ಚಿಂಚೋಳಿ; 355 ಕ್ವಿಂಟಲ್ ತೊಗರಿ ಬೆಂಬೆಲೆಗೆ ಖರೀದಿ
ಚಿಂಚೋಳಿ: ಪಟ್ಟಣದ ಚಂದಾಪುರ ನಗರದಲ್ಲಿರುವ ತಾಲೂಕ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೊಗರಿ ಮಂಡಳಿ ವತಿಯಿಂದ 4,500 ಬೆಂಬಲ ಬೆಲೆಯಲ್ಲಿ ರೈತರ ತೊಗರಿ ಖರೀದಿಸಲಾಗುತ್ತಿದೆ. ಶನಿವಾರದಿಂದ ವ್ಯಾಪಾರ ವಹಿವಾಟು ಪ್ರಾರಂಭಿಸಲಾಗಿದ್ದು, ಒಟ್ಟು 355 ಕ್ವಿಂಟಲ್ ರೈತರ ತೊಗರಿ ಖರೀದಿಸಲಾಗಿದೆ ಎಂದು ಮಂಡಳಿ ಸಹಾಯಕ ಅಧಿಕಾರಿ ಗೊಲರೆಜ್ ಅಹೆಮದ್ ತಿಳಿಸಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳೆದ ಮೂರು ದಿನಗಳಿಂದ ತೊಗರಿ ವ್ಯಾಪಾರ ವಹಿವಾಟಿನಲ್ಲಿ 253 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ. ಒಂದೇ ದಿನದಲ್ಲಿ 104 ಕ್ವಿಂಟಲ್ ರೈತರ ತೊಗರಿಯನ್ನು ಖರೀದಿಸಲಾಗಿದೆ. ಒಟ್ಟು 355 ಕ್ವಿಂಟಲ್ ತೊಗರಿಯನ್ನು ಖರೀದಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ತೊಗರಿ ವ್ಯಾಪಾರ ಮಾಡಿಕೊಳ್ಳಲು ತಾಲೂಕಿನ ಒಟ್ಟು 1018 ರೈತರು ಹೆಸರು ನೋಂದಣಿಯನ್ನು ಮಾಡಿಕೊಂಡಿದ್ದಾರೆ. ಪ್ರತಿ ರೈತರಿಂದ ಎಕರೆಗೆ 3 ಕ್ವಿಂಟಲನಂತೆ ಒಟ್ಟು 15 ಕ್ವಿಂಟಲ್ ತೊಗರಿ ಖರೀದಿಸಲಾಗುವುದು. ತೊಗರಿಯನ್ನು ಮಾರಾಟ ಮಾಡಿಕೊಳ್ಳುವ ರೈತರು ಗ್ರಾಮ ಲೆಕ್ಕಾಧಿಕಾರಿಗಳಿಂದ ಧೃಢಿಕರಿಸಿದ ಪಹಾಣಿ, ಹೊಲ್ಡಿಂಗ್ ಹಾಗೂ ಬ್ಯಾಂಕ್ ಖಾತೆ ಪಾಸಬುಕ್, ಚುನಾವಣಾ ಆಯೋಗದ ಗುರುತಿನ ಚೀಟಿ, ಮುಂತಾದ ದಾಖಲೆಗಳೊಂದಿಗೆ ಹೆಸರು ದಾಖಲು ಮಾಡಿಕೊಳ್ಳಬಹುದೆಂದು ಕೃಷಿ ಉತ್ಪನ್ನ ಮಾರುಕಟ್ಟೆಯ ನಿರ್ದೇಶಕ ಅಜಿತ್ ಪಾಟೀಲ್ ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ರೈತರು ಅಧಿಕ ಪ್ರಮಾಣದಲ್ಲಿ ತೊಗರಿಯನ್ನು ಬೆಳೆದಿದ್ದಾರೆ. ಸರ್ಕಾರ ಮತ್ತು ತೊಗರಿ ಮಂಡಳಿ ಗಮನ ಹರಿಸಿದರೆ ಇಲ್ಲಿನ ರೈತರಿಗೆ ಅನುಕೂಲ ಮತ್ತು ಲಾಭವಾಗಲಿದೆ ಎಂದು ರೈತರ ಒತ್ತಾಯವಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.