ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಹಿಳಾ ಮತದಾರರಿಂದ ಮತದಾನ ಬಹಿಷ್ಕಾರ?

Rashmi Kasaragodu
Updated On : 28 Feb 2013, 12:14 pm

ಗುಲ್ಬರ್ಗ: ಮಹಾನಗರ ಪಾಲಿಕೆಗೆ ನಡೆಯುತ್ತಿರುವ ವಾರ್ಡ್ 3ರ ಚುನಾವಣೆಯಲ್ಲಿ ಶೇ.30ರಷ್ಟು ಮಹಿಳಾ ಮತದಾರರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಈ ಬೆಳವಣಿಗೆಯಲ್ಲಿ ಮಹಾಲಕ್ಷ್ಮೀ ಮಹಿಳಾ ಸ್ವ-ಸಹಾಯ ಸಂಘ ನೇತೃತ್ವ ವಹಿಸಿದೆ.
20 ವರ್ಷಗಳಿಂದ ವಾಸವಾಗಿದ್ದ ನಿವಾಸಿಗಳ ಮನೆಯ ಹತ್ತಿರ ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳು ನಡೆಯದಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ.
ಕೆಲವು ಬಡಾವಣೆಗಳಲ್ಲಿ ಮನೆಗಳ ಮುಂದೆ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಆದರೆ ಇನ್ನೂ ಕೆಲವು ಬಡಾವಣೆಗಳಲ್ಲಿ ಮಲತಾಯಿ ಧೋರಣೆ ತೋರಿರುವ ಬಗ್ಗೆ ಮತದಾನ ಬಹಿಷ್ಕಾರಕ್ಕೆ ಮತದಾರರು ಮುಂದಾಗಿದ್ದಾರೆ. ಉಳಿದೆಲ್ಲ ಮತದಾರರ ಒತ್ತಾಯದ ಮೇರೆಗೆ ಬಡಾವಣೆಯ ಮುಖಂಡರ ಸಮಾಲೋಚನೆ ನಡೆಸಲು ಇನ್ನೊಂದು ತುರ್ತು ಸಭೆ ನಡೆಸಲಿದೆ ಎಂದು ತಿಳಿದುಬಂದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement