2013-14 ಬಜೆಟ್ ಮಾತು
ಕೇಂದ್ರ ಸಾರ್ಕರದ ಬಜೆಟ್ ಪಕ್ಕಾ ರೈತ ವಿರೋಧಿ. ಹೈ- ಕ ನೆಲದ ತೊಗರಿ ರೈತರಿಗೆ ಪ್ರೋತ್ಸಾಹ ಧನ ನೀಡುವ ಬೇಡಿಕೆ ಈಡೇರಿಲ್ಲ. ತೊಗರಿ ಸಂಶೋಧನೆಗೆ ವಿಶೇಷ ಪ್ಯಾಕೇಜ್ ರೈತರ ಬೇಡಿಕೆ ಈಡೇರಿಲ್ಲ.
ಟಿ ಮಾರುತಿ ಮಾನ್ಪಡೆ
ರೈತ ಹೋರಾಟಗಾರ
ಬೆಂಗಳೂರು ಮುಂಬೈ ಕಾರಿಡಾರ್ ಯೋಜನೆ ಓಕೆ. ಗ್ರಾಮೀಣ ಪ್ರಗತಿಗೆ ಹೆಚ್ಚಿನ ಬಂಡವಾಳ ಹೂಡುವ ಚಿಂತನೆ ಸ್ವಾಗತಾರ್ಹ. ಆದರೆ ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸಬೇಕಿತ್ತು.
ಟಿ ರಾಘವೇಂದ್ರ ಕುಲ್ಕರ್ಣಿ
ಕೋಗ್ನೂರ್, ವಕೀಲರು
ಜಿಎನ್ಎನ್ಯುಆರ್ಎಂ ಯೋಜನೆಯಡಿಯಲ್ಲಿ ಸಾರಿಗೆ ಬಲವರ್ಧನೆಗೆ ಹೆಚ್ಚಿನ ಹಣ ನೀಡಲಾಗುತ್ತಿದೆ. ರೈತರಿಗೆ ಖಾಸಗಿ ಬ್ಯಾಂಕುಗಳಿಂದಲೂ ಕೂಡ ಸಾಲ ವಿತರಣೆ ಕೈಗೆತ್ತಿಕೊಳ್ಳುವ ಕ್ರಮ ಸ್ವಾಗತಾರ್ಹ. ಬಜೆಟ್ ಜನಪರವಾಗಿದೆ.
ಟಿ ಕೃಷ್ಣಾಜಿ ಕುಲ್ಕರ್ಣಿ, ಉದ್ದಿಮೆದಾರರು
ವ್ಯವಹಾರ ತೆರಿಗೆ ದರವನ್ನು ಕಮ್ಮಿ ಮಾಡಲಾಗಿದೆ. ಹಿಂದುಳಿದ ಪ್ರದೇಶಗಳಿಗಾಗಿ ಸಹಾಯಧನ ಬಂಡವಾಳವನ್ನು 1000 ಕೋಟಿ ಹೆಚ್ಚಿಸಿದ್ದು ಉತ್ತಮ ಲಕ್ಷಣ. ರೈತರ ಪರವಾಗಿರುವ ಅನೇಕ ಕೆಲಸಗಳು ಇನ್ನೂ ಈ ಬಜೆಟ್ ಮಾಡಬಹುದಿತ್ತು.
ಟಿ ಅರುಣ ಪಾಟೀಲ್, ಜೈಕರವೇ
ಕೇಂದ್ರ ಬಜೆಟ್ನಲ್ಲಿ ಗುಲ್ಬರ್ಗ ಸೇರಿದಂತೆ ಹೈ- ಕ ಭಾಗದ ಪ್ರಗತಿಯ ಯಾವ ಸಂಗತಿಗಳು ಕಾಣದೆ ಇರುವುದು ವಿಷಾದನೀಯ. ಬಿಆರ್ಜಿಎಫ್ ಯೋಜನೆ ಅನುದಾನ ಹೆಚ್ಚಿಸಿದೆ. ತೊಗರಿಗೆ ನೆರವು ನೀಡದ್ದು ರೈತರ ದುರಂತ.
ಟಿ ದಯಾಘನ ಧಾರವಾಡಕರ್, ವಕೀಲರು
ಕೇಂದ್ರ ಹಣಕಾಸು ಸಚಿವ ಚಿದಂಬರಂ ಅವರು ಅಭಿವೃದ್ಧಿ ಮುನ್ನೋಟವಿಲ್ಲದ ಬಜೆಟ್ ಮಂಡಿಸಿದ್ದಾರೆ. ಕೂಲಿ ಕಾರ್ಮಿಕರ ಪರವಾದ ಯಾವುದೇ ಅಂಶಗಳನ್ನು ಇದು ಒಳಗೊಂಡಿಲ್ಲ. ಆಹಾರ ಭದ್ರತೆಯತ್ತಲೂ ನೀಡಿಲ್ಲ.
ಟಿ ನಾಗನಗೌಡ ಕಂದಕೂರ, ಜೆಡಿಎಸ್
ಆಶಾದಾಯಕ ಯಾವ ಅಂಶವೂ ಮುಂಗಡ ಪತ್ರದಲ್ಲಿಲ್ಲ. ಇಲ್ಲದೇ ದೇಶದ ಹದಗೆಟ್ಟ ಆರ್ಥಿಕ ಸ್ಥಿತಿ ಸುಧಾರಣೆಗೂ ಕ್ರಮವಿಲ್ಲ. ವಿದೇಶೀ ಬ್ಯಾಂಕುಗಳಲ್ಲಿನ ಭಾರತೀಯರ ಕಪ್ಪು ಹಣವನ್ನು ವಾಪಸ್ ತರುವ ಬಗ್ಗೆ ಪ್ರಸ್ತಾಪವಿಲ್ಲ.
ಟಿ ಬಸವರಾಜ ಬಿಳ್ಹಾರ, ಬಿಜೆಪಿ
ಹಿಂದಿನ ವರ್ಷದ ಯೋಜನೆಗಳೇ ಪುನರಾವರ್ತನೆಯಾಗಿವೆ. ಹಣದುಬ್ಬರ ಇಳಿಕೆಗೆ ಗಮನ ನೀಡಿಲ್ಲ. ಮಹಿಳೆಯರ ರಕ್ಷಣೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ.
ಟಿ ಲಲಿತಾ ಅನಪುರ, ಯಾದಗಿರಿ
ಬೆಲೆ ಏರಿಕೆ ತಡೆಯುವಲ್ಲಿ ಹಣಕಾಸು ಸಚಿವ ಚಿದಂಬರಂ ವಿಫಲರಾಗಿದ್ದಾರೆ. ಇದರಿಂದ ಉಳ್ಳವರು ಮತ್ತು ಬಡವರ ನಡುವಿನ ಅಂತರ ಹೆಚ್ಚಿದೆ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎನ್ನಲು ಈ ಮುಂಗಡ ಪತ್ರವೇ ಸಾಕ್ಷಿಯಾಗಿದೆ.
ಟಿ ಡಾ.ಶರಣಭೂಪಾಲರೆಡ್ಡಿ, ಯಾದಗಿರಿ
ರೈತರು ಹಾಗೂ ಕೃಷಿ ಉತ್ಪನ್ನಗಳ ಬಗ್ಗೆ ಬಜೆಟ್ನಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸುವ ಯಾವ ಅಂಶಗಳೂ ಇಲ್ಲ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ರಸಗೊಬ್ಬರಗಳಿಗೆ ಸಬ್ಸಿಡಿ ಬಗ್ಗೆ ಉಲ್ಲೇಖವೇ ಇಲ್ಲ.
ಟಿ ಮಲ್ಲಿಕಾರ್ಜುನ ಸತ್ಯಂಪೇಟೆ, ರೈತ ಮುಖಂಡರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.