ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಾಲ್ಮೀಕಿ ಸಮುದಾಯ ಜನಪ್ರತಿನಿಧಿಗಳ ನಿರ್ಲಕ್ಷ್ಯ

Lingaraj Badiger
Updated On : 5 Feb 2013, 11:05 am

ಸುರಪುರ:  ವಾಲ್ಮೀಕಿ ಸಮುದಾಯ ತಾಲೂಕಿನಲ್ಲಿ ದೊಡ್ಡ ಸಮುದಾಯವಾಗಿದೆ. ಆದರೆ ಸಂಘಟನೆ ಕೊರತೆಯಿಂದ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ಕಾರಣ ತಾಲೂಕಿನಾದ್ಯಂತ ವಾಲ್ಮೀಕಿ ಸಮುದಾಯದವರು ಸಂಘಟಿತರಾಗಬೇಕೆಂದು ಸಮಾಜದ ಮುಖಂಡ ಭೀಮಣ್ಣ ಹಳ್ಳಿಗೌಡ ಕರೆ ನೀಡಿದರು.
  ತಾಲೂಕಿನ ತಿಂಥಣಿ ಮೌನೇಶ್ವರ ದೇವಸ್ಥಾನದಲ್ಲಿ ಸೋಮವಾರ ಜರುಗಿದ ವಾಲ್ಮೀಕಿ ಸಮಾಜದ ಸಭೆಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ವಿವಿಧ ಪಕ್ಷಗಳಲ್ಲಿರುವ ನಮ್ಮ ಸಮದಾಯದವರು ಶಾಸಕ, ಸಚಿವರಾಗಿದ್ದಾರೆ. ಸಮುದಾಯದ ಮತಗಳನ್ನು ಪಡೆದು ಅಧಿಕಾರಕ್ಕೆ ಬರುವ ಯಾವೊಬ್ಬ ಜನಪ್ರತಿನಿಧಿ ಇದುವರೆಗೂ ಸಮಾಜದ ಅಭಿವೃದ್ಧಿಯತ್ತ ಗಮನ ಹರಿಸುತ್ತಿಲ್ಲ ಎಂದು ದೂರಿದರು.
ಸಂಘಟಿತರಾಗದೇ ಬೇರೆ ದಾರಿಯಿಲ್ಲ: ನಾವೆಲ್ಲ ಸಂಘಟಿತರಾದಾಗ ಜನಪ್ರತಿನಿಧಿಗಳು ನಮ್ಮತ್ತ ಗಮನಹರಿಸುತ್ತಾರೆ. ಕಾರಣ ಸಂಘಟಿತರಾಗಿ ಸರ್ಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಯಾಗಬೇಕೆಂದು ಸಲಹೆ ನೀಡಿದರು.
  ಅಧ್ಯಕ್ಷತೆ ವಹಿಸಿದ್ದ ರಾಜಾ ಲಕ್ಷ್ಮೀನಾರಾಯಣ ನಾಯಕ, ವಾಲ್ಮೀಕಿ ಸಮಾಜದ ಹಿತರಕ್ಷಣೆಗಾಗಿ ತಾಲೂಕಿನಾದ್ಯಂತ ಯುವಪಡೆಯ ಗ್ರಾಮಘಟಕ ಸ್ಥಾಪನೆ ಮಡಲಾಗುತ್ತಿದೆ. ಇದಕ್ಕೆ ಸಮುದಾಯದ ಜನರು ಸಹಕಾರ ನೀಡಬೇಕು. ಮುಂಬರುವ ಚುನಾವಣೆಯಲ್ಲಿ ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡುವ ವ್ಯಕ್ತಿಯನ್ನು ಮಾತ್ರ ಬೆಂಬಲಿಸಬೇಕು. ಸಮಾಜದ ತಾಲೂಕು ಘಟಕ್ಕೆ ನೂತನ ಪದಾಧಿಕಾರಿಗಳನ್ನು ನೇಮಿಸಲು ಪಟ್ಟಣದ ಟೇಲರ್ ಮಂಜಿಲ್‌ನಲ್ಲಿ ಫೆ.10ರಂದು ಸಭೆ ಕರೆಯಲಾಗುವುದು ಎಂದರು.
ಶೀಘ್ರ ಸಭೆ ಕರೆಯಿರಿ: ಸಾನ್ನಿಧ್ಯ ವಹಿಸಿದ್ದ ಗೋಲಪಲ್ಲಿ ವಾಲ್ಮೀಕಿ ಗುರುಪೀಠದ ವರದಾನೇಶ್ವರ ಸ್ವಾಮೀಜಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಗುರುಪೀಠದ ಅಭಿವೃದ್ಧಿ ಸೇರಿದಂತೆ ವಿಭಾಗೀಯ ಗುರುಪೀಠ ಸ್ಥಾಪನೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಚರ್ಚಿಸಲು ಗೋಲಪಲ್ಲಿ ಗುರುಪೀಠದಲ್ಲಿ ಶೀಘ್ರದಲ್ಲಿ ಸಭೆ ಕರೆಯಬೇಕು ಎಂದು ಸಲಹೆ ನೀಡಿದರು.
  ರಾಜಾ ಹರ್ಷವರ್ದನ ನಾಯಕ, ಉಪೇಂದ್ರನಾಯಕ, ಅನೀಲಕುಮಾರ ಇಟ್ಟಂಗಿ, ಅಶೋಕ ಕವಲಿ, ದಶರಥದೊರಿ, ವೆಂಕಟೇಶ ಕುಪ್ಪಗಲ್, ಬಸವಣ್ಣೆಪ್ಪ ಕಾಮನಟಗಿ, ಶರಣು ಮಕಾಶಿ, ದೇವಿಂದ್ರಪ್ಪ ಹೆಮನೂರ, ಹಣಮಂತರಾಯ ಬೆನಕನಳ್ಳಿ, ಬಸವರಾಜ ಹೆಮ್ಮಡಗಿ, ರಾಮಕೃಷ್ಣ ಪುಜಾರಿ, ಮೌನೇಶ ನಾಯಕ ಡೊಣ್ಣೆಗೇರಿ, ಪರಮಾನಂದ ಗಿರಿಕಾರ ಇತರರಿದ್ದರು. ಗಮಗಾದರ ನಾಯಕ ಸ್ವಾಗತಿಸಿದರು. ಲಕ್ಷ್ಮಣ ನಾಯಕ ನಿರೂಪಿಸಿ, ವಂದಿಸಿದರು.
---
ಏ.7ರಂದು ಲಲಿತಕಲಾ ಅಕಾಡೆಮಿಗೆ ಚುನಾವಣೆ
ಗುಲ್ಬರ್ಗ: ಕೇಂದ್ರ ಲಲಿತಕಲಾ ಅಕಾಡೆಮಿ ಸದಸ್ಯರ ಚುನಾವಣೆ ಘೋಷಣೆಯಾಗಿದೆ. ಫೆ.7ರವರೆಗೆ ನಾಮನಿರ್ದೇಶನ, ಫೆ.11ರಂದು ನಾಮನಿರ್ದೇಶನ ಹಿಂಪಡೆಯುವುದು. ಫೆ.13ರಂದು ನಾಮನಿರ್ದೇಶನ ಪರಿಶೀಲನೆ ನಡೆಯಲಿದೆ. ಚುನಾವಣೆ ಏ.7ರಂದು ಬೆಳಗ್ಗೆ 10ರಿಂದ 4 ಗಂಟೆಯವರೆಗೆ ಜರುಗಲಿದೆ. ಅದೇ ದಿನ 4.30 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ನಾಮನಿರ್ದೇಶನ ನಮೂನೆಗಳನ್ನು ಎಲ್‌ಕೆಎ ವೆಬ್‌ಸೈಟ್‌ದಿಂದ ಪಡೆಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement