ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಿಲ್ಲದ ಅತ್ಯಾಚಾರ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Lingaraj Badiger
Updated On : 2 Feb 2013, 11:17 am

ಅಫಜಲ್ಪುರ: ಮಹಿಳೆಯರು ಮತ್ತು ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಅವುಗಳನ್ನು ತಡೆಯಲು ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಜನವಾದಿ ಮಹಿಳಾ ಸಂಘಟನೆ ಹಾಗೂ ದಲಿತ ಸಂಘರ್ಷ ಸಮಿತಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಂಚಾಲಕ ಶ್ರೀಮಂತ ಬಿರಾದಾರ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರು ಒಂಟಿಯಾಗಿ ಮನೆ ಹೊರಗೆ ಹೋಗಲು ಭಯಪಡುವ ವಾತವರಣ ನಿರ್ಮಾಣವಾಗಿದೆ ಎಂದರು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷ ಶಂಕರೆಪ್ಪ ಮಣ್ಣೂರ ಮಾತನಾಡಿದರು.
ಹಿರಿಯ ವಕೀಲ ಶಂಕರಾವ ಹುಲ್ಲೂರ, ಡಿಎಸ್ಎಸ್ ಸಂಚಾಲಕ ಮಹಾಂತೇಶ ಬಡದಾಳ, ಅಶೋಕ ಗುಡ್ಡೊಡಗಿ, ದಯಾನಂದ ದೊಡ್ಡಮನಿ, ಮಹಾಲಿಂಗ ಅಂಗಡಿ, ಶ್ರೀಧರ ಗುಡ್ಡೊಡಗಿ, ನಾಗೇಶ ಹೊಸಮನಿ, ಸಿದ್ದು ಆರೆಕಾರ ಹಾಗೂ ಜನವಾದಿ ಮಹಿಳಾ ಸಂಘದ ಮುಖಂಡರಾದ ಭೌರಮ್ಮ ಭೂತೆ, ಯಾಸೀನಾ ನದಾಫ, ಜ್ಯೋತಿ ರುದ್ದೇವಾಡಿ, ಭಾಗಮ್ಮ ಮಣ್ಣೂರ, ನಾಗಮ್ಮ ತಳವಾರ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಹಸೀಲ್ದಾರ್ ರಾಜಾಪಟೇಲ್ ವಡಗೇರಿ ಮನವಿ ಸ್ವಿಕರಿಸಿ ಕ್ರಮಕ್ಕಾಗಿ ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement