ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ವಿಶೇಷ ಉಪನ್ಯಾಸ

Parashurama
Updated On : 14 Feb 2013, 11:47 am

ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ಡಾ. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮಹಾತ್ಮಗಾಂಧಿ ಸಭಾಂಗಣದಲ್ಲಿ ಫೆ.14ರಂದು ಬೆಳಗ್ಗೆ 11ಕ್ಕೆ ಡಾ. ಅಂಬೇಡ್ಕರ್ ಅಂದು, ಇಂದು ಮತ್ತು ನಾಳೆ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ತಿಳಿಸಿದ್ದಾರೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಆಂಗ್ಲ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಡೋಣೂರ ಉಪನ್ಯಾಸಕರಾಗಿ ಆಗಮಿಸಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಹಿರಿಯ ನ್ಯಾಯವಾದಿ ಆಯುಷ್ಮಾನ ತಾತ್ಯಾರಾವ್ ಕಾಂಬಳೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗುವಿವಿ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಸಾಹಿತ್ಯ ರತ್ನ ಪ್ರಶಸ್ತಿ
ಗುಲ್ಬರ್ಗ: ಸಾಹಿತಿ ಸಿದ್ದಣ್ಣ ಜಿ. ಕನ್ನಡಿಗ ಇವರಿಗೆ ನವ ಕರ್ನಾಟಕ ಸಾಂಸ್ಕೃತಿಕ ವೇದಿಕೆ ಬೆಂಗಳೂರಿನ ಜೆ.ಸಿ. ರಸ್ತೆಯ ನಯನ ಸಭಾಂಗಣದಲ್ಲಿ ನಡೆದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಚಿತ್ರ ನಟ ಡಾ. ಹೆಜ್ಜಾಜೆ ಮಹದೇವ್, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ.ಆರ್. ಬೆನಕನಹಳ್ಳಿ, ಮಾಜಿ ಸಚಿವ ರಾಮಲಿಂಗರೆಡ್ಡಿ ಪ್ರಶಸ್ತಿ ನೀಡಿದರು.
ನೇಮಕ
ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯ ವಿದ್ಯಾಮಂಡಲ ವಿಭಾಗದ ಉಪ ಕುಲಸಚಿವರಾಗಿ ಆರ್.ಎಸ್. ದೊಡ್ಡಮನಿಯವರನ್ನು ಆಯ್ಕೆ ಮಾಡಿ ಮುಂದಿನ ಆದೇಶದವರೆಗೂ ಗುಲ್ಬರ್ಗ ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯ ಪ್ರಭಾರ ನಿರ್ದೇಶಕರೆಂದು ನೇಮಕ ಮಾಡಲಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಸಚಿವ ತಿಳಿಸಿದ್ದಾರೆ.
ದಲಿತ ಸೇನೆ ಘಟಕಕ್ಕೆ  ರೋಹಿಣಿ ಆಯ್ಕೆ
ಗುಲ್ಬರ್ಗ:ಚಿತ್ತಾಪುರ ತಾಲೂಕಿನ ಕಾಳಗಿ ಪಟ್ಟಣದ ಅತಿಥಿಗೃಹದಲ್ಲಿ ನಡೆದ ದಲಿತ ಸೇನೆ ಚಿತ್ತಾಪುರ ತಾಲೂಕು ಸಮಿತಿ ಸಭೆಯಲ್ಲಿ ಕುಮಾರಿ ರೋಹಿಣಿ ಬಿ. ಬಾಗೋಡಿರವರನ್ನು ಚಿತ್ತಾಪುರ ತಾಲೂಕು ಘಟಕದ ಮಹಿಳಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.ದಲಿತ ಸೇನೆ ಮಹಿಳಾ ಘಟಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಹಿಳಾ ಘಟಕವನ್ನು ಬಲಪಡಿಸಬೇಕೆಂದು ದಲಿತ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತ ಜಿ. ಯಳಸಂಗಿ ಅವರು ಸಲಹೆ ನೀಡಿದ್ದಾರೆ.ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ  ನಾಗೇಂದ್ರ ಕೆ. ಜವಳಿ, ಡಿ.ಕೆ. ಮದನಕರ, ಮಹೇಂದ್ರ ಕೋಳಿ, ರಾಜಕುಮಾರ ಹುಗ್ಗಿ, ವಿಠಲ ಸಾಳ್ಳಲಿ, ಗುಲ್ಬರ್ಗ ನಗರ ಯುವ ಘಟಕ ಅಧ್ಯಕ್ಷ ಸಂತೋಷ ಬಿ. ಪಾಳಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments