ನಾಳೆ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ
ಗುಲ್ಬರ್ಗ: ಚಿತ್ರಸಂಸ್ಥೆ ಬೆಂಗಳೂರು ನೇತೃತ್ವ, ಇತರೆ ಹಲವು ಸಂಸ್ಥೆಗಳ ಸಹಯೋಗದಲ್ಲಿ ಗುಲ್ಬರ್ಗದಲ್ಲಿ ಫೆ.20ರಂದು ಪಂಡಿತ ರಂಗಮಂದಿರದಲ್ಲಿ ಚಲನ ಚಿತ್ರೋತ್ಸವ ನಡೆಯಲಿದೆ. ಕೂರ್ಮಾವತಾರ, ಹೆಜ್ಜೆಗಳು ಹಾಗೂ ಸರಸಮ್ಮನ ಸಮಾಧಿ ಎಂಬ ಪ್ರಶಸ್ತಿ ವಿಜೇತ ಮೂರು ಚಿತ್ರಗಳ ಪ್ರದರ್ಶನವೂ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಚಲನಚಿತ್ರ ಆಸಕ್ತರು ಬಂದು ಉತ್ಸವದಲ್ಲಿ ಭಾಗವಹಿಸಬೇಕೆಂದು ಚಿತ್ರ ಸಂಸ್ಥೆಯ ಸಂಚಾಲಕರು ಕೋರಿದ್ದಾರೆ. ಸಂಘಟಕರು ಖ್ಯಾತನಾಮ ತಾರೆಯರಿಗೆ ಆಹ್ವಾನ ನೀಡಿದ್ದಾರೆ.