ಶೀಘ್ರವೇ 1.30 ಲಕ್ಷ ಎಕರೆ ಜಮೀನಿಗೆ ನೀರಾವರಿ
ಅಫಜಲ್ಪುರ: ಭೀಮಾ ಮತ್ತು ಅಮರ್ಜಾ ಎರಡು ನದಿಗಳಿಗೆ ನಿರ್ಮಾಣವಾಗಿರುವ ಸುಮಾರು 15 ಬ್ಯಾರೇಜುಗಳಿಂದ ತಾಲೂಕಿನಲ್ಲಿ ಮುಂಬರುವ ದಿನಗಳಲ್ಲಿ ಅಫ್ಜಲಪುರದಲ್ಲಿ 1.30 ಲಕ್ಷ ಎಕರೆ ಜಮೀನಿಗೆ ನೀರಾವರಿಯಾಗಲಿದ್ದು, ತಾಲೂಕಿನಲ್ಲಿ ಹಸಿರು ಕ್ರಾಂತಿ ಯುಗ ಆರಂಭವಾಗಲಿದೆ ಎಂದು ಶಾಸಕ ಮಾಲೀಕಯ್ಯಾ ಗುತ್ತೇದಾರ ಹೇಳಿದರು.
ಅವರು ತಾಲೂಕಿನ ಗೌಟಗಾಂವ ಗ್ರಾಮದ ಹತ್ತಿರ ಅಮರ್ಜಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ 120 ಕೋಟಿ ರುಪಾಯಿ ವೆಚ್ಚದ 100 ಹೆಕ್ಟೇರ್ ನೀರಾವರಿ ಸಾಮರ್ಥ್ಯದ ಬ್ಯಾರೇಜ್‌ನ್ನು ನಾಡಿಗೆ ಸಮರ್ಪಿಸಿ ಮಾತನಾಡಿದರು.
ಬಹುಕೋಟಿ ವೆಚ್ಚ: ಅಮರ್ಜಾ ನದಿಗೆ ಮತ್ತು ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಗೌಡಗಾಂವ್ ಮತ್ತು ಕೋಗುನೂರ ಗ್ರಾಮಗಳಿಗೆ 100 ಹೆಕ್ಟೇರ್ ನೀರಾವರಿಯಾಗುವ ಬಹುಕೋಟಿ ರೂಪಾಯಿ ವೆಚ್ಚದ ಬ್ಯಾರೇಜ್‌ನ್ನು ತಾಲೂಕಿಗೆ ಸಮರ್ಪಿಸಿದ್ದೇವೆ.
ಇದಕ್ಕೆ ಶೇ. 90ರಷ್ಟು ಅನುದಾನ ಕೇಂದ್ರ ಸರ್ಕಾರ ನೀಡಿದೆ. ಭೀಮಾ ಬ್ಯಾರೇಜ್ ನಿರ್ಮಾಣ ಸೇರಿದಂತೆ ತಾಲೂಕಿನಲ್ಲಿ ಹಸಿರುಕ್ರಾಂತಿ ಮಾಡುವ ಕನಸು ನನ್ನ ತಂದೆಯವರು ಹೊಂದಿದ್ದರು. ಅವರ ಆಸೆ ಈಡೇರಿಸಿದ್ದು ಭೀಮಾ, ಅಮರ್ಜಾ, ಬೋರಿ ನದಜಿಗಳಿಗೆ ನಿರ್ಮಾಣ ಮಾಡಿ ಹಸಿರು ಕ್ರಾಂತಿ ಮಾಡಲಾಗಿದೆ. 148 ಕಿ.ಮಿ ನೀರು ನಿಲ್ಲಿಸಿದ್ದೇವೆ. 48 ಕಿಮಿ ಕಾಲುವೆಗೆ ನೀರು ಹರಿದಿದೆ. ಭೀಮಾ ನದಿಯ ಕೆಳಗಡೆ ಭಾಗದ ಘತ್ತರಗಾ, ದೇವಲಗಾಣಗಾಪುರ ಕಲ್ಲೂರ ಬ್ಯಾರೇಜ್‌ಗಳು ಭರ್ತಿಯಾಗಿದ್ದು, ತಾಲೂಕಿನಲ್ಲಿ(ಬರುವ) ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಲಿದೆ ಎಂದು ಹೇಳಿದ್ದರು.
ಮುಖಂಡರಾದ ಅರವಿಂದ ಗುತ್ತೇದಾರ ಮಲ್ಲಿನಾಥ ಕುಂಬಾರ ಬಸವಣ್ಣಪ್ಪ ಪಾಟೀಲ ಅಂಕಲಗಿ ತಾ.ಪಂ. ಸದಸ್ಯೆ ಶಿವಪುತ್ರಪ್ಪ ಗೌಡಗಾಂವ ದೇವಿಂದ್ರ ಜಮಾದಾರ ಬಾಬುರಾವ ಮಾಲಿಪಾಟೀಲ ಮೊದಲಾದವರು ಉಪಸ್ಥಿತರಿದ್ದರು.