ಬಂಕ್ ಮಾಲೀಕರ ಸುಲಿಗೆ; ದರೋಡೆಕೋರರ ತಂಡ ಸೆರೆ
ಗುಲ್ಬರ್ಗ: ಜಿಲ್ಲಾ ಪೊಲೀಸ್ ತಂಡ ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಪೆಟ್ರೋಲ್ ಬಂಕ್ಗೆ ನುಗ್ಗಿ ಸುಲಿಗೆ ಮಾಡುತ್ತಿದ್ದ ತಂಡವೊಂದನ್ನು ಬಂಧಿಸಿದ್ದಾರೆ. ಇವರಲ್ಲಿ ಬಹುತೇಕರು ಪಿಯುಸಿ ವಿದ್ಯಾರ್ಥಿಗಳು ಎಂಬುದು ಆತಂಕದ ಸಂಗತಿ. ನಗರದ ವಿವಿ ಠಾಣೆ ಸರಹದ್ದಿನಲ್ಲಿರುವ ಭಾಗ್ಯನಗರ ಕ್ರಾಸ್ ಬಳಿಯ ಪೆಟ್ರೋಲ್ ಬಂಕ್ ಮಾಲೀಕರಿಗೆ ಅಡ್ಡಗಟ್ಟಿ ಬಂಕ್ ನುಗ್ಗಿ ಅಲ್ಲಿಂದ 2.41 ಲಕ್ಷ ಲೂಟಿ ಮಾಡಲಾಗಿತ್ತು. ಈ ಸಂಬಂಧ ದೂರು ದಾಖಲಾಗಿತ್ತು.ಪೊಲೀಸರಿಗೆ ಸೆರೆ ಸಿಕ್ಕವರು ಈ ದರೋಡೆ ಮಾಡಿದವರೇ ಆಗಿದ್ದಾರೆ.
ಬಂಧಿತರು: ಸಿದ್ದು ಅಲಿಯಾಸ್ ಸಿದ್ದಪ್ಪ ಆನೂರ(22)- ಶಿವಂ ಸರ್ವಿಸ್ ಪೆಟ್ರೋಲ್ ಪಂಪ್ನಲ್ಲಿ ಕೆಲಸ., ಜಗದೀಶ ಪೂಜಾರಿ(20) ಲಕ್ಷ್ಮಿ ವೆಂಕಟೇಶ್ವರ ಐಟಿಐ ಕಾಲೇಜ್ನಲ್ಲಿ ದ್ವಿತಿಯ ಎಲೆಕ್ಟ್ರಿಷಿಯನ್ ವಿದ್ಯಾರ್ಥಿ, ಕೃಷ್ಣಾ ಕಾಲೋನಿ ರಾಣೇಶ ಪೀರ್ ದರ್ಗಾ ಹತ್ತಿರ, ಸುಭಾಷ್ ಪೂಜಾರಿ(25) ಚಂದ್ರಕಾಂತ್ ಪಾಟೀಲ ಸ್ಕೂಲ್ ಬಸ್ನ ಕ್ಲೀನರ್, ಕುಸನೂರ ರೋಡ್ ಬಿಜಾಪುರ, ಭೀಮ ಪೂಜಾರಿ(18), ಸ್ಯಾಮ್ ವಿಜ್ಞಾನ ಕಾಲೇಜಿನ 2ನೇ ವರ್ಷದ ಪಿಯುಸಿ ವಿದ್ಯಾರ್ಥಿ, ಕೆಇಬಿ ಆಫೀಸ್ ಹಿಂದುಗಡೆ, ಬಡೇಪುರ, ಶಿವಶರಣ ಪೊದ್ದಾರ(18), ಚಂದ್ರಕಾಂತ್ ಪಾಟೀಲ ಪಿಯುಸಿ 2ನೇ ವರ್ಷದ ವಿಜ್ಞಾನ ವಿದ್ಯಾರ್ಥಿ, ಪ್ರಶಾಂತ ನಗರ.