ನಾಳೆ ಪಾಲಿಕೆ ಸಾಮಾನ್ಯ ಸಭೆ
ಗುಲ್ಬರ್ಗ: ಗುಲ್ಬರ್ಗ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಫೆ.16 ರಂದು ಬೆಳಗ್ಗೆ 10.30ಕ್ಕೆ ಮಹಾಪೌರರ ಸದನದಲ್ಲಿ ಜರುಗಲಿದೆ. ಗುಲ್ಬರ್ಗ ಮಹಾನಗರ ಪಾಲಿಕೆಯ ಮಹಾಪೌರರು ಸಭೆಯ ಅಧ್ಯಕ್ಷತೆ ವಹಿಸುವರು. ಸಭೆಯಲ್ಲಿ 266 ರಿಂದ 278ರವರೆಗಿನ ಅಂಶಗಳನ್ನು ಚರ್ಚಿಸಲಾಗುವುದೆಂದು ಮಹಾನಗರ ಪಾಲಿಕೆಯು ತಿಳಿಸಿದೆ.
ವಿದ್ಯುತ್ ಸರಬರಾಜು ವ್ಯತ್ಯಯ
ನಗರದಲ್ಲಿ ಆರ್ಎಪಿಡಿಆರ್ಪಿ ಯೋಜನೆಯಡಿ 11 ಕೆ.ವಿ. ಮಾರ್ಗ ವಿಸ್ತರಣೆ, ಹೆಚ್ಚುವರಿ ಪರಿವರ್ತಕ ಅಳವಡಿಸುವುದು ಹಾಗೂ ಎಲ್.ಟಿ. ಎ.ಬಿ. ಕೇಬಲ್ ಅಳವಡಿಸುವ ಕಾರ್ಯ ಫೆಬ್ರುವರಿ 14ರಿಂದ 28ರವರೆಗೆ ಕೆಎಐಡಿಬಿ ಫೇಸ್- 1ರ ಪ್ರದೇಶದಲ್ಲಿ ಕೈಗೊಳ್ಳಲಾಗುವುದು. ಈ ಪ್ರಯುಕ್ತ ಸದರಿ ದಿನಾಂಕಗಳಂದು ಮಧ್ಯಾಹ್ನ 1 ರಿಂದ 3.30 ಗಂಟೆಗೆವರೆಗೆ (ರವಿವಾರದಂದು ಬೆಳಿಗ್ಗೆ 9 ರಿಂದ ಸಾಯಂಕಾಲ 6 ಗಂಟೆಯವರೆಗೆ) ನಗರದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.
ಸಾವಯವ ಕೃಷಿಕರ ಮಾಹಿತಿ ಸಂಗ್ರಹಣೆ
ಕೃಷಿ ಇಲಾಖೆ, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಸಾವಯವ ಕೃಷಿ ಉತ್ಪನ್ನಗಳ ಉತ್ತೇಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೃಷಿಕರ ಸಾವಯವ ಉತ್ಪನ್ನಗಳ ಪ್ರಮಾಣೀಕರಣದ ಬಗ್ಗೆ ವಿವರವಾದ ಮಾಹಿತಿ ಮತ್ತು ತರಬೇತಿಯನ್ನು ನೀಡಲಾಗುವುದು. ಸಾವಯವ ಕೃಷಿಕರು ತಮ್ಮ ಜಮೀನುಗಳಲ್ಲಿ ಬೆಳೆಯುವ ಬೆಳೆಗಳ ಮತ್ತು ಅವುಗಳ ಕ್ಷೇತ್ರಗಳ ಬಗ್ಗೆ ವಿವರವಾದ ಮಾಹಿತಿಯನ್ನು ಲಿಖಿತ ರೂಪದಲ್ಲಿ ಅಥವಾ ದೂರವಾಣಿ ಮುಖಾಂತರ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಗದ್ದನಕೇರಿ ರಸ್ತೆ, ಬಾಗಲಕೋಟೆ ಇವರಿಗೆ ಕಳುಹಿಸಬೇಕಾಗಿ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ದೂ. 08354- 244048 244048ನ್ನು ಸಂಪರ್ಕಿಸಬಹುದು.
ಐಟಿಐ; ವೃತ್ತಿಗಳಿಗೆ ಪ್ರವೇಶ ಆಹ್ವಾನ
ಗುಲ್ಬರ್ಗ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪು)ಯಲ್ಲಿ ಫೆ.2013ನೇ ಸಾಲಿನ ಡೇಟಾ ಎಂಟ್ರಿ ಆಪರೇಟರ್ ಮತ್ತು ಡ್ರೈವರ್ ಕಮ್ ಮೆಕ್ಯಾನಿಕ್ ವೃತ್ತಿಗಳಿಗೆ 6 ತಿಂಗಳ ಕೋರ್ಸಿಗೆ ಪ್ರವೇಶ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಅರ್ಜಿಗಳ 20 ನೀಡಿ ಫೆ. 28ರವರೆಗೆ ಅಭ್ಯರ್ಥಿಗಳು ಖುದ್ದಾಗಿ ಹಾಜರಾಗಿ ಗುಲ್ಬರ್ಗ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಪಡೆಯಬಹುದು. ಪ್ರವೇಶ ಪಡೆಯಲು ಡೇಟಾ ಎಂಟ್ರಿ ಆಪರೇಟರ್ ದಿ. 1. 2. 2013ರೊಳಗೆ 14 ವರ್ಷ ಕನಿಷ್ಠ ವಯೋವುತಿ ಮತ್ತು ಎಸ್ಎಸ್ಎಲ್ಸಿ ಉತ್ತೀರ್ಣ ಹೊಂದಿರಬೇಕು. ಡ್ರೈವರ್ ಕಮ್ ಮೆಕ್ಯಾನಿಕ್ ದಿ. 1. 2. 2013ರೊಳಗೆ 18 ವರ್ಷ ಕನಿಷ್ಠ ವಯೋವುತಿ ಮತ್ತು ಎಸ್ಎಸ್ಎಲ್ಸಿ ಉತ್ತೀರ್ಣ ಹೊಂದಿರಬೇಕು. ವಿವರಕ್ಕೆ ದೂ. 08472- 278 611ನ್ನು ಸಂಪರ್ಕಿಸಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.