ಶಿಕ್ಷಕರ ನೇಮಕಾತಿ ರದ್ದುಪಡಿಸಲು ಒತ್ತಾಯ
ಚಿಂಚೋಳಿ: ರಾಜ್ಯದಲ್ಲಿ ಹೊಸದಾಗಿ 4 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದನ್ನು ಕೂಡಲೇ ರದ್ದುಪಡಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪಟ್ಟಣದ ಚಂದಾಪೂರ ಮಿನಿ ವಿಧಾನಸೌಧ ಅವರಣದಲ್ಲಿ ಸರಕಾರ ಆದೇಶವನ್ನು ರದ್ದು ಪಡಿಸುವಂತೆ ಅಗ್ರಹಪಡಿಸಿ ಸಂವಿಧಾನದ ಕಲಂ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ಜಾರಿಯಾಗುವವರೆಗೆ ಸರಕಾರ ಯಾವದೇ ಹುದ್ದೆಗಳಿಗೆ ನೇಮಕಾಗಿ ಮಾಡಿಕೊಳ್ಳಬಾರದು. ಕರವೇ ಅಧ್ಯಕ್ಷ ಸಂಜೀವಕುಮಾರ, ಉಮಾಪಾಟೀಲ್, ಸಿದ್ದು ಪಾಟೀಲ್, ಸಂತೋಷ ಸದ್ದಾಂ ಹುಸೇನ್ ಭಾಗವಹಿಸಿದ್ದರು. ತಹಸೀಲ್ದಾರ ಜಗನ್ನಾಥರೆಡ್ಡಿ ಮನವಿ ಸ್ವಿಕರಿಸಿದರು.