ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೆಮ್ಮದಿ ಜೀವನಕ್ಕೆ ಉತ್ತಮ ಆರೋಗ್ಯ ಅಗತ್ಯ

Lingaraj Badiger
Updated On : 7 Feb 2013, 10:59 am

ಚಿತ್ತಾಪುರ: ಜೀವನದಲ್ಲಿ ಸಂತಸದಿಂದ ಹಾಗೂ ನೆಮ್ಮದಿಯಿಂದ ಬಾಳಲು ಮನುಷ್ಯನಿಗೆ ಉತ್ತಮ ಆರೋಗ್ಯ ಅಗತ್ಯ ಎಂದು ತಹಸೀಲ್ದಾರ್ ಬಾಲರಾಜ ದೇವರಖದ್ರಾ ಹೇಳಿದರು.
ಇಲ್ಲಿನ ಡಾ. ಓಂ ಇಂಡೋ ಜರ್ಮನ್ ಆಸ್ಪತ್ರೆಯಲ್ಲಿ ಗುಲ್ಬರ್ಗ ಲಯನ್ಸ್ ಕ್ಲಬ್ ಹಾಗೂ ಜ್ಯೋತಿ ಸೇವಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಬಾಲ್ಯದಿಂದಲೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು. ಧೂಮಪಾನ, ಮದ್ಯಪಾನದಿಂದ ದೂರವಿರಬೇಕು. ಒಳ್ಳೆಯ ತರಕಾರಿ, ಹಣ್ಣು- ಹಂಪಲು ಸೇವಿಸಬೇಕು. ಪ್ರತಿ ದಿನ ಯೋಗ, ವಾಯುವಿಹಾರ ಆಳವಡಿಸಿಕೊಳ್ಳಬೇಕು.
  ಆರೋಗ್ಯ ಉತ್ಮಮವಾಗಿದ್ದರೆ ಶೈಕ್ಷಣಿಕವಾಗಿ ಸುಧಾರಣೆಯಾಗಿ ಈ ದೇಶದ ಉತ್ತಮ ನಾಗರಿಕನಾಗಿ ಹೊರಹೊಮ್ಮುತ್ತಾನೆ. ಜತೆಗೆ ಆಯುಷ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಗುಲ್ಬರ್ಗ ನೃಪತುಂಗ ಲಯನ್ಸ್ ಕ್ಲಬ್ ಅಧ್ಯಕ್ಷ ಮಧೂಸೂದನ್ ಶಾಸ್ತ್ರೀ, ತಹಸೀಲ್ದಾರ್ ಮಲ್ಲೇಶ ತಂಗಾ, ನ್ಯಾಯವಾದಿ ಚಂದ್ರಶೇಖರ ಅವಂಟಿ, ಕ್ಲಬ್ ಹಿರಿಯ ಸದಸ್ಯೆ ಸುನಂದಾ ಮಾಮಡಿ, ಶಿವರಾಜ ಪಾಟೀಲ್, ಹಣಮಯ್ಯ ಬಲುರೆ, ಯೋಜನಾ ವ್ಯವಸ್ಥಾಪಕಿ ಸಿಸ್ಟ್‌ರ್ ಲೂಸಿಪ್ರಿಯಾ, ಸಿಸ್ಟರ್ ಸೆಲನ್, ಸಿಸ್ಟರ್ ಜೂಲಿ, ಮಹಾದೇವ ಅಂಗಡಿ, ಸಾಯಬಣ್ಣ ಮಳಖೇಡ, ಆರ್.ಬಿ. ತಾವರೆ, ಆನಂದ ಮುಕ್ತೆದಾರ ಉಪಸ್ಥಿತರಿದ್ದರು.
 ಡಾ. ಫ್ಲಾವಿಯಾ ಹಾಗೂ ಡಾ. ಶರಣಮ್ಮ ಅವರು 71ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮಾಡಿದರು. ಹಾಗೂ ಒಳ ರೋಗಿಗಳಿಗೂ ತಪಾಸಣೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement