ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಕ್ಕಳಲ್ಲಿ ವೃತ್ತಿ ಕೌಶಲ್ಯ ಅಗತ್ಯ: ಸೈಯಿದಾ

Lingaraj Badiger
Updated On : 11 Feb 2013, 11:25 am

ಯಾದಗಿರಿ: ದೈನಂದಿನ ಓದಿನ ಜತೆಗೆ ಮಕ್ಕಳಲ್ಲಿ ವೃತ್ತಿ ಕೌಶಲ್ಯ ಬೆಳೆಸುವ ಅಗತ್ಯವಿದೆ. ಇದು ಮಕ್ಕಳ ಭವಿಷ್ಯದಲ್ಲಿ ಸಹಕಾರಿಯಾಗಲಿದೆ ಎಂದು ಡಯಟ್ ಪ್ರಾಂಶುಪಾಲೆ ಟಿ.ಜಿ. ಸೈಯಿದಾ ಕರೆ ನೀಡಿದರು.   
  ನಗರದ ಸ್ಟೇಷನ್ ಬಜಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ಮಕ್ಕಳ ವೃತ್ತಿ ಶಿಕ್ಷಣ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣಾಧಿಕಾರಿ ನಾಸಿರುದ್ದೀನ್ ಮಾತನಾಡಿ, ಮಕ್ಕಳು ಸಿದ್ಧಪಡಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸುವ ಮೂಲಕ ಇತರ ಮಕ್ಕಳಲ್ಲಿ ಆಸಕ್ತಿ ಹಟ್ಟಿಸಲು ಪ್ರಯತ್ನಿಸಲಾಗುತ್ತಿದೆ. ಶಿಕ್ಷಕ ಲಿಂಗಪ್ಪ ಪ್ರಾಸ್ತಾವಿಕ, ಕ್ಷೇತ್ರ ಶಿಕ್ಷಣಾಧಿಕಾರಿ ಮಜರ ಹುಸೇನ್, ಡಿ. ಹೊಸಮನಿ, ಆಶಪ್ಪ ಗಾಜರಕೋಟೆ, ವಿ.ಎಸ್. ಹಿರೇಮಠ, ವೆಂಕೋಬ, ರಾಮಲಿಂಗಪ್ಪ, ಶಂಕರಲಿಂಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement