ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಖಾಡದಲ್ಲಿ ಒಟ್ಟು 432 ಅಭ್ಯರ್ಥಿಗಳು

Rashmi Kasaragodu
Updated On : 1 Mar 2013, 10:54 am

ಯಾದಗಿರಿ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಯಾದಗಿರಿ ನಗರಸಭೆ, ಶಹಾಪುರ ಪುರಸಭೆ, ಸುರಪುರ ಪುರಸಭೆ ಹಾಗೂ ಗುರುಮಠಕಲ್ ಪಟ್ಟಣ ಪಂಚಾಯಿತಿಗಳ ಒಟ್ಟು 98 ವಾರ್ಡ್‌ಗಳ ಚುನಾವಣೆಗಾಗಿ ಅಂತಿಮವಾಗಿ 432 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ತಿಳಿಸಿದ್ದಾರೆ. ಯಾದಗಿರಿ ನಗರಸಭೆಯಲ್ಲಿ 147, ಶಹಾಪುರ ಪುರಸಭೆಯಲ್ಲಿ 105, ಸುರಪುರ ಪುರಸಭೆ ವಾರ್ಡ್‌ಗಳಲ್ಲಿ 98 ಹಾಗೂ ಗುರುಮಠಕಲ್ ಪಟ್ಟಣ ಪಂಚಾಯಿತಿ ವಾರ್ಡ್‌ಗಳಿಗೆ 82 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, 432 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣೆ ಕಣದಲ್ಲಿ ಉಳಿದಿದ್ದಾರೆ.
ಕಾಂಗ್ರೆಸ್‌ನ 98 ಅಭ್ಯರ್ಥಿಗಳು, ಬಿಜೆಪಿಯ 70, ಜೆಡಿಎಸ್ 61, ಎನ್‌ಸಿಪಿ 1, ಸ್ವತಂತ್ರರಾಗಿ 202 ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement