ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದಿನಿಂದ ಮುಂಬೈನಲ್ಲಿ ಚಿತ್ರಕಲಾ ಪ್ರದರ್ಶನ

Mainashree
Updated On : 16 Feb 2013, 11:43 am

ಗುಲ್ಬರ್ಗ: ಗುಲ್ಬರ್ಗ ಮೂಲದ ಕಲಾವಿದ ಜಿತೇಂದ್ರ ಕೋಥಳಿಕರ್ ಹಾಗೂ ಫ್ರೀಲಾನ್ಸ್ ಕಲಾವಿದ ವಿನೋದ ರಘವೀರ ಅವರ ಕಲಾಕೃತಿಗಳು ಫೆ.16 ರಿಂದ 20ರವರೆಗೆ ಮುಂಬೈನ ಜನರೇಷನ್ ಆರ್ಟ್ ಫೌಂಡೇಷನ್ ಆಯೋಜಿಸಿರುವ ಸಮೂಹ ಚಿತ್ರಕಲಾ ದರ್ಶನದಲ್ಲಿ ಪ್ರದರ್ಶನಗೊಳ್ಳುತ್ತಿವೆ.
ಕಲಾವಿದರು ಜಾಗತೀಕರಣದ ಪೈಪೋಟಿಯ ನಡುವೆಯೂ ಕಲೆಯನ್ನು ಹೇಗೆ ಉಳಿಸಿ ಬೆಳೆಸಬೇಕೆಂಬ ಚಿಂತನೆಯ ಹಿನ್ನೆಲೆಯಲ್ಲಿ ಈ ಪ್ರದರ್ಶನ ನಡೆಯುತ್ತಿದೆ. ಈಗಾಗಲೇ ಈ ಕಲಾವಿದರ ಜೋಡಿಯ ಕಲಾಕೃತಿಗಳ ಪ್ರದರ್ಶನ ದೆಹಲಿ, ಪುಣೆ, ಮುಂಬೈ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪ್ರದರ್ಶನಗೊಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement