಮಿನಾಥನ ಶಿಫಾರಸನ್ನು ಅನುಷ್ಠಾನಕ್ಕೆ ತರುವುದರೊಂದಿಗೆ ತೊಗರಿ, ಕಡಲೆ, ಉದ್ದು, ಹೆಸರು ಕ್ವಿಂಟಲಿಗೆ ರು. 6450 ಬೆಲೆ ನಿಗದಿ ಪಡಿಸಿ ಮಾರುಕಟ್ಟೆ ಮಧ್ಯ ಪ್ರವೇಶ ಮಾಡಬೇಕು ಎಂದು ಮುಖಂಡರು ಒತ್ತಾಯಿಸಿದರು. ತೊಗರಿ ಮಂಡಳಿಗೆ 100 ಕೋಟಿ ರು. ಅನುದಾನ ಬಿಡುಗಡೆ ಮಾಡಿ ತೊಗರಿ ಮಂಡಳಿಯನ್ನು ಕೃಷಿ ಮಾರುಕಟ್ಟೆ ಇಲಾಖೆಗೆ ವರ್ಗಾಯಿಸಬೇಕು, ತೊಗರಿ ಮಂಡಳಿ ಬೇಳೆಕಾಳು ಅಭಿವೃದ್ಧಿ ಮಂಡಳಿ ಎಂದು ಹೆಸರಿಸಬೇಕು. ಪ್ರತಿ ಜಿಲ್ಲೆಯಲ್ಲಿ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.