ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಮತೋಲ ಆಹಾರದಿಂದ ಅಪೌಷ್ಟಿಕತೆ ದೂರ

Parashurama
Updated On : 10 Feb 2013, 11:03 am

ಯಾದಗಿರಿ: ಕೇವಲ ಒಂದೇ ರೀತಿಯ ಆಹಾರ ಸೇವನೆಯಿಂದ ಮಾನವನ ದೇಹಕ್ಕೆ ಅಗತ್ಯವಿರುವವ ಪೋಷಕಾಂಶಗಳು ದೊರೆಯುವುದಿಲ್ಲ. ಸಮತೋಲಿತ ಆಹಾರ ಸೇವನೆಯಿಂದ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಲಭಿಸುತ್ತದೆ. ಇದರಿಂದ ಅಪೌಷ್ಟಿಕತೆಯನ್ನು ನಿವಾರಿಸಬಹುದು ಎಂದು ಕಿರಣ ರೂರಲ್ ರಿಕನ್ಸ್‌ಟ್ರಕ್ಷನ್ ಸೊಸೈಟಿ ಕಾರ್ಯದರ್ಶಿ ಎಂ.ಎಂ. ಶಿರಹಟ್ಟಿ ಹೇಳಿದರು.
ಉತ್ತಮ ಆರೋಗ್ಯ: ಜಿಲ್ಲಾ ವಾರ್ತಾ ಇಲಾಖೆ, ಕಿರಣ ರೂರಲ್ ರಿಕನ್ಸ್‌ಟ್ರಕ್ಷನ್ ಸೊಸೈಯಿಟಿ ಹಾಗೂ ಸಹಜೀವನ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಶಹಾಪುರ ತಾಲೂಕಿನ ಕುರಕುಂದಾ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಅಪೌಷ್ಟಿಕತೆ ಸಮಸ್ಯೆ ಮತ್ತು ಪರಿಹಾರ ಕುರಿತ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಉತ್ತಮ ಅಹಾರ ಪದಾರ್ಥಗಳ ಸೇವನೆಯಿಂದ ಮಾನವ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಸತ್ವಭರಿತ ಆಹಾರ ಪದಾರ್ಥಗಳಿಗೆ ಕೊರತೆಯೇನಿಲ್ಲ. ಮನೆಯೊಳಗೆ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳಿರುತ್ತವೆ. ಬದಲಾಗುತ್ತಿರುವ ಜೀನವ ಶೈಲಿಯಿಂದ ಆಹಾರ ಸೇವನೆಯಲ್ಲಿಯೂ ಬದಲಾವಣೆ ಕಂಡುಬರುತ್ತಿದೆ. ನಗರ ಪ್ರದೇಶಗಳಲ್ಲಿ ಲಭಿಸುವ ಸಿದ್ಧ ಆಹಾರ ಪದಾರ್ಥಗಳಲ್ಲಿ ಅಷ್ಟಾಗಿ ಪೌಷ್ಟಿಕಾಂಶವಿರುವುದಿಲ್ಲ. ಕಾಳುಗಳು ಹಾಗೂ ತರಕಾರಿಯಲ್ಲಿ ಹೆಚ್ಚಿನ ವಿಟಮಿನ್ ಅಂಶಗಳು ಇವೆ. ಇವುಗಳ ಸೇವನೆಯಿಂದ ಅಪೌಷ್ಟಿಕತೆಯನ್ನು ತಡೆಗಟ್ಟಬಹುದು. ಪೌಷ್ಟಿಕ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ ಶರೀರವು ಸಾಮಾನ್ಯವಾದ ರೀತಿಯಲ್ಲಿ ಬೆಳವಣಿಗೆಯಾಗುವುದಿಲ್ಲ ಎಂದರು.
ಹಲವು ಕಾರಣ: ಅಪೌಷ್ಟಿಕತೆಗೆ ಬಡತನ, ಆರೋಗ್ಯ ಶಿಕ್ಷಣ, ಲಿಂಗ ತಾರತಮ್ಯ, ಸ್ವಚ್ಛತೆ ಅನುಸರಿಸದಿರುವುದು ಸೇರಿದಂತೆ ಸಾಕಷ್ಟು ಕಾರಣಗಳಿವೆ. ಅಪೌಷ್ಟಿಕತೆ ನಿವಾರಣೆಗೆ ಸರ್ಕಾರದಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಆರೋಗ್ಯ ಇಲಾಖೆ ವತಿಯಿಂದ ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸ್ಥಳೀಯ ಗ್ರಾಪಂ ಅಧ್ಯಕ್ಷ ಶರಣಪ್ಪ ನಾಗಣ್ಣ ಅವಣ್ಣೂರ ಮಾತನಾಡಿದರು. ಗ್ರಾಪಂ ಸದಸ್ಯ ಪರಶುರಾಮ, ಮುಖಂಡ ಬಸವರೆಡ್ಡಿ ಇದ್ದರು. ಶಾಲೆಯ ಮುಖ್ಯಾಧ್ಯಾಪಕ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ. ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿ ಶಿಕ್ಷಕ ಕರಣಪ್ಪ ಸಜ್ಜನ್ ನಿರೂಪಿಸಿ ಸಿದ್ದೇಶ್ವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments