ವಚನ ಸಾಹಿತ್ಯದ ಸಿರಿನಾಡು ಜೇವರ್ಗಿ
ಜೇವರ್ಗಿ: ಜೇವರ್ಗಿ ಪ್ರಾಂತ ವಚನ ಸಾಹಿತ್ಯದ ಸಿರಿನಾಡು. ಈ ಕ್ಷೇತ್ರದಲ್ಲಿ ಅನೇಕ ಶರಣರು-ಸಂತರು-ದಾರ್ಶನಿಕರು ಜನಿಸಿದ ಪುಣ್ಯಭೂಮಿ. ವಚನ ಸಾಹಿತ್ಯದ ತವರೂರು. ಇಂತಹ ನೆಲದಲ್ಲಿ ಕನ್ನಡವನ್ನು ಪೋಷಿಸಬೇಕಾಗಿದೆ ಎಂದು ಬಸವರಾಜ ಪಾಟೀಲ್ ನರಿಬೋಳ ಹೇಳಿದರು.
ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಜಯ ಕರ್ನಾಟಕ ಸಂಘಟನೆ ಏರ್ಪಡಿಸಿದ್ದ ವಲಯ ಮಟ್ಟದ ಕನ್ನಡಿಗರ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಅರಳಗುಂಡಗಿ ಸೇರಿದಂತೆ ಹಿಂದುಳಿದ ಜೇವರ್ಗಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಸಾಕಷ್ಟು ಅನುದಾನ ಬಿಡುಗಡೆಗೊಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವುದರ ಮೂಲಕ ಶೈಕ್ಷಣಿಕವಾಗಿ ಮುಂದೆ ಬರಬೇಕಾಗಿದೆ ಎಂದರು.
ಸೊನ್ನದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಪಂ ಸದಸ್ಯ ರೇವಣಸಿದ್ದಪ್ಪಗೌಡ ಕಮಾನಮನಿ, ಜಯ ಕರ್ನಾಟಕ ರಾಜ್ಯಾಧ್ಯಕ್ಷ ವೀರಣ್ಣ ಕೋರಳ್ಳಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜನ ಸಾರವಾಡ, ಪಿಎಸ್ಐ ಸಿದ್ರಾಮೇಶ ಗಡೇದ್, ಸುಧೀಂದ್ರ ಇಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಪುಗೌಡ ಮಾಲಿಪಾಟೀಲ್, ಭಗವಂತ್ರಾಯ ಮುತ್ತಪ್ಪಗೋಳ, ಶರಣು ಹದಗಲ್, ಮಡಿವಾಳಪ್ಪ ಪಾಟೀಲ್, ರಾಘವೇಂದ್ರ ತುಮಕೂರ, ಶಿವಲಿಂಗಪ್ಪಗೌಡ ಕುದರಗೊಂಡ, ಚಿದಾನಂದ ಗೌಂಡಿ, ಮಾಳಪ್ಪ ಪೂಜಾರಿ, ಚಂದ್ರು ಗೋಗಿ, ಜಗದೀಶ ಮಡಿವಾಳಕರ್ ಪಾಲ್ಗೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.