ವಸತಿ ಯೋಜನೆಗೆ ಅರ್ಜಿ ಕಾರ್ಯಪಡೆ ಆಯ್ಕೆಗೆ ಅರ್ಜಿ
ಗುಲ್ಬರ್ಗ: ಚಿತ್ತಾಪುರ ಪುರಸಭೆ ವ್ಯಾಪ್ತಿಯಲ್ಲಿ ವಾಜಪೇಯಿ ನಗರ ವಸತಿ ಯೋಜನೆಯಡಿ 2010- 11 ನೇ ಸಾಲಿನಲ್ಲಿ ಅರ್ಹ ಫಲಾನುಭವಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 12 ಕೊನೆಯ ದಿನ. ವಿವರಕ್ಕೆ ಚಿತ್ತಾಪುರ ಪುರಸಭೆಯ ಶಾಖಾ ನಿರ್ವಾಹಕ/ಕಾರ್ಯಾಲಯದ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು.
ಗುಲ್ಬರ್ಗ: ಇಲ್ಲಿನ ನೆಹರು ಯುವ ಕೇಂದ್ರವು ರಾಷ್ಟ್ರೀಯ ಯುವಪಡೆ ಆಯ್ಕೆಗೆ ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಯು ತಾತ್ಕಾಲಿಕವಾಗಿದ್ದು, 10ನೇ ತರಗತಿ ತೇರ್ಗಡೆ ಹೊಂದಿರಬೇಕು. 18ರಿಂದ 25 ವಯೋವುತಿಯಲ್ಲಿರುವವರು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಸಲು ಫೆ.15 ಕೊನೆಯ ದಿನ.