ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ರಜತ ಮಹೋತ್ಸವ

Rashmi Kasaragodu
Updated On : 28 Feb 2013, 11:57 am

ಗುಲ್ಬರ್ಗ: ನಗರದ ಬ್ರಹ್ಮಪುರ ನ್ಯೂ ರಾಘವೇಂದ್ರ ಕಾಲೋನಿಯ ವೆಂಕಟೇಶ್ವರ ದೇವಸ್ಥಾನದ 25ನೇ ವರ್ಷದ ರಜತ ಮಹೋತ್ಸವ ಫೆ.28ರಂದು ಹಮ್ಮಿಕೊಳ್ಳಲಾಗಿದೆ ಎಂದು ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ತಿಳಿಸಿದೆ. ಬೆಳಗ್ಗೆ 5 ಗಂಟೆಯಿಂದ 6 ಗಂಟೆಯವರೆಗೆ ಸುಪ್ರಭಾತ,ಮಂಗಳ ವಾದ್ಯಗಳು, 6 ಗಂಟೆಯಿಂದ 7 ಗಂಟೆಯವರೆಗೆ ವೆಂಕಟೇಶ್ವರ ಅಷ್ಟೋತ್ತರ, 8 ಗಂಟೆಯಿಂದ 11 ಗಂಟೆಯವರಿಗೆ ಪವಮಾನ ಹೋಮ ವಿಷ್ಣು ಸಹಸ್ರನಾಮ, ಸತ್ಯನಾರಾಯಣ ಪೂಜೆ, 11 ಗಂಟೆಗೆ ಲಕ್ಷ್ಮೀ ವೆಂಕಟೇಶ್ವರ ದೇವರ ರಥೋತ್ಸವ ಜರುಗುವುದು. ಮಧ್ಯಾಹ್ನ 12 ಗಂಟೆಗೆ ಪ್ರವಚನ ಮಂಗಳ, 1 ಗಂಟೆಯಿಂದ 4.30ವರೆಗೆ ತೀರ್ಥ, ಪ್ರಸಾದವಿರುವುದು.
ಬಾಕಿ ಪಾವತಿಗೆ ಕರವೇ ಒತ್ತಾಯ
ಗುಲ್ಬರ್ಗ: ಕಬ್ಬಿನ ವೈಜ್ಞಾನಿಕ ಬೆಲೆ ನಿಗದಿಗಾಗಿ ಕಬ್ಬು ನಿಯಂತ್ರಣ ಮಂಡಳಿ ಸ್ಥಾಪಿಸುವುದಕ್ಕೆ ಅವಕಾಶ ಕಲ್ಪಿಸುವ ಕರ್ನಾಟಕ ಕಬ್ಬು ಮಸೂದೆಗೆ ವಿಧಾನ ಪರಿಷತ್ತಿನ ಅಂಗೀಕಾರ ದೊರಕಿರುವುದನ್ನು ಜೈ ಕರವೇ ಸ್ವಾಗತಿಸಿದೆ.ಸರ್ಕಾರದ ಅಧಿಕೃತ ದಾಖಲೆ ಪ್ರಕಾರ, ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ರೈತರಿಗೆ 59 ಕೋಟಿ ಬಾಕಿ ಹಣ ನೀಡಬೇಕು. ಅಲ್ಲದೇ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳ ಪ್ರತಿ ಬಹುತೇಕ ಕಾರ್ಖಾನೆಗಳು ಸ್ಥಗಿತಗೊಂಡಿವೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ರೈತರ ಬಾಕಿ ಇರುವ ಹಣವನ್ನು ಕೊಡಿಸಬೇಕು. ಒಂದು ವೇಳೆ ರೈತರ ಬಾಕಿ ಪಾವತಿಸದೆ ವಿಳಂಬ ಮಾಡಿದರೆ ಮುಂಬರುವ ದಿನಗಳಲ್ಲಿ ಜೈ ಕರವೇಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement