ಬಾಲಕಿ ಮೇಲೆ ಅತ್ಯಾಚಾರ; ಬಂಧನ
ಚಿಂಚೋಳಿ: ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಗರ್ಭಿಣಿಯಾಗಿರುವುದು ಗುಲ್ಬರ್ಗ ಜಿಲ್ಲೆ ಚಿಂಚೋಳಿ ತಾಲೂಕಿನ ದೋಟಿಕೋಳದಲ್ಲಿ ವರದಿಯಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ದೋಟಿಕೋಳದ 16 ವರ್ಷದ ಬಾಲಕಿಗೆ ಆಕೆಯ ಸಹೋದರ ಮಾವ ಶಿವಲಿಂಗಪ್ಪ ದೇವೇಂದ್ರಪ್ಪ (21) ಎಂಬಾತ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಆಕೆಯೊಂದಿಗೆ ಸಂಪರ್ಕ ಬೆಳೆಸಿದ್ದ. ಆಕೆಯ ಒಪ್ಪಿಗೆ ಇಲ್ಲದೆಯೇ ದೈಹಿಕ ಸಂಪರ್ಕ ಹೊಂದಿದ್ದು, ಬಾಲಕಿ ಇದೀಗ ಮೂರು ತಿಂಗಳ ಗರ್ಭಿಣಿ ಎಂದು ಚಿಂಚೋಳಿ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಇಸ್ಮಾಯಿಲ್ ಶರೀಫ್ ತಿಳಿಸಿದ್ದಾರೆ.