ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಾಲೆಗಳಿಗೆ ಜಿಪಂ ಸದಸ್ಯೆ, ಬಿಇಒ ಭೇಟಿ

Lingaraj Badiger
Updated On : 31 Dec 2013, 11:13 am

ಕ.ಪ್ರ. ವಾರ್ತೆ, ಆಳಂದ, ಡಿ.30
ಶಾಲೆಗಳಲ್ಲಿ ಕಾಟಾಚಾರದ ಬಿಸಿಯೂಟ ವಿತರಣೆ, ಮಾಹಿತಿ ನೀಡಲು ಮುಖ್ಯ ಶಿಕ್ಷಕರ ಹಿಂದೇಟು, ಆದರ್ಶ ಮತ್ತು ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆಗೆ ಖಾಸಗಿ ಸಂಸ್ಥೆ ಮೂಲಕ ವಿತರಣೆ ಮಾಡುವ ಬಿಸಿಯೂಟದ ಬದಲು ವರ್ಗವಣೆ ವಿತರಣೆಗೆ ಸಿಡಿಮಿಡಿ, ಅಲ್ಲದೆ, 150 ಮಕ್ಕಳ ಬದಲು ಕೇವಲ 50 ಮಕ್ಕಳಿಗಾಗುವಷ್ಟೇ ವಗ್ಗರಣೆ ವಿತರಣೆ, ಕೊಟ್ಟಷ್ಟೇ ತಿಂದು ಕಲಿಯುತ್ತೇವೆ ಮಕ್ಕಳ ಹೇಳಿಕೆ. ಪ್ರಾಮಾಣಿಕವಾಗಿ ಮಕ್ಕಳಿಗೆ ಬಿಸಿಯೂಟ ಸೇರಿ ಶೈಕ್ಷಣಿಕ ಸೌಲಭ್ಯ ವಿತರಣೆಗೆ ಜಿಪಂ ಸದಸ್ಯೆ ಪೂಜಾ ಮುಖ್ಯ ಶಿಕ್ಷಕರಲ್ಲಿ ಮನವಿ.
ಶಾಲೆಗಳಿಗೆ ಸೋಮವಾರ ಜಿಪಂ ಸದಸ್ಯೆ ಮತ್ತು ಬಿಇಒ ಅವರು ಜಂಟಿಯಾಗಿ ಹಠಾತ್ ಭೇಟಿ ನೀಡಿದಾಗ ಎದುರಾದ ಸಂಗತಿಗಳಾಗಿವೆ.
ಶಿಕ್ಷಕ ವಲಯಕ್ಕೆ ಬಿಸಿ: ಮಾದನಹಿಪ್ಪರಗಾ ಕ್ಷೇತ್ರದ ಜಿಪಂ ಬಿಜೆಪಿ ಸದಸ್ಯೆ ಪೂಜಾ ರಮೇಶ ಲೋಹಾರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯಾ ಇನಾಮದಾರ ಜಂಟಿಯಾಗಿ ಪಟ್ಟಣದ ಶಾಲೆಗಳಿಗೆ ಹಠಾತ್ ಭೇಟಿ ನೀಡಿ, ಶಿಕ್ಷಕ ವಲಯಕ್ಕೆ ಬಿಸಿ ಮುಟ್ಟಿಸಿದ ಪ್ರಸಂಗ ನಡೆಯಿತು.
ಪಟ್ಟಣದ ಬಾಲಕರ ಜ್ಯೂನಿಯರ್ ಕಾಲೇಜಿನಲ್ಲಿ ನಡೆಯುತ್ತಿರುವ ಆದರ್ಶ ಆಂಗ್ಲಮಾಧ್ಯಮ ಶಾಲೆಗೆ ಸೋಮವಾರ ಭೇಟಿ ನೀಡಿದ ಪೂಜಾ ಅವರು, ಅಲ್ಲಿರುವ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಕೊರತೆ, ಸಮವಸ್ತ್ರ, ಬಿಸಿಯೂಟ ನೀಡದೆ ಇರುವ ಕುರಿತು ಮಕ್ಕಳಿಂದ ಮಾಹಿತಿ ಪಡೆದರಲ್ಲದೆ, ಸ್ವತ ಬಿಇಒ ವೆಂಕಯ್ಯಾ ಇನಾಮದಾರ ಮೂಲಕ ವಿದ್ಯಾರ್ಥಿಗಳಿಂದ ಪಾಠದ ಹಲವು ವಿಷಯವನ್ನು ಓದಲು ಹಚ್ಚಿಸಿ ಕಲಿಕೆಯ ಮಟ್ಟವನ್ನು ಮನವರಿಕೆ ಮಾಡಿಕೊಟ್ಟರು.
ಸಮವಸ್ತ್ರ ನೀಡಿಲ್ಲ :ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರು, ವಿದ್ಯಾರ್ಥಿಗಳಿಗೆ ಸಮವಸ್ತ್ರ ಬೆಲ್ಟ್ ಮತ್ತು ಟೈ ನೀಡದಿರುವುದು ಗಮನಿಸಿ, 150 ವಿದ್ಯಾರ್ಥಿಗಳ ದಾಖಲಾತಿ ಇರುವ ಸಂಖ್ಯೆಯಲ್ಲಿ ಕೇವಲ 50 ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲು ಅದು ವಗ್ಗರಣೆ ನೀಡಲು ತಂದಿಡಲಾಗಿದ್ದು ನೋಡಿ ಸಿಡಿಮಿಡಿಗೊಂಡರು.
ಸರ್ಕಾರ ಮಕ್ಕಳಿಗೆ ಬಿಸಿಯೂಟ ಕೊಟ್ಟರು ಮನೆಯಿಂದ ಊಟ ತರುತ್ತಿದ್ದಾರೆ. ಬಿಸಿಯೂಟದವರ ಮೇಲೆ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸಬೇಕು ಎಂದರು. ಜೂನ್ ಆರಂಭದಿಂದಲೂ ಬಿಸಿಯೂಟ ಕೊಟ್ಟಿಲ್ಲವೆಂದು ಅಳಲು ತೊಡಿಕೊಂಡರು.
ಮಕ್ಕಳಿಗೆ ಅನ್ಯಾಯ: ನಿನ್ನೆ ನಡೆದ ಪ್ರತಿಭಾ ಕಾರಂಜಿಯಲ್ಲೂ ಈ ಶಾಲೆಯಿಂದ ಒಬ್ಬ ವಿದ್ಯಾರ್ಥಿಯೂ ಭಾಗವಹಿಸಿಲ್ಲ. ನಿಮ್ಮ ನಿರ್ಲಕ್ಷ್ಯದ ಫಲವಾಗಿ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದರು.
ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿದಾಗ ಮೂವರು ಶಿಕ್ಷಕರು ಸೇರಿ ಐವರು ಗೈರಾಗಿದ್ದರು. ಬಿಇಒ ಗೈರು ದಾಖಲಿಸಿದರು. ಅಲ್ಲದೆ, ಈ ಮೊದಲು ಶುಕ್ರವಾಡಿಯ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಅವರ ದುರ್ನಡೆ ಆರೋಪದ ಮೇಲೆ ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಬಿಇಒ ಸುದ್ದಿಗಾರರಿಗೆ ತಿಳಿಸಿದರು.
ವಗ್ಗರಣೆ: ಬಾಲಕಿಯರ ಶಾಲೆಯ 590 ವಿದ್ಯಾರ್ಥಿನಿಯರಲ್ಲಿ ಕೇವಲ 382 ವಿದ್ಯಾರ್ಥಿನಿಯರು ಹಾಜರಾಗಿದ್ದರು. ಅಲ್ಲೂ ಸಹ ಮೊದಲು ನೂರು ವಿದ್ಯಾರ್ಥಿನಿಯರಿಗೆ ಮಾತ್ರ ಆದರ್ಶ ಶಾಲೆಗೆ ಪೂರೈಸುವ ಖಾಸಗಿ ಸಂಸ್ಥೆಯಿಂದಲೇ ವಗ್ಗರಣೆ ತರಲಾಗಿದೆ ಎಂದಾಗ ಬೇಕಾದಷ್ಟು ಪೂರೈಸುತ್ತಾರೆ ಎಂದು ಮುಖ್ಯ ಶಿಕ್ಷಕ ಚವ್ಹಾಣ ವಿವರಿಸಿದರು.
ಅನ್ನದ ಬದಲು ವಗ್ಗರಣೆ ನೀಡುವ ನಿಯಮವಿಲ್ಲ, ಗುಣಮಟ್ಟತೆ ಸುಧಾರಿಸಬೇಕು ಹಾಗೂ ಮಧ್ಯಾಹ್ನ ವಿರಾಮ ಮುಗಿದರೂ ಸಿಬ್ಬಂದಿ ಗೈರು ದಾಖಲಿಸಿಲ್ಲ ಎಂದು ಮುಖ್ಯ ಶಿಕ್ಷಕ ಪ್ರಭಾಕರ ಚವ್ಹಾಣಗೆ ಪ್ರಶ್ನಿಸಿದರು.
ಜಿಪಂ ಸದಸ್ಯೆ ಪೂಜಾ ಒಬ್ಬ ಮಹಿಳಾ ಜನ ಪ್ರತಿನಿಧಿಯಾಗಿ 25ಕ್ಕೂ ಹೆಚ್ಚು ಶಾಲೆಗಳಿಗೆ ಹಠಾತ್ ಭೇಟಿ ನೀಡುವ ಮೂಲಕ ಶಿಕ್ಷಕರ ಹಾಜರಾತಿ ಪರಿಶೀಲನೆ ಮತ್ತು ಶಿಕ್ಷಣದ ಗುಣಮಟ್ಟತೆ, ಅಲ್ಲಿಯ ಸಮಸ್ಯೆ, ಬಿಸಿಯೂಟ ನೀಡದಿರುವುದು ಹೀಗೆ ಎಲ್ಲವನ್ನು ಕಲೆಹಾಕಿದರು. ಬರುವ ಜಿಪಂ ಸಭೆಯಲ್ಲಿ ಮಂಡನೆಗೆ ವರದಿ ಸಿದ್ಧಪಡಿಸಲಾಗುತ್ತಿದೆ. ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಈ ಕಾರ್ಯಕ್ಕೆ ಮುಂದಾಗಿರುವ ಹೊರತು ಯಾರ ವಿರುದ್ಧವು ಅಲ್ಲ ಎಂದು ಪೂಜಾ ರಮೇಶ ಸುದ್ದಿಗಾರರಿಗೆ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement