ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಡಿಇಸಿ ಮಾತ್ರೆ ಸೇವನೆಯಿಂದ ಆನೆಕಾಲು ರೋಗ ತಡೆ

Parashurama
Updated On : 10 Feb 2013, 10:55 am

ಗುಲ್ಬರ್ಗ: ಆನೆಕಾಲು ರೋಗದಿಂದ ರಕ್ಷಣೆ ಹೊಂದಬೇಕಾದರೆ ವರ್ಷಕ್ಕೊಂದು ಬಾರಿ 5ರಿಂದ 7 ವರ್ಷಗಳವರೆಗೆ ತಪ್ಪದೇ ಡಿಇಸಿ(ಮುಂಜಾಗ್ರತಾ ಕ್ರಮವಾಗಿ) ಮಾತ್ರೆಗಳನ್ನು  ತೆಗೆದುಕೊಳ್ಳಬೇಕು. ಇದರಿಂದ ಆನೇಕಾಲು ರೋಗ ಬರುವುದನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಹೇಳಿದರು.
ರಾಷ್ಟ್ರೀಯ ಆನೆಕಾಲು ರೋಗ ನಿರ್ಮೂಲನೆ ಕಾರ್ಯಕ್ರಮದಡಿ 9ನೇ ಸುತ್ತಿನ ಸಾಮೂಹಿಕ ಔಷಧ ವಿತರಣಾ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡಿರುವ ಆನೆಕಾಲು ರೋಗ ನಿರ್ವಹಣೆ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಜಾಗ್ರತಾ ಕ್ರಮಗಳು: ಈ ರೋಗದಿಂದ ಬಳಲುತ್ತಿರುವವರು ತಮ್ಮ ಕಾಲುಗಳು ಮತ್ತು ಮಡಿಸಿದ ಚರ್ಮವನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು. ಕೀಟಾಣುಗಳು ತೇವಾಂಶವಿರುವ ಚರ್ಮದ ಮಡಿಕೆ ಹಾಗೂ ಬೆರಳುಗಳ ಸಂದುಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು, ಶುಭ್ರವಾದ ಒಣಗಿದ ಬಟ್ಟೆಯಿಂದ ಒರೆಸಿರಿ. ಮುಖ್ಯವಾಗಿ ಬೆರಳುಗಳ ಸಂದುಗಳಲ್ಲಿ ಚೆನ್ನಾಗಿ ಒರೆಸಬೇಕು. ಅಗತ್ಯವಿದ್ದರೆ(ಗಾಯಗಳು ಇದ್ದಲ್ಲಿ) ಆಂಟಿ ಬ್ಯಾಕ್ಟೀರಿಯಲ್ ಅಥವಾ ಆಂಟಿ ಫಂಗಲ್ ಮುಲಾಮು ಹಚ್ಚಿರಿ. ಯಾವಾಗಲೂ ಕಾಲಿನ ಅಳತೆಗೆ ತಕ್ಕ ಮೆದುವಾದ ಪಾದರಕ್ಷೆಗಳನ್ನು ಉಪಯೋಗಿಸಿರಿ. ಯಾವ ಸಮಯದಲ್ಲಾದರೂ, ಎಲ್ಲಾದರೂ, ಅನುಕೂಲವಾದಾಗ ಪ್ರತಿದಿನ ವ್ಯಾಯಾಮ ಮಾಡಬೇಕು. ರೋಗಿಯು ಮುಂಗಾಲುಗಳ ಮೇಲೆ ನಿಂತು ಕಾಲುಗಳನ್ನು ಮೇಲೆ ಕೆಳಗೆ ಆಡಿಸಿ, ಪಾದಗಳನ್ನು ಎಡದಿಂದ ಬಲಕ್ಕೆ ಮತ್ತು ಬಲದಿಂದ ಎಡಕ್ಕೆ ತಿರುಗಿಸಬೇಕು. ಈ ರೋಗಕ್ಕೆ ನಡಿಗೆಯು ಒಳ್ಳೆಯ ವ್ಯಾಯಾಮ. ಮುಖ್ಯವಾಗಿ ಕುಳಿತಾಗ ಅಥವಾ ಮಲಗಿದಾಗ ಕಾಲುಗಳು ಎತ್ತರದಲ್ಲಿರಿಸಬೇಕು ಎಂದರು.
ಹೆಚ್ಚು ತುರಿಕೆಯಿದ್ದಲ್ಲಿ ಕಾವಿನ ಆರೈಕೆ ಮಾಡಬೇಡಿ. ತುರಿಕೆಯಿರುವಲ್ಲಿ ಕೆರೆಯಬೇಡಿ, ಗಾಯ ಮಾಡಬೇಡಿ. ತೀವ್ರ ಜ್ವರ ಮತ್ತು ಅತಿಯಾದ ಸೋಂಕಿನಿಂದ ನರಳುತ್ತಿದ್ದರೆ ವ್ಯಾಯಾಮ ಮಾಡಬೇಡಿ. ತೀವ್ರ ಸೋಂಕು ಇದ್ದಾಗ ಕಾಲಿಗೆ ಬ್ಯಾಂಡೇಜ್ ಮಾಡಬೇಡಿ. ರೋಗಿಯು ಹೃದ್ರೋಯಾಗಿದ್ದರೆ ವೈದ್ಯರ ಸಲಹೆ ಪಡೆದ ನಂತರವೇ ವ್ಯಾಯಾಮ ಮಾಡಬೇಕೆಂದು ತಿಳಿಸಿದರು. ರೆಡ್‌ಕ್ರಾಸ್ ಸಂಸ್ಥೆಯ ಡಾ. ಮಲ್ಲಾರಾವ ಮಲ್ಲೆ, ಜಿಲ್ಲಾ ಮಲೇರಿಯಾ ವೈದ್ಯಾಧಿಕಾರಿ ಡಾ. ವರ್ಮಾ ಮತ್ತಿತರರು ಇದ್ದರು. ಇದೇ ವೇಳೆ ಆನೆಕಾಲು ರೋಗಿಯ ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments