ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯಶಸ್ಸಿಗೆ ಓದುವುದೊಂದೇ ದಾರಿ: ಡಾ. ಚಂದ್ರಪ್ಪ ರೇಷ್ಮಿ

Lingaraj Badiger
Updated On : 20 Feb 2013, 11:33 am

ಗುಲ್ಬರ್ಗ: ಗುಲ್ಬರ್ಗದಲ್ಲಿರುವ ದೊಡ್ಡಪ್ಪ ಅಪ್ಪ ವಸತಿ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 2012- 13 ನೇ ಶೈಕ್ಷಣಿಕ ಸಾಲಿನ ವಿಜ್ಞಾನ ಚಟುವಟಿಕೆಗಳ ಉದ್ಘಾಟನ ಸಮಾರಂಭ ಮತ್ತು ಗರಿಷ್ಠ ಅಂಕಗಳಿಸಿದವರಿಗೆ ಸನ್ಮಾನ ಸಮಾರಂಭ ಮಂಗಳವಾರ ಏರ್ಪಡಿಸಲಾಗಿತ್ತು.
ಚಿತ್ತಾಪುರ ಮೂಲದವರಾಗಿರುವ, ಸದ್ಯ ಅಮೇರಿಕಾದ ಖ್ಯಾತ ನೇತ್ರತಜ್ಞ ಡಾ. ಚಂದ್ರಪ್ಪಾ ರೇಷ್ಮಿ ಮಾತನಾಡಿ, ಕೇವಲ ಪದವಿ ಗಳಿಕೆಯೊಂದೆ ಶಿಕ್ಷಣದ ಗುರಿಯಲ್ಲ, ಸಮಾಜ ಸೇವೆಯಿಂದ ಮಾತ್ರ ನಮ್ಮ ಶಿಕ್ಷಣದ ಗುರಿ ಪೂರ್ಣಗೊಳಿಸಲು ಸಾಧ್ಯ. ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿ ರಾಷ್ಟ್ರವೆಂದು ಗುರುತಿಸಿಕೊಂಡಿರುವ ಅಮೇರಿಕಾವು ಅಲ್ಲಿಯ ಜನರ ಸತತ ಪರಿಶ್ರಮ ಮತ್ತು ದೂರದೃಷ್ಟಿಯಿಂದ ಮಾತ್ರ ಬೆಳೆದು ನಿಂತಿದೆ. ಭಾರತೀಯರು ಕೂಡ ಸೋಮಾರಿತನ ದೂರವಿರಿಸಿದರೆ ಭಾರತದ ಅಭಿವೃದ್ಧಿಯಾಗಲು ಸಾಧ್ಯ ಎಂದು ನುಡಿದರು.  ಡಾ. ಶರಣಬಸವಪ್ಪ ಅಪ್ಪ ಮಾತನಾಡಿದರು. ಡಾ. ರಾಮಕೃಷ್ಣರೆಡ್ಡಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement