ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಡಿಬಿಡಿಯಲ್ಲಿ ದ್ವಿಶಕ್ತಿ ಸಮ್ಮಿಲನ: ಮಾಲಕ ರೆಡ್ಡಿ

Lingaraj Badiger
Updated On : 11 Feb 2013, 11:26 am

ಯಾದಗಿರಿ: ತಡಿಬಿಡಿ ಗ್ರಾಮದಲ್ಲಿ ಸಾತ್ವಿಕ ಮತ್ತು ರಜಸ್ಸು ಶಕ್ತಿಗಳ ಸಮ್ಮಿಲನವಾಗಿದೆ. ಇವೆರಡೂ ಗುಣಗಳನ್ನು ಹೊಂದಿರುವ ಮಹಾನ್ ಪುರುಷರ ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
  ಶಹಾಪುರ ತಾಲೂಕಿನ ತಡಿಬಿಡಿ ಗ್ರಾಮದಲ್ಲಿ ಕನಸದಾಸರ ಕಟ್ಟೆ ಮತ್ತು ಕಾಂತ್ರಿವೀರ ಸಂಗೊಳ್ಳಿ ಯಾರಣ್ಣ ವೃತ್ತ ಉದ್ಘಾಟಿಸಿ ಅವರು ಮಾತನಾಡಿದರು. ಸಾತ್ವಿಕರಾದ ಕನಕದಾಸರ ಮತ್ತು ರಾಜಸ ಶಕ್ತಿ ಹೊಂದಿರುವ ಕಾಂತ್ರಿಕಾರಿ ಸಂಗೋಳ್ಳಿ ರಾಯಣ್ಣನ  ವೃತ್ತ ಸ್ಥಾಪಿಸಿವುದು ಶ್ಲಾಘನೀಯ. ದೇಶಕ್ಕಾಗಿ ತಮ್ಮ ಪ್ರಾಣವನ್ನೆ ತೆತ್ತ ಸಂಗೊಳ್ಳಿ ರಾಯಣ್ಣನವರ ವ್ಯಕ್ತಿತ್ವ ಮತ್ತು ಕನಕದಾಸರ ಆದರ್ಶವನ್ನು ಜೀವನದಲ್ಲಿ ಪ್ರತಿಯೊಬ್ಬರು ಬೆಳೆಸಿಕೊಂಡು ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಕಿವಿಮಾತು ಹೇಳಿದರು.
  ಬಸವರಾಜಪ್ಪ ವಿಭೂತಿಹಳ್ಳಿ ಮಾತನಾಡಿ, ಕುರುಬ ಸಮಾಜ ಒಂದಾಗಲು ಮತ್ತು ಸಂಘಟಿತರಾಗಲು ಕನಕದಾಸರ ಮತ್ತು ಸಂಗೊಳ್ಳಿ ರಾಯಣ್ಣ ಕಾರಣ ಎಂದು ತಿಳಿಸಿದರು. ಸಿದ್ದಣ್ಣಗೌಡ ಕಾಡಂನೋರ ಮಾತನಾಡಿದರು. ಮಾಳಪ್ಪ ಪೂಜಾರಿ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ಬಸವರಾಜಪ್ಪಗೌಡ ಮಾಲಿಪಾಟೀಲ್, ಶಾಂತರಡ್‌ಡಿ ದೇಸಾಯಿ, ರಂಗಣ್ಣಗೌಡ ಪಾಟೀಲ್ ದೇವಿಕೇರಿ, ಅಬ್ದುಲ್ ಬಾಷಾ, ಹಣಮಂತರಾಯ ವಡೇರ, ಭೀಮಣ್ಣ ಜಂಗಳ್ಳಿ, ರಂಗನಗೌಡ ಕಿಲ್ಲನಕೇರಿ, ಕೃಷ್ಣ ಬೈಲಾಪುರ, ಸಾಹೇಬರೆಡ್ಡಿ, ಸಿದಲಿಂಗಪ್ಪ ಗುಂಡಳ್ಳಿ, ಕ್ಯಾತನಾಳ, ಹಣಮಂತರಾಯ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement