ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಾಬಾ ರಾಮದೇವ್ ಯೋಗಗುರು ಅಲ್ಲ, ರಾಜಕೀಯ ಪಟು: ಸಿರವಾರ

Vishwanath S
Updated On : 1 Jan 2014, 1:09 am

ಗುರುಮಠಕಲ್: ಇಂದಿನ ಬಾಬಾ ರಾಮದೇವ್ ಒಬ್ಬ ರಾಜಕೀಯ ಪಟು. ಒಂದು ಪಕ್ಷದ ವಕ್ತಾರಂತೆ ವರ್ತಿಸಿತ್ತಿರುವುದನ್ನು ನೋಡಿದರೆ ಅವರೊಬ್ಬ ಯೋಗಗುರು ಅಲ್ಲ, ಅವರೂ ಒಬ್ಬ ರಾಜಕಾರಿಣಿ ಎಂದು ತಿಳಿದು ಬರುತ್ತದೆ ಎಂದು ಯಾದಗಿರಿ ಜೆಡಿಎಸ್‌ನ ನಗರ ಅಧ್ಯಕ್ಷ ವಿಶ್ವನಾಥ ಸಿರವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
  ಹಿಂದಿನ ಕಾಲದಲ್ಲಿ ಅನೇಕ ರಸಋಷಿಗಳು ತಮ್ಮ ತಪಸ್ಸಿನ ಫಲದಿಂದ ಆತ್ಮಸಿದ್ದಿ ಆದ್ಯಾತ್ಮ ಜ್ಞಾನ, ಯೋಗ ಕಲಿತು ಸಮಾಜದ ಏಳ್ಗೆಗಾಗಿ ದುಡಿದ ಯೋಗಗುರುಗಳು ಇಂದು ಅಪರೂಪವಾಗಿದ್ದಾರೆ.
  ಹುಬ್ಬಳ್ಳಿಯ ಸಮಾವೇಶಮೊಂದರಲ್ಲಿ ಭಾಗವಹಿಸಿದ ಬಾಬಾ ರಾಮದೇವ್ ಯೋಗದ ಬಗ್ಗೆ ಆದ್ಯಾತ್ಮದ ಬಗ್ಗೆ ಮಾತನಾಡದೆ, ಒಬ್ಬ ರಾಜಕೀಯ ಪಟುವಿನಂತೆ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೋಲನುಭವಿಸಲಿದ್ದಾರೆ.
  ಗುಜರಾತ್‌ನ ನರೇಂದ್ರ ಮೋದಿ ಪ್ರಧಾನಿಯಾಗುವುದು ಖಚಿತ ಎಂದು ಸಮಾವೇಶದಲ್ಲಿ, ಸುದ್ದಿಗೋಷ್ಠಿಯಲ್ಲಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
  ಅಲ್ಲದೆ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ಮರಳಿ ಬಂದರೆ ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳು ಧೂಳಿಪಟವಾಗುತ್ತದೆ ಎಂದು ಹೇಳಿದ್ದಾರೆ.
ಇದೆಲ್ಲವನ್ನು ನೋಡಿದಾಗ ಪತಂಜಲಿ ಯೋಗ ಸಮಿತಿಯಲ್ಲಿ ಸೇರಿದ ಯೋಗಾಂಕ್ಷಿಗಳು ಅಥವಾ ಪಕ್ಷಾತೀತ ಸಾಮಾನ್ಯ ಸದಸ್ಯರು ಗೊಂದಲಕ್ಕೆ ಸಿಲುಕಿದಂತಾಗುತ್ತದೆ. ಹೀಗಾಗಿ ಬಾಬಾ ರಾಮದೇವ್ ಯೋಗಗುರುಗಳಾಗಿ ಯೋಗದ ಮಹತ್ವವೆನೆಂಬುದನ್ನು ಜನತೆಗೆ ತಿಳಿಸಿ ಕೊಡಲಿ, ಅದನ್ನು ಬಿಟ್ಟು ಯಾವುದೋ ಒಂದು ಪಕ್ಷದ ಪರ ಪ್ರಚಾರ ಮಾಡಿದರೆ ಅವರು ರಾಜಕೀಯ ಪಕ್ಷಕ್ಕೆ ಸೇರಿ ಪ್ರಚಾರ ಮಾಡಲಿ ಅಥವಾ ಯೋಗಗುರುವೆಂದು ಬಿಂಬಿಸುವುದಾದರೆ ರಾಜಕೀಯ ಮಾಡುವುದನ್ನು ಬಿಡಲಿ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement