ರೇಲ್ವೆ ಮಾರ್ಗ ನಿರ್ಮಾಣ: ಕರವೇ ವಿಜಯೋತ್ಸವ
ಯಾದಗಿರಿ: ಬ್ರಿಟಿಷ್-ನಿಜಾಮರ ಕಾಲದಿಂದಲೂ ನೆನೆಗುಂದಿ ಬಿದ್ದಿದ ವಾಡಿ-ಗದಗ ರೈಲು ಮಾರ್ಗ ನಿರ್ಮಾಣಕ್ಕೆ ಮುಂಗಡಪತ್ರದಲ್ಲಿ ಹಣ ಬಿಡುಗಡೆ ಮಾಡಿರುವುದನ್ನು ಸ್ವಾಗತಿಸಿ ಕರವೇ ಕಾರ್ಯಕರ್ತರು ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಬುಧವಾರ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಈ ಬಾರಿಯ ಬಜೆಟ್‌ನಲ್ಲಿ ವಾಡಿ, ಯಾದಗಿರಿ, ಶಹಾಪುರ, ಸುರಪುರ ಮಾರ್ಗವಾಗಿ ಗದಗಕ್ಕೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅನುದಾನ ನೀಡಿರುವುದು ಸ್ವಾಗತಾರ್ಹ. ಇದರಿಂದ ಇಲ್ಲಿಯ ವ್ಯಾಪಾರಸ್ಥರಿಗೂ ಮತ್ತು ಪ್ರಯಾಣಿಕರಿಗೂ ತುಂಬಾ ಅನುಕೂಲವಾಗಿದೆ. ಕರವೇ 2005ರಿಂದ ನಿರಂತರ ಹೋರಾಟ ಮಾಡುತ್ತ ಬಂದಿದೆ. ಎಲ್ಲಾ ಸಂಘಟನೆಗಳೂ ಇದಕ್ಕೆ ಸಹಕರಿಸಿವೆ. ಇದನ್ನು ಅರಿತು ಸರ್ಕಾರ ಈ ಮಾರ್ಗ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿರುವುದು ಶ್ಲಾಘನಿಯ ಎಂದರು. ಕೂಡಲೇ ಹಣ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಬಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ದೇವು ಪಾಟೀಲ್, ಸಿದ್ದುರಡ್ಡಿ, ಗೌಡಪ್ಪಕೋರಿ, ರವಿದೇವರಮನಿ, ಕಿರಣ್, ಬಾಪು, ಶರಣು, ಸಂಗನಗೌಡ ಇದ್ದರು.
ಕನ್ನಡ ಸೇನೆ ಸಂಭ್ರಮ: ವಾಡಿ-ಗದಗ ರೈಲು ಮಾರ್ಗ ನಿರ್ಮಾಣಕ್ಕೆ ರೇಲ್ವೆ ಬಜೆಟ್‌ನಲ್ಲಿ ರು. 100 ಕೋಟಿ ಬಿಡುಗಡೆ ಮಾಡಿರುವುದಕ್ಕೆ ಕನ್ನಡ ಸೇನೆ ಕರ್ನಾಟಕ ಕಾರ್ಯಕರ್ತರು ನಗರದ ಸುಭಾಶ್ವಂದ್ರ ವೃತ್ತದಲ್ಲಿ ಬುಧವಾರ ಸಿಹಿ ಹಂಚಿ ಸಂಭ್ರಮಿಸಿದರು.
ರಾಜು ಕುಂಬಾರ, ದಶರಥ, ಮಹೇಶ ಗಣಪರಡ್‌ಡಿ, ಹಣಮಂತ ಕಲಾಲ, ಜಲಾಲ ಪಟೇಲ್, ಶರಣು ಎಸ್, ತಾಯಪ್ಪ ಮಡಿವಾಳಕರ್, ಮಲ್ಲು, ಮಲ್ಲಿಕಾರ್ಜುನ, ಬಸವರಾಜ, ರಾಘು ಕಲಾಲ, ಸಿದ್ದು, ಮಹೇಶ ಇದ್ದರು.