ಸಂಭ್ರಮದ ಸಗರನಾಡು ಉತ್ಸವ
ಕನ್ನಡಪ್ರಭ ವಾರ್ತೆ ಶಹಾಪುರ ಡಿ.31
ಮಾತೆಯರೇ ನಮ್ಮ ಸಂಸ್ಕೃತಿ ಅವರಿಗೆ ನೀಡುವ ಗೌರವ ನಾಡಿಗೆ ಸಲ್ಲುತ್ತದೆ. ಅದಕ್ಕಾಗಿ ಹೆಣ್ಣುಮಕ್ಕಳನ್ನು ಗೌರವಿಸಬೇಕೆಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಗುಲ್ಬರ್ಗದ ವಿದ್ಯಾಧರ ಗುರುಜಿ ಅಭಿಪ್ರಾಯ ಪಟ್ಟರು.
ಪಟ್ಟಣದ ಸುಕ್ಷೇತ್ರ ಚರಬಸವೇಶ್ವರ ಗದ್ದುಗೆಯಲ್ಲಿ ಚರಬಸವೇಶ್ವರ ಸಂಗೀತ ಸೇವಾ ಸಮಿತಿಯ ವತಿಯಿಂದ ಆಯೋಜಿಸಿದ್ದ 16ನೇ “ÑÚVÚÁÚ«ÛsÚß D}ÚÓÈÚ’ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.
ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ಹೈಕ ಭಾಗದಲ್ಲಿ ಶ್ರೀಮಠವು ಕನ್ನಡದ ಚಟುವಟಿಕೆಗಳನ್ನು ಮಾಡುತ್ತಾ ಕನ್ನಡ ಕಲೆ, ಸಂಸ್ಕೃತಿಗಳನ್ನು ಎತ್ತಿ ಹಿಡಿಯತ್ತಾ ಕನ್ನಡದಮಠ ಎಂದೇ ಖ್ಯಾತಿ ಹೊಂದಿದೆ ಎಂದರು.
ಸಗರನಾಡು ಸಿರಿ ಪ್ರಶಸ್ತಿಯನ್ನು ಈ ಬಾರಿ ವಿದ್ಯಾಧರ ಗುರೂಜಿ, ಸೂಗಯ್ಯ ಹಿರೇಮಠ, ಡಾ. ಎಂ.ಎಸ್. ಶಿರವಾಳ, ಡಾ. ಅಬ್ದುಲ ಕರೀಂಗೆ ನೀಡಿ ಗೌರವಿಸಲಾಯಿತು. ಸೇವೆಯಿಂದ ನಿವೃತ್ತಿ ಹೊಂದಿದ ಗಣಿತಶಾಸ್ತ್ರ ತಜ್ಞಾರಾದ ಗುರುಬಸವಯ್ಯ ಗದ್ದುಗೆ ಇವರಿಗೆ ಸನ್ಮಾನಿಸಲಾಯಿತು. ನಟಿ ಜಯಶ್ರೀ ಹಾಗೂ ನಗೆ ಕೊಟ್ರೇಶೀ ಇವರು ಸಂಸ್ಕೃತಿ ಕಾರ್ಯಕ್ರಮವನ್ನು ನೃತ್ಯ ಹಾಕುವುದರೊಂದಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪಟ್ಟಣದ ಬಸವರಾಜೇಂದ್ರ ದೇಶಮುಖ, ಮಲ್ಲಣ್ಣ ಮಡ್ಡಿ, ಚಂದ್ರಶೇಖರ ಆರಬೋಳ, ಸಾಹಿತಿ ಎಲ್.ಬಿ.ಕೆ ಆಲ್ದಾಳ, ರಂಗಭೂಮಿ ಪೋಷಕ ಎಲ್.ಬಿ. ಶೇಖ್, ಸಿದ್ದರಾಮ ಹೊನ್ಕಲ್, ಬಸವರಾಜ ವಿಭೂತಿ ಹಳ್ಳಿ, ಸಿದ್ದಲಿಂಗಪ್ಪ ಆನೇಗುಂದಿ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಾನಿಧ್ಯವನ್ನು ಬಸವಶಾಂತಲಿಂಗ ಶ್ರೀ ಹಾವೇರಿ ಮತ್ತು ಬಸವಯ್ಯ ಶರಣರು ಗದ್ದುಗೆ ವಹಿಸಿದ್ದರು. ಸಮಿತಿಯ ಸಂಸ್ಥಾಪಕರಾದ ಶರಣು ಬಿ. ಗದ್ದುಗೆಯವರು ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯದರ್ಶಿಯಾದ ಎಸ್.ಜಿ. ಅಹಲ್ಯಾದೇವಿ ವಂದಿಸಿದರು. ನಾನಾ ಜಿಲ್ಲೆಗಳಿಂದ ಬಂದ ಕಲಾತಂಡ ಹಾಗೂ ಸ್ಥಳೀಯ ಕಲಾತಂಡಗಳ ಮನೋರಂಜನೆಗೆ ಸಾವಿರಾರು ಜನಸಂಖ್ಯೆ ತಡರಾತ್ರಿಯವರೆಗೆ ನಡೆದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.