ದಲಿತರಿಗೆ ಪ್ರತ್ಯೇಕ ಬಜೆಟ್ ಮಂಡಿಸಿ: ಆಗ್ರಹ
ಗುಲ್ಬರ್ಗ: ದಲಿತ ಸಮಾಜದ ಏಳಿಗೆಗೆ ಸರ್ಕಾರ ಬದ್ಧವಾಗಿರಬೇಕು, ಕೃತಿಯಲ್ಲಿಯೂ ಬದ್ಧತೆ ಪ್ರತಿಫಲನವಾಗಬೇಕು ಎಂದಿರುವ ಆರ್‌ಪಿಐ ರಾಷ್ಟ್ರೀಯ ಮುಖಂಡ ರಾಮದಾಸ ಅಠವಳೆ ರಾಜ್ಯ ಸರ್ಕಾರ ತನ್ನ ವ್ಯಾಪ್ತಿಯ ದಲಿತ ಸಮುದಾಯ ಏಳಿಗೆಗೆ ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಗ್ರಹಿಸಿದ ಅವರು, ದಲಿತ ಸಮಾಜದ ಏಳಿಗೆಯೇ ಸರ್ಕಾರಗಳ ಗುರಿಯಾಗಿರಬೇಕು ಎಂದರಲ್ಲದೆ ದಲಿತರ ಉದ್ಧಾರದಿಂದ ಮಾತ್ರ ಸಮಾನ ಪ್ರಗತಿ ಸಾಧ್ಯ ಎಂದರು. ದಲಿತರು- ಶೋಷಿತ ಸಮಾಜದ ಮೇಲಿನ ದೌರ್ಜನ್ಯ ತಡೆಗೆ ಪ್ರತ್ಯೇಕ ಪೊಲೀಸ್ ಫೋರ್ಸ್ ರಚಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಆರ್‌ಪಿಐ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ, ಹಿರಿಯ ಮುಖಂಡ ಶಿವರಾಂ ಮೋಘಾ ಮತ್ತಿತರರು ಉಪಸ್ಥಿತರಿದ್ದರು.