ಗೋಪಾಲದಾಸರ ಆರಾಧನೆ
ಗುಲ್ಬರ್ಗ: ಇಲ್ಲಿನ ಬಿದ್ದಾಪುರ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುರಾಘವೇಂದ್ರ ಅಷ್ಟೋತ್ತರ ಪಾರಾಯಣ ಸಮೀತಿ ವರ್ಧಂತಿ ಮಹೋತ್ಸವದ್ಂಗವಾಗಿ ಕಲೆದೊಂದು ವಾರದಿಂದ ನಡೆದಿದ್ದ ಪಂಡಿತರಾದ ವಿನೋದಾಚಾರ್ಯ ಗಲಗಲಿ, ಪ್ರಸನ್ನಾಚಾರ್ಯ ಅವರ ಉಪನ್ಯಾಸ ಮಂಗಲ ಮಹೋತ್ಸವ ಕಾರ್ಯಕ್ರಮ ಮತ್ತು ಗೋಪಾಲದಾಸರ ಆರಾಧನೆ ಭಾನುವಾರ ನಡೆದವು.
ಗೋಪಾಲದಾಸರ ಆರಾಧನೆ ನಿಮಿತ್ತ ಇದೆ ಸಂದರ್ಭದಲ್ಲಿ ಪಾರಾಯಣ ಸಮಿತಿ ಸದಸ್ಯರಿಂದ ಶೋಭಾಯಾತ್ರೆ ನಡೆಯಿತು. ಗುರುರಾಯರ ವೃಂದಾವನಕ್ಕೆ ಪಂಚಾಮೃತ, ವಿಶೇಷ ಅಲಂಕಾರ ಸೇವೆ ನಡೆದವು.
ನವಲಿ ಕೃಷ್ಣಾಚಾರ್ಯ ಉಸ್ತುವಾರಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಿಆರ್ ಪಾಟೀಲ್, ಗುರುರಾಜ ದೇಸಾಯಿ, ಗೋಪಾಲರಾವ ಕುಲ್ಕರ್ಣಿ, ವಿಪ್ರ ಸಮಾಜ ಮುಖಂಡರು ಸೇರಿದಂತೆ ಅನೇಕರು ಭಾಗವಹಿಸಿದ್ದರು.