ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಸ್ತೆ ಸಂಪರ್ಕ ಒದಗಿಸಲು ಆಗ್ರಹ

Parashurama
Updated On : 15 Feb 2013, 11:35 am

ಗುಲ್ಬರ್ಗ: ತಾಲೂಕಿನ ಫರಹತಾಬಾದ್ ವಲಯದಲ್ಲಿ ಅತಿ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕವಿಲ್ಲ. ಸಂಪರ್ಕವಿರುವ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇಂತಹ ರಸ್ತೆಗಳಲ್ಲಿ ಸಂಚರಿಸುವುದು ದುಸ್ಥರವಾಗಿದೆ ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಹಾಗರಗುಂಡಗಿಯಿಂದ ಹಸರಗುಂಡಗಿ, ಕವಲಗಾ(ಕೆ), ಕವಲಗಾ(ಬಿ) ಹೇರೂರ(ಬಿ) ಔರಾದ್(ಕೆ) ಬಳಗುಂಪಾ ಮೈನಾಳ, ಜೋಗೂರು, ಚಿನ್ನಮಳ್ಳಿ ಮುಂತಾದ ಗ್ರಾಮಗಳು ಬರುತ್ತವೆ. ಅಲ್ಲದೆ ಫರಹತಾಬಾದನಿಂದ ಬಸವ ಪಟ್ಟಣ ಅಫಜಲ್ಪುರ ಗ್ರಾಮಕ್ಕೆ ಇದೇ ರಸ್ತೆ ಸಂಪರ್ಕವನ್ನೇ ಕಲ್ಪಿಸುತ್ತಿದೆ.  ಫರಹತಾಬಾದ್ ವಲಯದಿಂದ ದಿನಾಲು ಸಾವಿರಾರು ವಿದ್ಯಾರ್ಥಿಗಳು ಗುಲ್ಬರ್ಗಕ್ಕೆ ಬರುತ್ತಾರೆ. ಫರಹತಾಬಾದ್‌ಗೆ ತಮ್ಮ ಗ್ರಾಮಗಳಿಂದ ತಲುಪಬೇಕಾದರೆ ಹರಸಾಹಸ ಪಡಬೇಕಾಗುತ್ತದೆ. ಇನ್ನೂ ವಯಸ್ಸಾದವರ ಗತಿ ಹಾಗೂ ಆಸ್ಪತ್ರೆಗೆ ಬರುವವರ ಗೋಳು ಹೇಳ ತೀರದು. ಇಲ್ಲಿಯವರೆಗೆ ಯಾವುದೇ ದುರಸ್ತಿ ಕೆಲಸ ನಡೆದಿಲ್ಲವೆಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments