ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಟಿಕೇಟ್‌ಗಾಗಿ ಅರ್ಜಿ ಸಲ್ಲಿಕೆ

Lingaraj Badiger
Updated On : 7 Feb 2013, 11:00 am

ಚಿಂಚೋಳಿ: ಜಿಲ್ಲೆಯ ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ಕಾಂಗ್ರೆಸನಿಂದ ಸ್ಪರ್ಧಿಸಲು ಐವರು ಟಿಕೆಟ್ ಆಕಾಂಕ್ಷಿಗಳು ಕೆಪಿಸಿಸಿ ಬೆಂಗಳೂರಿನ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಸಚಿವ ಬಾಬುರಾವ ಚವ್ಹಾಣ, ಜಿಪಂ ಮಾಜಿ ಅಧ್ಯಕ್ಷ ಭೀಮರಾವ ತೇಗಲತಿಪ್ಪಿ, ಡಾ. ಉಮೇಶ ಜಾಧವ್, ತಾಪಂ ಮಾಜಿ ಅಧ್ಯಕ್ಷ ಶಾಮರಾವ ರಾಠೋಡ್, ಮೇಘರಾಜ್ ರಾಠೋಡ್ ಅರ್ಜಿ ಸಲ್ಲಿಸಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.
ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಗುಲ್ಬರ್ಗ: ರಸ್ತೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳಿಗೆ ಆಗ್ರಹಿಸಿ ನಗರದಲ್ಲಿ ಬುಧವಾರ ನಾಗರಿಕ ಸಮಿತಿ ಪ್ರತಿಭಟನೆ ನಡೆಸಿತು.ಪ್ರತಿಭಟನೆ ಅಂಗವಾಗಿ ಸರ್ದಾರ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿ ಬಹಿರಂಗ ಸಭೆ ನಡೆಸಲಾಯಿತು. ರಸ್ತೆ ಕಾಮಗಾರಿಗಳ ಆಮೆವೇಗ ಖಂಡಿಸಲಾಯಿತು. ಕುಡಿಯುವ ನೀರು, ಚರಂಡಿ ಸಮಸ್ಯೆಯಿಂದ ನಗರ ನರಳುತ್ತಿದ್ದರೂ ಯಾರೂ ಕೇಳುವವರಿಲ್ಲ ಎಂದು ಹೋರಾಟಗಾರರು ಜಿಲ್ಲಾಡಳಿತದ ವಿರುದ್ಧ ಘೋಷಣೆ ಹಾಕಿದರು. ಶೀಘ್ರವಾಗಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. ಕೆ.ವಿ. ಕಲ್ಬುರ್ಗಿ, ಸಂಜಯ ಮಾಕಲ್, ವಿ. ನಾಗಮ್ಮಾಳ್, ವಿ.ಜಿ. ದೇಸಾಯಿ, ಭುವನೇಶ್ವರಿ ಖೋಡ್ ಭಾಗವಹಿಸಿದ್ದರು.
ಅಕ್ರಮ ಮರಳು; ದೂರು
ಶಹಾಬಾದ್: ಪಟ್ಟಣದ ಸುತ್ತಲಿನ ನದಿ ತೀರದ ಗ್ರಾಮಗಳಾದ ಇಂಗಳಗಿ, ಚಾಮನೂರ, ಕುಂದನೂರ ಗ್ರಾಮಗಳಲ್ಲಿ ರಾತೋರಾತ್ರಿ ಅಕ್ರಮವಾಗಿ ಮರಳನ್ನು ಸಾಗಿಸಲಾಗುತ್ತಿದೆ ಎಂದು ಕರವೇ ಅಧ್ಯಕ್ಷ ಸಿದ್ದು ಪಂಚಾಳ ವಾಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ, ಸರ್ಕಾರಕ್ಕೆ ಕಂದಾಯ ಕಟ್ಟದೆ  ಅಕ್ರಮ ದಂಧೆ ನಡೆಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಅಕ್ರಮವಾಗಿ ಮರಳು ಸಾಗಿಸುವ ವಾಹನಗಳನ್ನು ತಡೆದು ಪೊಲೀಸರ ವಶಕ್ಕೆ ಒಪ್ಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಕರವೇ ಸದಸ್ಯರಾದ ಮಹ್ಮದ ಇಸ್ಮಾಯಿಲ್ ಜಿಲಾನಿ, ಅಂಬ್ರೇಶ ಮಾಳಗಿ, ಮಹ್ಮದ ಅಶ್ರಫ್, ಸಲ್ಮಾನ್ ಖಾನ್, ಸಂತೋಷ ಗುತ್ತೇದಾರ, ಪಾಟೀಲ್, ಆಕಾಶ ಜಾಧವ ದೂರಿಗೆ ಬೆಂಬಲಿಸಿದ್ದಾರೆ.
ಬಿಎಸ್‌ಆರ್
ಕಾಂಗ್ರೆಸ್‌ಗೆ ನೇಮಕ
ಚಿಂಚೋಳಿ: ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿ ತಾಲೂಕು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷರನ್ನಾಗಿ ರವಿಶಂಕರರೆಡ್ಡಿ ಶಿವಶೆಟ್ಟಿ ಮುತ್ತಂಗಿ ಅವರನ್ನು ಪಕ್ಷದ ರಾಜಾಧ್ಯಕ್ಷ ಶ್ರೀರಾಮುಲು ನೇಮಕ ಮಾಡಿ ಆದೇಶ ನೀಡಿದ್ದಾರೆ ಎಂದು ಜಿಲ್ಲಾಧ್ಯಕ್ಷ ಕಲ್ಯಾಣರಾವ ಅಂಬಲಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement