ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಬ್ಬಲಿಗರ ಬೇಡಿಕೆ ಸಂಪುಟದಲ್ಲಿ ಪ್ರಸ್ತಾಪಿಸುವೆ: ಬೆಳಮಗಿ

Lingaraj Badiger
Updated On : 7 Feb 2013, 10:59 am

ಆಳಂದ: ಬಹುದಿನಗಳ ಬೇಡಿಕೆಯಾದ ಕೋಲಿ ಅಥವಾ ಕಬ್ಬಲಿಗ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ(ಎಸ್‌ಟಿ) ಸೇರ್ಪಡೆಗೊಳಿಸುವ ವಿಚಾರವಾಗಿ ಸಂಪುಟದಲ್ಲಿ ಪ್ರಸ್ತಾಪಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ಭರವಸೆ ನೀಡಿದರು.
ತಾಲೂಕಿನ ನರೋಣಾ ಗ್ರಾಮದಲ್ಲಿ ಕೋಲಿ ಸಮಾಜ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಕೋಲಿ ಸಮಾಜದ ರಾಜ್ಯ ಮುಖಂಡ ವಿಠ್ಠಲ ಹೆರೂರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶೋಷಣೆಗೆ ಒಳಗಾದ ಸಮಾಜಗಳನ್ನು ಸಂಘಟಿಸಿ ಮುನ್ನಡೆಸಲು ಶಿಕ್ಷಣ ಅವಶ್ಯ ಎಂದರು.
15 ವರ್ಷದಿಂದ ಪ.ಪಂಗಡಕ್ಕೆ ಕೋಲಿ ಸಮಾಜವನ್ನು ಸೇರಿಸಲು ನಿರಂತರ ಹೋರಾಟ ನಡೆಯುತ್ತಿದೆ. ಈ ಕುರಿತು ಮೈಸೂರಿನ ಬುಡಕಟ್ಟು ಸಂಶೋಧನಾ ಕೇಂದ್ರ ವಿಳಂಬ ಮಾಡುತ್ತಿದ್ದು. ಕೂಡಲೇ ಈ ಭಾಗದ ಸಚಿವರು ಸರ್ಕಾರದ ಮೇಲೆ ಒತ್ತಡ ತಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಆಗ್ರಹಿಸಿದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ಡಿ.ಜಿ. ಸಾಗರ, ಜಿಪಂ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ, ಕೋಲಿ ಸಮಾಜದ ಜಿಲ್ಲಾಧ್ಯಕ್ಷ ರವಿರಾಜ ಕೋರವಿ ಮಾತನಾಡಿದರು. ಸ್ಥಳೀಯ ಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಕ್ಷೇಮಲಿಂಗ ನಾಟಿಕಾರ ಅಧ್ಯಕ್ಷತೆ ವಹಿಸಿದರು.  ಜಿಪಂ ಸದಸ್ಯೆ ಮಂಗಲಾ ನರೋಣಿ, ಮಾಜಿ ಸದಸ್ಯ ಶಿವರಾಜ ಭಾಸಗಿ, ತಾಪಂ ಸದಸ್ಯ ಮಲ್ಲಿನಾಥ ಮದಲಿ, ನೌಕರರ ಸಂಘದ ರಾಜ್ಯಾಧ್ಯಕ್ಷ ಬಾಬುರಾವ ಬಾದನಳ್ಳಿ, ಗ್ರಾಪಂ ಅಧ್ಯಕ್ಷ ಸಿದ್ರಾಮಪ್ಪ ನಾಟಿಕಾರ, ಪಿಎಸ್‌ಐ ವಿನಾಯಕ, ಲಕ್ಷ್ಮೀಪುತ್ರ ಸಂಗೋಳಗಿ ಪಾಲ್ಗೊಂಡಿದ್ದರು. ಸಿದ್ದಪ್ಪ ಮಹಾಗಾಂವ ಪ್ರಾಸ್ತಾವಿಕವಾಗಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement