ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಹಸೀಲ್ದಾರ್ ವಜಾಕ್ಕೆ ಒತ್ತಾಯ

Vishwanath S
Updated On : 1 Jan 2014, 1:10 am

ಚಿಂಚೋಳಿ: ತಾಲೂಕಿನ ಗೊಂಡ ಜನಾಂಗದವರಿಗೆ ಗೊಂಡ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ತೊಂದರೆ ನೀಡುತ್ತಿರುವ ಗ್ರೇಡ್-1 ತಹಸೀಲ್ದಾರ್ ಜಗನ್ನಾಥರೆಡ್ಡಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ತಾಲೂಕ ಗೊಂಡ ಸಂಘರ್ಷ ಸಮಿತಿಯ ಮುಖಂಡರು ತಹಸೀಲ್ದಾರ್ ಮುಖಾಂತರ ಸೇಡಂ ಸಹಾಯಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕ ಗೊಂಡ ಸಂಘರ್ಷ ಸಮಿತಿ ಅಧ್ಯಕ್ಷ ಮಲಕಪ್ಪಾ ಬೀರಾಪುರ ಮಾತನಾಡಿ, ತಾಲೂಕಿನ ಗೊಂಡ ಜನಾಂಗದವರಿಗೆ ಗೊಂಡ ಜಾತಿ, ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದಕ್ಕಾಗಿ ಅನೇಕ ಕುರುಬ ಗೊಂಡ ಜನರು ತಹಸೀಲ್ದಾರ್ ಕಾರ್ಯಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅದರಂತೆ ತಾಲೂಕಿನ ಕೋಡ್ಲಿಲ ಸುಲೇಪೇಟ, ಚಿಂಚೋಳಿ, ಐನಾಪುರ ವಲಯದ ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರು ಮನೆಗೆ ಭೇಟಿ ನೀಡಿ ಪಂಚನಾಮೆ ನಡೆಸಿ ಕಾರ್ಯಲಯಕ್ಕೆ ವರದಿ ನೀಡುತ್ತಿದ್ದಾರೆ. ಆದರೆ ಇಲ್ಲಿನ ಗ್ರೇಡ್-1 ತಹಸೀಲ್ದಾರ್ ಜಗನ್ನಾಥರೆಡ್ಡಿ ಉದ್ದೇಶಪೂರ್ವಕವಾಗಿ ಕಂದಾಯ ನಿರೀಕ್ಷಕರಿಗೆ ಮತ್ತು ಗ್ರಾಮಲೆಕ್ಕಿಗರಿಗೆ ಸುಳ್ಳುವರದಿ ನೀಡುವಂತೆ ತಮ್ಮ ಪ್ರಭಾವ ಬೀರಿ ಪಂಚನಾಮೆಯನ್ನು ತಿದ್ದುಪಡಿಮಾಡಿ ಕೊಡಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆಯ ಬೆದರಿಕೆ ಹಾಕುತ್ತಿರುವುದರಿಂದ ಗೊಂಡ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಡಿ.4ರಿಂದ 9ರವರೆಗೆ ನಡೆಸಿದ ಧರಣಿ ಸತ್ಯಾಗ್ರಹದಲ್ಲಿ ಶಾಸಕರ ಸಮ್ಮುಖದಲ್ಲಿ ಕಂದಾಯ ಅಧಿಕಾರಿಗಳು  ಒಪ್ಪಿದ್ದರು ಗ್ರೇಡ್-1 ತಹಸೀಲ್ದಾರ್  ತೊಂದರೆ ನೀಡುತ್ತಿದ್ದಾರೆಂದು ಮಲಕಪ್ಪಾ ಬೀರಾಪುರ ಆಕ್ರೋಶ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಹಣಮಂತ ಪೂಜಾರಿ ಚಂದನಕೇರಾ, ರಾಮಚಂದ್ರ ಪೂಜಾರಿ, ರಾಜಕುಮಾರ ಸೋಲಾಪುರ, ಸೂರ್ಯಕಾಂತ ರುಮ್ಮನಗುಡ, ರವಿ ಪಸ್ತಪೂರ, ಬಾಬು ಹೊಸಬಾಯಿ, ರಾಜು ಎಂಪಳ್ಳಿ, ರವಿ ದಸ್ತಾಪೂರ, ರಮೇಶ ದೇಗಲಮಡಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ತಹಸೀಲ್ದಾರ್ ಮೋಹನ ಜೋಶಿ ಮನವಿ ಪತ್ರ ಸ್ವೀಕರಿಸಿ ನಿಮ್ಮ ಬೇಡಿಕೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement