ಮಾ.1ರಂದು 6 ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಚಿಂಚೋಳಿ: ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ 1 ರಂದು ನಡೆಯಲಿದೆ. ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ವಿದ್ವಾಂಸ, ಜನಪದ ತಜ್ಞ ಪ್ರೊ. ಸೂಗಯ್ಯ ಹಿರೇಮಠ ಅವರನ್ನು ಆಯ್ಕೆಗೊಳಿಸಲಾಗಿದೆ ಎಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಭಾಶ ಶೀಲವಂತ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಹಿರಿಯ ಸಾಹಿತಿ ಜನಪದ ತಜ್ಞ ಪ್ರೊ. ಸೂಗಯ್ಯ ಹಿರೇಮಠ ಅವರನ್ನು ಸಮ್ಮೇಳನಾಧ್ಯಕ್ಷರೆಂದು ಕಸಾಪ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಸರ್ವ ಸಮ್ಮತವಾಗಿ ತೀರ್ಮಾನಿಸಿದ್ದಾರೆಂದರು.
ದಂಡಿನಕುಮಾರ್, ಜಯಪ್ಪಾ ಚಾಪೆಲ್, ಜಗನ್ನಾಥರೆಡ್ಡಿ ರಂಜೋಳ ಉಪಸ್ಥಿತರಿದ್ದರು.