ಶರಣರ ಅನುಭಾವದಿಂದ ಬದುಕು ಪಾವನ: ಶ್ರೀ
ಯಾದಗಿರಿ: ಜಾತ್ರೆಗಳು ಜಾಗೃತಿಯನ್ನು ಮೂಡಿಸುತ್ತವೆ. ನೊಂದ ಮನಸ್ಸುಗಳಿಗೆ ಸಾಂತ್ವನ, ದುಡಿದ ದೇಹಕ್ಕೆ ನೆಮ್ಮದಿಯನ್ನು ನೀಡುತ್ತವೆ. ಈ ಜಾತ್ರೆಯಂತೆ ನಮ್ಮ ಬದುಕಿನ ಜಾತ್ರೆಯನ್ನು ಜೋಪಾನವಾಗಿ ನಡೆಸಿಕೊಂಡು ಹೋಗಬೇಕು ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ ನುಡಿದರು. ತಾಲೂಕಿನ ಚಿಂತನಹಳ್ಳಿ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶರಣರ ಸಂತರ ಶಿವಯೋಗಿಗಳ ಸಂಗದಿಂದ, ಅನುಭಾವದಿಂದ ಬದುಕೆಂಬ ಸುದೀರ್ಘ ಜಾತ್ರೆಯನ್ನು ಮಾಡಬೇಕು. ಶರಣರ ಅನುಭಾವದಿಂದ ಬದುಕು ಪಾವನವಾಗುತ್ತದೆ. ಸಿದ್ದಲಿಂಗೇಶ್ವರ ಯತಿಗಳು ನಡೆದಾಡಿದ ಪಾವನ ಭೂಮಿ ಈ ಚಿಂತನಹಳ್ಳಿ ಗವಿಯು ಕಲ್ಯಾಣ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿನ ಪ್ರವಾಸಿಗರಿಗೆ ಅನ
ುಕೂಲವಾಗುವಂತೆ ಸೌಕರ್ಯಗಳನ್ನು ಸರ್ಕಾರ ಒದಗಿಸಬೇಕೆಂದರು. ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ದಾಸೋಹ ಸೇವೆಗೈದ ಬಸವರಾಜಪ್ಪ ಅವಂಟಿ ಕೊಟ್ಟೂರು ಅವರನ್ನು ಸನ್ಮಾನಿಸಲಾಯಿತು. ನಾಗನಗೌಡ ಚಿಂತನಳ್ಳಿ, ಶಂಬುಲಿಂಗಪ್ಪ ಅರುಣಿ, ವಿಜಯ, ಜಲ್ಲಪ್ಪ ಅಲ್ಲೂರು, ಸೂಗಪ್ಪ, ಗವಿಸ್ವಾಮಿ, ಬಸವರಾಜಪ್ಪ ಬಾಗೋಡಿ ಇದ್ದರು. ಡಾ. ಸುಬಾಷ್ಚಂದ್ರ ನಿರೂಪಿಸಿ, ವಂದಿಸಿದರು.