ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಾಶ್ವತ ಕುಡಿವ ನೀರಿನ ಯೋಜನೆಗೆ ಶಾಸಕ ದರ್ಶನಾಪುರ ಚಾಲನೆ

Lingaraj Badiger
Updated On : 12 Feb 2013, 11:31 am

ಕೆಂಭಾವಿ: ತಿಂಗಳಾಂತ್ಯದೊಳಗೆ ಕಾಮಾಗಾರಿ ಮುಗಿಸಿ ಜನರಿಗೆ ಬೇಸಿಗೆಯಲ್ಲಿ ಕುಡಿವ ನೀರಿನ ತೊಂದರೆಯಾಗದಂತೆ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು. ಸಮೀಪದ ಯಕ್ತಾಪುರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೂವಿನಹಳ್ಳಿ, ತಳ್ಳಳ್ಳಿ, ಆಲಹಾಳ, ಬೇವಿನಾಳ ಎಸ್‌ಕೆ ಗ್ರಾಮಗಳಿಗೆ ಸುಮಾರು ರು. 2 ಕೋಟಿ ವೆಚ್ಚದ ಶಾಶ್ವತ ಕುಡಿವ ನೀರಿನ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಗುತ್ತಿಬಸವವೇಶ್ವರ ಪ್ರದೇಶದ ಜನರಿಗೆ ಶಾಶ್ವತ ಕುಡಿವ ನೀರು ಒದಗಿಸುನ ಉದ್ದೇಶದಿಂದ ಸುಮಾರು ರು. 2ಕೋಟಿ ವೆಚ್ಚದಲ್ಲಿ ಯೋಜನೆಗೆ ಚಾಲನೆ ನೀಡಲಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕುಡಿವ ನೀರಿಗೆ ತೊಂದರೆಯಾಗುವುದಿಲ್ಲ. ಕಳೆದ ಬೇಸಿಗೆಯಲ್ಲಿ ಈ ಭಾಗದ ಜನರು ಅನುಭವಿಸಿದ ಸಂಕಷ್ಟ ನನಗೆ ತಿಳಿದಿದೆ. ಈ ಯೋಜನೆಯಿಂದ ನಿಮ್ಮ ಗ್ರಾಮಗಳ ನೀರಿನ ತೊಂದರೆ ಶಾಶ್ವತ ಪರಿಹಾರವಾಗಲಿದೆ ಎಂದರು.
ನೀರು ಸರಬರಾಜು: ಈ ಯೋಜನೆ ಪೂರ್ಣಗೊಳ್ಳುವವರೆಗೆ ಟ್ಯಾಂಕರ್ ಮೂಲಕ ಈ ಗ್ರಾಮಗಳಿಗೆ ನೀರು ಸರಬರಾಜು ಮಾಡುವಂತೆ ತಹಸೀಲ್ದಾರ ಅವರಿಗೆ ಸೂಚಿಸಲಾಗಿದೆ. ನಾಳೆಯಿಂದ ಟ್ಯಾಂಕರ್ ನೀರು ಬರಲಿದೆ. ಕೆಂಭಾವಿ-ಸುರಪುರ ರಾಜ್ಯ ಹೆದ್ದಾರಿ ಕಾಮಗಾರಿಗೆ ರು. 48 ಕೋಟಿ ಟೆಂಡರ್ ಕರೆಯಲಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ. ನಗನೂರ-ಕೆಂಭಾವಿ ರಸ್ತೆ ಅಭಿವೃದ್ಧಿಗೆ ರು. 2 ಕೋಟಿ ಗೋಗಿ-ಮಲ್ಲಾ ರಸ್ತೆ ದುರಸ್ತಿಗೆ ಪ್ರತಿ ಕಿಮೀಗೆ ರು. 50 ಲಕ್ಷ ಬಿಡುಗಡೆಯಾಗಿದೆ, ಮಲ್ಲಾ-ಕೆಂಭಾವಿ ರಸ್ತೆಯ ಡಾಂಬರೀಕರಣವಾಗಿದ್ದು ಈ ಭಾಗದ ಬಹುತೇಕ ರಸ್ತೆಗಳು ಅಭಿವೃದ್ಧಿಯಾದಂತಾಗಿದೆ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದನಗೌಡ ಪೊಲೀಸ ಪಾಟೀಲ, ತಾಪಂ ಸದಸ್ಯ ಅಯ್ಯಪ್ಪಗೌಡ ವಂದಗನೂರ, ಅಮೀನರೆಡ್ಡಿ ಮಾಲಿ ಪಾಟೀಲ ಯಾಳಗಿ, ಶಂಕರಗೌಡ ಪಾಟೀಲ, ಅಪ್ಪಾಸಾಹೇಬಗೌಡ, ವಿಶ್ವನಾಥರೆಡ್ಡಿ ಪಾಟೀಲ, ಭೀಮಣ್ಣ ಕರಡಕಲ್ ಇತರರು ಇದ್ದರು.
ಇಂದು ಜಿಲ್ಲೆಗೆ
ಸಚಿವ ಖರ್ಗೆ
ಯಾದಗಿರಿ: ಕೇಂದ್ರ ಕಾರ್ಮಿಕ
ಹಾಗೂ ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ
ಖರ್ಗೆ ಫೆ.12 ರಂದು ಜಿಲ್ಲೆ ಪ್ರವಾಸ ಕೈಗೊಂಡಿದ್ದಾರೆ. ಮಂಗಳವಾರ ಮ. 3ಕ್ಕೆ ತಾಲೂಕಿನ ಮುನಸಿ ತಾಂಡಕ್ಕೆ ಆಗಮಿಸಿ, ಸೆಣಬು ತಂತ್ರಜ್ಞಾನವನ್ನಾಧರಿಸಿ ನಿರ್ಮಾಣಗೊಳ್ಳುತ್ತಿರುವ ಕೂಡು ರಸ್ತೆಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಸಂಜೆ 5ಕ್ಕೆ ಯಾದಗಿರಿ, ಶಹಾಪುರ ಮಾರ್ಗವಾಗಿ ಗುಲ್ಬರ್ಗಕ್ಕೆ ತೆರಳಲಿದ್ದಾರೆಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement