ಮೆಣಸಿನಕಾಯಿ ಧಾರಣೆ ಇದ್ದರೂ ಇಳುವರಿ ಕಡಿಮೆ
ಶಹಾಪುರ: ರೈತರ ಬದುಕಿಗೆ ಮೆಣಸಿನಕಾಯಿ ಬೆಳೆ ಖಾರವಾಗುತ್ತಿದೆ ಎಂಬುವುದಕ್ಕೆ ಪ್ರಸ್ತುತವಾಗಿ ಕಡಿಮೆ ಇಳುವರಿ ಬಂದಿರುವುದು ಕಾರಣವಾಗಿದೆ. ಕಳೆದ ವರ್ಷ ಉತ್ತಮ ಇಳುವರಿ ಬಂದಾಗ ಗುಂಟೂರು ಮತ್ತು ಬ್ಯಾಡಗಿ ಮೆಣಸಿನಕಾಯಿ ಧಾರಣೆ ಸಂಪೂರ್ಣ ಕುಸಿದು ಹೋಗಿತು.್ತ ಆದರೆ ಪ್ರಸಕ್ತ ಸಾಲಿನಲ್ಲಿ ಧಾರಣೆ ತಕ್ಕಮಟ್ಟಿಗೆ ಉತ್ತಮವಾಗಿದ್ದರೂ ಇಳುವರಿ ಸಂಪೂರ್ಣ ಕಡಿಮೆಯಾಗಿದೆ. ಮೆಣಸಿನಕಾಯಿ ಬೆಳೆ ಬೆಳೆಯಲು ಔಷಧಿ, ರಸಗೊಬ್ಬರ ಮತ್ತು ಕಳೆತೆಗೆಯಲು ಕೂಲಿ ಖರ್ಚು ಮಾಡಿ ಮೆಣಸಿನಕಾಯಿ ಬೆಳೆಯಲು ಲಕ್ಷಗಟ್ಟಲೆ ಖರ್ಚು ಮಾಡಿದ್ದವರಿಗೆ ಆತಂಕ ಉಂಟಾಗಿದೆ. ರೈತರಿಗೆ ಕಡಿಮೆ ಇಳುವರಿ ಬಂದಿರುವುದು ಆತಂಕಕ್ಕೆ ಎಡೆ ಮಾಡಿದೆ. ರೈತರು ಎಷ್ಟೇ ಕಷ್ಟಪಟ್ಟರೂ, ಬೆಳೆಗೆ ಬೆಂಬಲ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಸರ್ಕಾರ ರೈತಪರ ಯೋಜನೆಗಳನ್ನು ಜಾರಿ ಮಾಡಿದರೂ ಫಲಕಾರಿಯಾಗದಿರುವುದು ಚಿಂತೆಯ ವಿಷಯವಾಗಿದೆ. ರೈತರ ಸ್ಥಿತಿ ಸುಧಾರಿಸಲು ಗಮನ ಹರಿಸುತ್ತಿಲ್ಲವೆಂಬುದು ರೈತವರ್ಗದ ಕೂಗಾಗಿದೆ.