'6 ದಶಕದಲ್ಲಿ ಕಾಣದ ಪ್ರಗತಿ 4ಕ್ಕೆ ವರ್ಷದಲ್ಲಿ'
ಚಿತ್ತಾಪುರ: ಕಳೆದ 6 ದಶಕದಲ್ಲಿ ಚಿತ್ತಾಪುರ ಕಾಣದ ಪ್ರಗತಿ 4 ವರ್ಷಗಳಲ್ಲಿ ಕಂಡಿದೆ ಎಂದು ಶಾಸಕ ವಾಲ್ಮೀಕಿ ನಾಯಕ ಹೇಳಿದ್ದಾರೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಗತಿ ಕೆಲಸಗಳು ಹೆಚ್ಚು ಶುರುವಾಗಿವೆ ಎಂದು ಅವರು ತಾಲೂಕಿನ ಬಾಗೋಡಿ ಗ್ರಾಪಂ ಆವರಣದಲ್ಲಿ 68.86 ಲಕ್ಷ ವೆಚ್ಚದ 5ನೇ ಹಂತದ ಸುವರ್ಣ ಗ್ರಾಮೋದಯ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ವಾಜಪೇಯಿ ಅವರ ಕನಸು ಹಳ್ಳಿಯಿಂದ ದಿಲ್ಲಿವರೆಗೆ ಅಭಿವೃದ್ಧಿ ಮಾಡುವುದು ಇಂದು ನನಸಾಗಿದೆ. ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ ಸೇರಿದಂತೆ ಹತ್ತಾರು ಯೋಜನೆಗಳು ಅನುಷ್ಠಾನಕ್ಕೆ ರಾಜ್ಯ ಬಿಜೆಪಿ ಸರ್ಕಾರ ತಂದಿದೆ ಎಂದು ಅವರು ಹೇಳಿದರು. ತಾಪಂ ಅಧ್ಯಕ್ಷ ಶರಣಗೌಡ ಪಾಟೀಲ್, ಸದಸ್ಯ ಸೂರ್ಯಕಾಂತ ಕಟ್ಟಿಮನಿ, ಮುಖಂಡ ಶಿವಲಿಂಗಪ್ಪ ಪಾಟೀಲ್, ಚಂದ್ರಶೇಖರ ದಿಗ್ಗಾಂವಕರ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಸರಸ್ವತಿ ಸಂಗಾವಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಡಾ. ಗುಂಡಣ್ಣ ಬಾಳಿ, ಯಂಕಾರೆಡ್ಡಿ ಯರಗಲ, ಸಿದ್ದಣ್ಣ ಕಲಶೆಟ್ಟಿ, ಪರಮೇಶ್ವರ ಕಲ್ಬುರ್ಗಿ, ಅಶೋಕ ಸೂರ್ಯವಂಶಿ, ಬಾಲಾಜಿ ಬುರುಬುರೆ, ನಾಗರಾಜ ಹೂಗಾರ, ಮಹೇಶ ಬಟಗೇರಿ, ಜಗದೇವಿ ಸೇರಿ, ತಹಸೀಲ್ದಾರ್ ಬಾಲರಾಜ ದೇವರಖದ್ರಾ, ಇಓ ಸುರೇಶ ಬಿರದಾರ, ನಂದಕುಮಾರ ಕುಲಕರ್ಣಿ ವೇದಿಕೆಯಲ್ಲಿದ್ದರು.
ದೇವಿಂದ್ರ ಅಣಕಲ್ ಪ್ರಾಸ್ತಾವಿಕ ಮಾತನಾಡಿದರು. ಕಲ್ಯಾಣಿ ಏರಿ ನಿರೂಪಿಸಿದರು.