ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹೆರೂರ್ ಮೂರ್ತಿ ಧ್ವಂಸ: ಕಿಡಿಗೇಡಿಗಳ ಬಂಧನಕ್ಕೆ ಮನವಿ

Vishwanath S
Updated On : 1 Jan 2014, 1:09 am

ಕನ್ನಡಪ್ರಭ ವಾರ್ತೆ  ಶಹಾಪುರ  ಡಿ.31
ಶಹಾಪುರ: ಜೇವಗರ್ ತಾಲೂಕಿನ ಇಟಗಾ ಗ್ರಾಮದಲ್ಲಿ ಶೋಷಿತ ಸಮುದಾಯಗಳ ಗಟ್ಟಿ ಧ್ವನಿ, ನಾಡು ಕಂಡ ಧೀಮಂತ ನಾಯಕ, ತಳಮಟ್ಟದ ಸಮುದಾಯಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟು ಹೋರಾಡಿದ ದಿ. ವಿಠ್ಠಲ್ ಹೆರೂರ್‌ರ ಮೂರ್ತಿಯನ್ನು ಧ್ವಂಸ ಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹಿಸಿ ಶಹಾಪುರ ತಾಲೂಕಾ ಕೋಲಿ ಸಮಾಜ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿಸಲಾಯಿತು.
  ಮೂರ್ತಿ ಭಗ್ನ ಮಾಡಿದ ಸ್ಥಳದಲ್ಲಿ ಸರ್ಕಾರದ ಕಡೆಯಿಂದ ಹೆರೂರ್‌ರ ಮೂರ್ತಿಯನ್ನು ಮರು ಸ್ಥಾಪನೆ ಮಾಡಬೇಕು, ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಸಣ್ಣ ನಿಂಗಣ್ಣ ನಾಯ್ಕೋಡಿ ಜಿಲ್ಲಾ ಗೌರವಾಧ್ಯಕ್ಷರು ಯಾದಗಿರಿ ಜಿಲ್ಲೆ, ಮಹಾದೇವಪ್ಪ ಸಾಲಿಮನಿ, ನಾಗೇಂದ್ರಪ್ಪ, ಬಸವರಾಜ ಕಂದಳ್ಳಿ, ಮಲ್ಲರೆಡ್ಡಿ ವಿಭೂತಿಹಳ್ಳಿ, ಗೋಪಾಲ ಹಳಿಸಗರ, ಮಾನಪ್ಪ ಹಾವಿನಹಾಳ, ಮರೆಪ್ಪ ನಾಯ್ಕೋಡಿ, ಕೃಷ್ಣಪ್ಪ ನಾಯ್ಕೋಡಿ, ಭೀಮಾಶಂಕರ ದೋರನಹಳ್ಳಿ, ಭೀಮರಾಯ ಶಿರವಾಳ, ನಾಗಪ್ಪ ರಸ್ತಾಪುರ, ಮಲ್ಲಿನಾಥ ಗೋಗಿ, ದೇವಣ್ಣಗೌಡ ಕಕ್ಕಸಗೇರಾ, ಸಾಹೆಬಗೌಡ ಅಪ್ಲೆ ಹಳಿಸಗರ, ಭೀಮರಾಯ ನಾಯ್ಕೋಡಿ, ಮರಿಲಿಂಗ ಬಸವರಾಜ ಕರಕಳ್ಳಿ, ಸಿದ್ದಲಿಂಗ ಶಿರವಾಳ, ಬನ್ನಪ್ಪ ಕನ್ಯೆಕೋಳುರ, ಭೀಮಣ್ಣ ಅಣಬಿ ಮರೆಪ್ಪ ದೊಡ್ಡಮನಿ, ಮರಿಲಿಂಗಪ್ಪ ಹಳಕಟ್ಟಿ, ಭೀಮರಾಯ ಗೊಗಿ, ಮಾನಪ್ಪ ಸೂಗುರ, ಹಣಮಂತ ಹಾಲಭಾವಿ, ಭೀಮರಾಯ ಸಾಲಿಮನಿ, ಅಂಬಯ್ಯ ಹೆಡಗಿಮದ್ರಿ, ಭೀಮರಾಯ ದ್ಯಾವಾಪುರ, ಭೀಮರಾಯ ಪೂಜಾರಿ, ಮರೆಪ್ಪ ತಳವಾರ, ಅಶೋಕ ಇಟಗಿ, ಮಾನಪ್ಪ ಹಾದಿಮನಿ ಪುರಸಭೆ ಹಾದಿಮನಿ, ಮಹಾದೇವಪ್ಪಗೌಡ ಕಟ್ಟಮನಿ ಗಂಗಾನಗರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement